Home
ಸುದ್ದಿಜಾಲ

ಗ್ರಾಹಕರಿಗೆ ನಾಲ್ಕು ಮಾದರಿಯಲ್ಲಿ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಲಭ್ಯ!

ದೇಶದ ಡಿಟಿಎಚ್‌ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಇಂಟರ್ನೆಟ್ ಆಧಾರಿತ ಸೇವೆಗಳು ಹೆಚ್ಚು ಆಕರ್ಷಕವಾಗುತ್ತಿವೆ. ಸದ್ಯ ಟಾಟಾಸ್ಕೈ ಸಂಸ್ಥೆಯು ಮೂಂಚುಣಿಯಲ್ಲಿ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಟಾಟಾಸ್ಕೈ ಸಂಸ್ಥೆಯು ಭಿನ್ನ ಸೆಟ್‌ಟಾಪ್‌ ಬಾಕ್ಸ್‌ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಿದ್ದು, ಅವುಗಳು ಭಿನ್ನ ಪ್ರೈಸ್‌ಟ್ಯಾಗ್ ಹಾಗೂ ಭಿನ್ನ ಪ್ರಯೋಜನೆಗಳ್ನು ಪಡೆದಿವೆ.

ಸೆಟ್‌ಅಪ್‌ ಬಾಕ್ಸ್‌

ಹೌದು, ಟಾಟಾಸ್ಕೈ ಕಂಪನಿಯು ನಾಲ್ಕು ಮಾದರಿಯ ಸೆಟ್‌ಅಪ್‌ ಬಾಕ್ಸ್‌ ಆಯ್ಕೆ ಹೊಂದಿದ್ದು, ನೂತನ ಗ್ರಾಹಕರು ಅವುಗಳಲ್ಲಿ ಇಷ್ಟದ ಸೆಟ್‌ಟಾಪ್‌ ಬಾಕ್ಸ್ ಆಯ್ದುಕೊಳ್ಳಬಹುದು. ಅವುಗಳು ಟಾಟಾ ಸ್ಕೈ ಬಿಂಜ್ +, ಟಾಟಾ ಸ್ಕೈ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್, ಟಾಟಾ ಸ್ಕೈ + ಹೆಚ್‌ಡಿ ಸೆಟ್-ಟಾಪ್ ಬಾಕ್ಸ್, ಮತ್ತು ಟಾಟಾ ಸ್ಕೈ ಎಸ್‌ಡಿ ಸೆಟ್-ಟಾಪ್ ಬಾಕ್ಸ್. ಬೇಸ್‌ ವೇರಿಯಂಟ್ ಸೆಟ್‌ಟಾಪ್‌ ಬಾಕ್ಸ್‌ 1,499ರೂ. ಆಗಿದೆ. ಟಾಟಾಸ್ಕೈನ ನಾಲ್ಕು ಮಾಡೆಲ್‌ಗಳ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಆರಂಭಿಕ ಸೆಟ್‌ಅಪ್ ಬಾಕ್ಸ್‌ ಮಾಡೆಲ್ ಆಗಿದೆ. ಈ ಸೆಟ್‌ಅಪ್ ಬಾಕ್ಸ್‌ ಬೆಲೆಯು 1,499ರೂ. ಆಗಿದೆ. ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ವಿವಿಧ ಚಾನೆಲ್ ಲಿಸ್ಟ್‌ ಇದ್ದು, ಗ್ರಾಹಕರು ಅವರಿಷ್ಟದ ಚಾನಲ್‌ ಗುಚ್ಛ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. vivid ಕಲರ್‌ ಸೌಲಭ್ಯ ಪಡೆದಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ. ಆರಂಭಿಕ ಬೆಲೆಯು 1499ರೂ. ಆಗಿದೆ.

ಟಾಟಾ ಸ್ಕೈ + ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾ ಸ್ಕೈ + ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಇದು ಟಾಟಾ ಸ್ಕೈ ನೀಡುವ ಅತ್ಯಂತ ದುಬಾರಿ ಎಸ್‌ಟಿಬಿ ಆಗಿದೆ. ಇದರ ಬೆಲೆ 4,999 ರೂ. ಟಾಟಾ ಸ್ಕೈ + ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಮತ್ತು ಟಾಟಾ ಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಇದು 1080i ರೆಸಲ್ಯೂಶನ್ ವೀಡಿಯೊ ಬೆಂಬಲ ಮತ್ತು ಡಾಲ್ಬಿ ಡಿಜಿಟಲ್ ಸರೌಂಡ್ ಸೌಂಡ್ ಬೆಂಬಲದೊಂದಿಗೆ ಬರುತ್ತದೆ. ಆದರೆ ಎರಡು ಎಸ್‌ಟಿಬಿಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಟಾಟಾ ಸ್ಕೈ + ಎಚ್‌ಡಿ ಸೆಟ್-ಟಾಪ್ ಬಾಕ್ಸ್ ಒಂದೇ ಸಮಯದಲ್ಲಿ ಮೂರು ವಿಭಿನ್ನ ಚಾನಲ್‌ಗಳನ್ನು ರೆಕಾರ್ಡ್ ಮಾಡಬಹುದು.

ಟಾಟಾಸ್ಕೈ ಬಿಂಜ್ ಪ್ಲಸ್‌

ಟಾಟಾಸ್ಕೈ ಬಿಂಜ್ ಪ್ಲಸ್‌

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

Best Mobiles in India

English summary
Tata Sky is offering four STBs — Tata Sky Binge+, Tata Sky HD Set-Top Box, Tata Sky+ HD Set-Top Box, and Tata Sky SD Set-Top Box.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+