ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹೊಸ ತಂತ್ರಜ್ಞಾನ: ಬರಲಿದೆ ಹೊಸ ಮಾದರಿಯ ಟ್ಯಾಕ್ಸಿ..!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯಲಿದೆ ಎನ್ನಲಾಗಿದೆ. ಈಗಾಗಲೇ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ ಆದರೂ ಸಹ ಸಂಚಾರ ದಟ್ಟನೆ ಕಡಿಮೆಯಾಗಿಲ್ಲ. ಇದಕ್ಕೆ ಪರಿಹಾರವನ್ನು ಕಂಡು ಹಿಡಿಯುವ ಸಲುವಾಗಿ ಹೊಸದೊಂದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬೆಂಗಳೂರು ಮುಂದಾಗಲಿದೆ ಎನ್ನಲಾಗಿದೆ.

ಓದಿರಿ: ಇನ್‌ಟೆಲ್‌ನಿಂದ 5G ಮೋಡೆಮ್ ಬಿಡುಗಡೆ: ಭವಿಷ್ಯದ ತಂತ್ರಜ್ಞಾನ..!
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಇದಕ್ಕಾಗಿ ಪಾಡ್ ಟ್ಯಾಕ್ಸಿ ಸದ್ಯದಲ್ಲೇ ಬೆಂಗಳೂರು ನಗರದಲ್ಲಿ ಸಂಚರಿಸಲಿವೆ ಎನ್ನಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ ಯೋಜನೆಯ ಸಾಧಕ ಬಾಧಕಗಳ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸಿದೆ. ಶೀಘ್ರವೇ ಪಾಡ್ ಟ್ಯಾಕ್ಸಿ ಸೇವೆಯನ್ನು ಸಾಮಾನ್ಯರು ಬಳಸುವಂತಾಗಲಿದೆ.

ಪಾಡ್ ಟ್ಯಾಕ್ಸಿ ಯೋಜನೆ ಶೀಘ್ರವೇ ಜಾರಿ:
ಪಾಡ್ ಟ್ಯಾಕ್ಸಿ ಯೋಜನೆಯ ಆರಂಭಕ್ಕೆ ಅಗತ್ಯವಿದ್ದ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿ ವಿಸ್ತೃತ ವರದಿಯನ್ನು ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಜಾಗತಿಕ ಟೆಂಡರ್ ಕರೆದಿದ್ದು, ಸದ್ಯದಲ್ಲೆ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎನ್ನಲಾಗಿದೆ.

ಸಿಂಗಾಪುರ-ಅಮೆರಿಕಾದ ಪೈಪೋಟಿ:
ಸಿಂಗಾಪುರದ ಅಲ್ಟ್ರಾ ಫೈರ್‌ವುಡ್ ಗ್ರೀನ್ ಟ್ರಾನ್ಸ್‌ಫೋರ್ಟ್ ಪ್ರೈವೆಟ್ ಲಿಮಿಟೆಡ್, ಅಮೆರಿಕದ ಸ್ಕೈ ಟ್ರ್ಯಾನ್ ಏಷಿಯಾ, ಜೆಪಾಡ್ಸ್ ಇಂಕ್ ಕಂಪೆನಿಗಳು ಆಸಕ್ತಿ ತೋರಿದ್ದು ಇವುಗಳ ನಡುವೆ ಈ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.

100 ಕಿ.ಮೀ ವೇಗದ ಸಾರಿಗೆ:
ಪಾಡ್ ಟ್ಯಾಕ್ಸಿ ಪ್ರತಿ ಕಿ.ಮೀ ಮಾರ್ಗ ನಿರ್ಮಾಣಕ್ಕೆ ಅಂದಾಜು 50 ಕೋಟಿ ವೆಚ್ಚವಾಗಲಿದೆ ಎನ್ನಲಾಗಿದೆ. ಈ ಯೋಜನೆ 2019ಕ್ಕೆ ಪೂರ್ಣಗೊಳ್ಳಲಿದ್ದು, 100 ಕಿ.ಮೀ ವೇಗದಲ್ಲಿ ಸಂಚರಿಸುವ ಈ ಟ್ಯಾಕ್ಸಿಗಳಲ್ಲಿ ಗಂಟೆಗೆ 15 ಸಾವಿರ ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ.

ಪಾಡ್ ಟ್ಯಾಕ್ಸಿ ಮಾರ್ಗ:
ಪಾಡ್ ಟ್ಯಾಕ್ಸಿ ಮಾರ್ಗಗಳನ್ನು ನೋಡುವುದಾದರೆ ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತ - ಲೀಲಾ ಪ್ಯಾಲೇಸ್ 4km, ಲೀಲಾ ಪ್ಯಾಲೇಸ್ - ಮಾರತ್‌ಹಳ್ಳಿ ಜಂಕ್ಷನ್ 6km, ಮಾರತ್‌ಹಳ್ಳಿ ಜಂಕ್ಷನ್ - ಇಪಿಐಪಿ ಗ್ರಾಫೈಟ್ ಇಂಡಿಯಾ ರಸ್ತೆ 6.50km, ಟ್ರಿನಿಟಿ ಮೆಟ್ರೊ ನಿಲ್ದಾಣ - ಕೋರಮಂಗಲ ಎಚ್‌ಎಸ್‌ಆರ್ ಲೇಔಟ್ 7.10km, ಜಯನಗರ 5ನೇ ಬ್ಲಾಕ್ - ಜೆ.ಪಿ.ನಗರ 6ನೇ ಹಂತ.


Click it and Unblock the Notifications