ಇಂಟೆಲ್ ನಿಂದ 5G ಮೋಡೆಮ್ ಬಿಡುಗಡೆ: ಭವಿಷ್ಯದ ತಂತ್ರಜ್ಞಾನ..!

|

ಕಂಪ್ಯೂಟರ್ ಪ್ರೋಸೆಸರ್ ತಯಾರಿಕೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಇಂಟೆಲ್ ಈ ಬಾರಿ ಸ್ಮಾರ್ಟ್‌ಫೋನ್ ಮೋಡೆಮ್ ಗಳನ್ನು ತಯಾರಿಸಲು ಮುಂದಾಗಿದೆ. ಹೊಸದಾಗಿ 5G ಮತ್ತು 4G ಮೋಡೆಮ್ ಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಿಲು ಮುಂದಾಗಿದೆ.

 ಇಂಟೆಲ್ ನಿಂದ 5G ಮೋಡೆಮ್ ಬಿಡುಗಡೆ: ಭವಿಷ್ಯದ ತಂತ್ರಜ್ಞಾನ..!

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ನಂಬಲಾದ ಬೆಲೆಗೆ TV, ಫ್ರಿಡ್ಜ್, ವಾಷಿಂಗ್ ಮಿಷಿನ್, AC ಮಾರಾಟ..!

ಈಗಾಗಲೇ ಮಾರುಕಟ್ಟೆಯಲ್ಲಿ 5G ನೆಟ್‌ವರ್ಕ್ ಕುರಿತಂತೆ ಚರ್ಚೆಗಳು ಮತ್ತು ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿಯೇ 5G ಮೋಡೆಮ್ ಬಿಡುಗಡೆ ಮಾಡಿರುವ ಇಂಟೆಲ್ ಹೊಸದೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಿದೆ ಎನ್ನಲಾಗಿದೆ.

ವೇಗದ ಮೋಡೆಮ್:

ವೇಗದ ಮೋಡೆಮ್:

ಈಗಾಗಲೇ 5G ವೇಗದ ಬಗ್ಗೆ ಮಾತು ಕತೆ ನಡೆಯುತ್ತಿದ್ದು, ಇಂಟೆಲ್ 5G ಮೋಡೆಮ್ 6GHz ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಅತೀ ವೇಗದ ಕಾರ್ಯಚರಣೆಯನ್ನು ಈ 5G ಮೋಡೆಮ್ ನಲ್ಲಿ ಕಾಣುವ ಸಾಧ್ಯತೆ ಇದೆ .

ಭವಿಷ್ಯದ ತಂತ್ರಜ್ಞಾನ:

ಭವಿಷ್ಯದ ತಂತ್ರಜ್ಞಾನ:

ಇನ್ನು ಮೂರರಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 5G ಸೇವೆಯೂ ಆರಂಭವಾಗಲಿದೆ. ಸದ್ಯ ಬಿಡುಗಡೆಗೊಂಡಿರುವ 5G ಮೋಡೆಮ್ ಭವಿಷ್ಯದ ತಂತ್ರಜ್ಞಾನವನ್ನು ಮೈ ಗೂಡಿಸಿಕೊಂಡಿದೆ ಎನ್ನಲಾಗಿದೆ. ಈ ಮೋಡೆಮ್ ಸಹಾಯದಿಂದ ವೇಗದ ಆಪ್‌ಲೋಡ್ ಮತ್ತು ಡೌನ್‌ಲೊಡ್ ಸ್ಮಾರ್ಟ್‌ಫೋನ್ ನಲ್ಲಿ ಸಾಧ್ಯವಿದೆ.

ಅತೀ ಸಣ್ಣ ಗಾತ್ರ:

ಅತೀ ಸಣ್ಣ ಗಾತ್ರ:

ಇನ್‌ಟೆಲ್ 5G ಮೋಡೆಮ್ ಗಾತ್ರದಲ್ಲಿ ತೀರಾ ಸಣ್ಣದಾಗಿದೆ ಎನ್ನಲಾಗಿದೆ. ಅಲ್ಲದೇ ಇದು ವೇಗದ ಕಡಿಮೆ ಬ್ಯಾಂಡ್ ವಿಡ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ಇದರಿಂದ ಬಳಕೆದಾರರು ನೆಟ್‌ವರ್ಕ್ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುವುದಿಲ್ಲ.

4G ಮೋಡೆಮ್ ಸಹ ಇದೆ:

4G ಮೋಡೆಮ್ ಸಹ ಇದೆ:

5G ಮೋಡೆಮ್ ನೊಂದಿಗೆ ಇಂಟೆಲ್ 4G LTE ಮೋಡೆಮ್ ಅನ್ನು ಸಹ ಬಿಡುಗಡೆ ಮಾಡಿದೆ . ಇದು ವಿವಿಧ ಮಾದರಿಯ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದೆ.

4G ಮೋಡೆಮ್ ಸ್ನಾಪ್‌ಡ್ರಾಗನ್‌ ಗಿಂತಲೂ ವೇಗ:

4G ಮೋಡೆಮ್ ಸ್ನಾಪ್‌ಡ್ರಾಗನ್‌ ಗಿಂತಲೂ ವೇಗ:

ಇದು ಸದ್ಯ ಮಾರುಕಟ್ಟೆಯಲ್ಲಿರುವ ಸ್ನಾಪ್‌ಡ್ರಾಗನ್ 835 ಚಿಪ್‌ ಸೆಟ್‌ 1.2Gbps ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಆದರೆ ಇನ್‌ಟೆಲ್ ಮೋಡೆಮ್ 1.6Gbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಮಾರುಕಟ್ಟೆಯಲ್ಲಿಯೇ ಅತೀ ವೇಗದ ಮೋಡೆಮ್ ಎನ್ನುವ ಖ್ಯಾತಿಗೆ ಪಾತ್ರಗಲಿದೆ.

Best Mobiles in India

English summary
Intel Announces New 5G And 4G LTE Modems, Boasts High Speeds. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X