TCL ದೀಪಾವಳಿ ಸೇಲ್: ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ರಿಯಾಯಿತಿ, 2 ಕೋಟಿ ರೂ. ಬಹುಮಾನ
ಟಿಸಿಎಲ್ (TCL) ಇದೀಗ ತನ್ನ ಗ್ರಾಹಕರಿಗೆ ವಿಶೇಷ ದೀಪಾವಳಿ ಕೊಡುಗೆಯನ್ನು ಘೋಷಣೆ ಮಾಡಿದೆ. ಈ ಮೂಲಕ ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್‌ಗಳನ್ನು ಖರೀದಿ ಮಾಡುವ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅದರಲ್ಲೂ ಈ ವಿಶೇಷ ಸೇಲ್‌ನಲ್ಲಿ QLED, ಮಿನಿ ಎಲ್‌ಇಡಿ ಟಿವಿಗೆ ಇನ್ನೂ ಹೆಚ್ಚಿನ ಆಫರ್ ಇದೆ.
ಹೌದು, ಟಿಸಿಎಲ್ ವಿಶೇಷ ದೀಪಾವಳಿ ಕೊಡುಗೆಯನ್ನು (TCL Special Diwali Offer) ಘೋಷಣೆ ಮಾಡಿದ್ದು, ನೀವು ಟಿಸಿಎಲ್ ಇಮ್ಮರ್ಸ್ ಇನ್ ಬ್ರಿಲಿಯನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈ ಮೂಲಕ ಬರೋಬ್ಬರಿ ಎರಡು ಕೋಟಿ ವರೆಗೆ ಬಹುಮಾನ ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ಆಫರ್ ಇದೆ?, ಬ್ಯಾಂಕ್ ಆಫರ್‌ನಲ್ಲಿ ಎಷ್ಟೆಲ್ಲಾ ಲಾಭ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಟಿಸಿಎಲ್ ದೀಪಾವಳಿ ಸೇಲ್: ಈ ದೀಪಾವಳಿ ಸೇಲ್ ನಿಮಗೆ 65 ಇಂಚಿನ ಮತ್ತು ಅದಕ್ಕೂ ಹೆಚ್ಚಿನ ಇಂಚಿನ ಸ್ಮಾರ್ಟ್‌ಟಿವಿಗಳಾದ QLED ಹಾಗೂ ಮಿನಿ ಎಲ್‌ಇಡಿ ಟಿವಿಗಳನ್ನು ಅತ್ಯುತ್ತಮವಾದ ಆಫರ್ ಬೆಲೆಗೆ ಲಭ್ಯವಾಗಿಸಿದೆ. ಈ ವೇಳೆ ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಪರ್ಧೆಗೆ ಎಂಟ್ರಿ ನೀಡಬಹುದಾಗಿದೆ. ಇದರಿಂದ 2 ಕೋಟಿ ರೂ. ಬಹುಮಾನ ಪಡೆದುಕೊಳ್ಳಬಹುದಾಗಿದೆ.
ಈ ವಿಶೇಷ ಸೇಲ್‌ನಲ್ಲಿ ಟಿಸಿಎಲ್‌ನ QLED/ ಮಿನಿಎಲ್‌ಇಡಿ ಟಿವಿಗಳು ಅಥವಾ 65 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಇತರ ಮಾದರಿಗಳನ್ನು ಖರೀದಿಸಿದಾಗ, 'ಇಮ್ಮರ್ಸ್ ಇನ್ ಬ್ರಿಲಿಯನ್ಸ್' ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳಬಹುದಾಗಿದೆ. ಈ ಸ್ಪರ್ಧೆಯಲ್ಲಿ QLED, 4K UHD ಮತ್ತು HDR ಸ್ಮಾರ್ಟ್‌ಟಿವಿ, 2K HDR ಟಿವಿಗಳು ಮತ್ತು ಸೌಂಡ್‌ಬಾರ್‌ಗಳು ಸೇರಿದಂತೆ ವಿವಿಧ ಉಡುಗೊರೆಗಳನ್ನು ಗೆಲ್ಲಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಯಾವೆಲ್ಲಾ ಬ್ಯಾಂಕ್ ಕಾರ್ಡ್‌ಗಳಿಗೆ ಆಫರ್ ಇದೆ?: ಐಸಿಐಸಿಐ, ಎಸ್‌ಬಿಐ, ಹೆಚ್‌ಡಿಎಫ್‌ಸಿ, ಕೊಟಕ್,ಎಯು, ಡಿಬಿಎಸ್, ಬ್ಯಾಂಕ್ ಆಫ್ ಬರೋಡ. ಫೆಡರಲ್ ಐಡಿಎಫ್‌ಸಿ ಮತ್ತು ಯೆಸ್ ಬ್ಯಾಂಕ್‌ನಿಂದ ಆಯ್ದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ನೀವು ಈ ಕೊಡುಗೆಯನ್ನು ಪಡೆದುಕೊಳ್ಳಬಹುದು ಎಂದು ಟಿಸಿಎಲ್ ಮಾಹಿತಿ ಮಾಹಿತಿ ನೀಡಿದೆ. ಇದರಲ್ಲಿ ಕ್ಯಾಶ್ ಬ್ಯಾಕ್ ಸಹ ಲಭ್ಯ.

ಈ ವಿಶೇಷ ಸೇಲ್ ನವೆಂಬರ್ ಅಂತ್ಯದವರೆಗೆ ಮುಂದುವರಿಯಲಿದ್ದು, ಆಫ್‌ಲೈನ್ ರಿಟೇಲ್ ಸ್ಟೋರ್‌ಗಳು, ಬ್ರ್ಯಾಂಡ್ ಸ್ಟೋರ್‌ಗಳು ಮತ್ತು ಡೀಲರ್‌ಶಿಪ್ ಸ್ಟೋರ್‌ಗಳನ್ನು ಒಳಗೊಂಡಂತೆ ಟಿಸಿಎಲ್‌ನ ಮಾರಾಟ ಚಾನಲ್‌ಗಳ ಮೂಲಕ ಭಾರತದಾದ್ಯಂತ ಗ್ರಾಹಕರಿಗೆ ಮುಕ್ತವಾಗಿದೆ. ಇದರಿಂದ ನಿಮ್ಮ ಹತ್ತಿರದ ಯಾವುದೇ ರಿಟೇಲ್ ಸ್ಟೋರ್‌ನಲ್ಲೂ ಸಹ ಈ ವಿಶೇಷ ಡಿವೈಸ್‌ಗಳನ್ನು ಖರೀದಿ ಮಾಡಬಹುದು.
ಈ ಸಂಬಂಧ ಟಿಸಿಎಲ್ ಇಂಡಿಯಾದ ಜನರಲ್ ಮ್ಯಾನೇಜರ್ ಫಿಲಿಪ್ ಕ್ಸಿಯಾ ಮಾತನಾಡಿ, ವೈವಿಧ್ಯತೆಯ ಸಾರವನ್ನು ಅಳವಡಿಸಿಕೊಳ್ಳುವ ದೀಪಾವಳಿ ನಮಗೆ ಅದೃಷ್ಟದ ಸಂದರ್ಭವಾಗಿದೆ. ಈ ಹಬ್ಬದ ಋತುವಿನಲ್ಲಿ ನಮ್ಮ ಗ್ರಾಹಕರಿಗೆ ಆಕರ್ಷಕ ಅನುಭವಗಳನ್ನು ಮತ್ತು ಆಕರ್ಷಕ ಕೊಡುಗೆಗಳನ್ನು ನೀಡುವುದು ನಮ್ಮ ಬದ್ಧತೆಯಾಗಿದೆ. ಈ ದೀಪಾವಳಿ ಋತುವಿನಲ್ಲಿ ಸಕಾರಾತ್ಮಕತೆಯನ್ನು ಹರಡುವ ಗುರಿಯನ್ನು ಹೊಂದಲಾಗಿದ್ದು, ಅದ್ಭುತ ಬೆಲೆಯಲ್ಲಿ ಉನ್ನತ ದರ್ಜೆಯ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.
ಟಿಸಿಎಲ್ 65" C645 4K QLED ಸ್ಮಾರ್ಟ್‌ಟಿವಿಯನ್ನು ನೀವು 60,490 ರೂ.ಗಳಲ್ಲಿ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 166,990 ರೂ.ಗಳಾಗಿದ್ದು, 106,500 ರೂ.ಗಳನ್ನು ಉಳಿಸಬಹುದಾಗಿದೆ. ಈ ಟಿವಿ 120Hz ರಿಫ್ರೆಶ್ ರೆಟ್ ಆಯ್ಕೆಯೊಂದಿಗೆ ತಲ್ಲೀನಗೊಳಿಸುವ ದೃಶ್ಯ ಮತ್ತು ಆಡಿಯೊ ಅನುಭವವನ್ನು ನೀಡಲಿದೆ. ಹಾಗೆಯೇ ಉನ್ನತ ವೀಕ್ಷಣೆಯ ಅನುಭವವನ್ನು ಪಡೆಯಲು HDR 10+ ಸೌಲಭ್ಯ ನೀಡಲಾಗಿದ್ದು, ಗೂಗಲ್‌ಟಿವಿಯೊಂದಿಗೆ ಈ ಟಿವಿ ಕಾಣಿಸಿಕೊಂಡಿದೆ.

ಟಿಸಿಎಲ್ TS8111 2.1 CH ಡಾಲ್ಬಿ ಅಟ್ಮಾಸ್ ಸೌಂಡ್‌ಬಾರ್ 260W ಮ್ಯಾಕ್ಸ್ ಆಡಿಯೊ ಪವರ್ ಅನ್ನು ನೀವು 13,990ರೂ.ಗಳಿಗೆ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 23,990ರೂ.ಗಳಾಗಿದೆ. ಈ ಸೌಂಡ್‌ಬಾರ್ ಬಹು ಆಯಾಮದ ಧ್ವನಿ ಅನುಭವದೊಂದಿಗೆ ತಲ್ಲೀನಗೊಳಿಸುವ, ಹಗೂ ನೈಜ ಧ್ವನಿಯನ್ನು ಆನಂದಿಸಲು ಡಾಲ್ಬಿ ಅಟ್ಮಾಸ್ ಆಯ್ಕೆ ಪಡೆದುಕೊಂಡಿದ್ದು, 4K, ಹೆಚ್‌ಡಿಆರ್ ಮತ್ತು ಡಾಲ್ಬಿ ವಿಷನ್ ನಂತ ಫೀಚರ್ಸ್ ಪಡೆದುಕೊಂಡಿದೆ.


Click it and Unblock the Notifications








