TCL ನಿಂದ ಎರಡು ಸ್ಮಾರ್ಟ್‌ಟಿವಿ ಘೋಷಣೆ; ಏನೆಲ್ಲಾ ಫೀಚರ್ಸ್ ಇವೆ, ಬೆಲೆ ಎಷ್ಟು?
ಟಿಸಿಎಲ್ (TCL) ಸ್ಮಾರ್ಟ್ ಡಿವೈಸ್‌ಗಳು ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ಟಿಸಿಎಲ್ ಹೊಸ ರೀತಿಯ ಎರಡು ಸ್ಮಾರ್ಟ್‌ಟಿವಿಗಳನ್ನು (Smart TV) ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು ಫ್ರೀಸಿಂಕ್ ಪೀಚರ್ಸ್ ಹಾಗೂ 120Hz ಸೌಲಭ್ಯ ಪಡೆದುಕೊಂಡಿವೆ.
ಹೌದು, ಟಿಸಿಎಲ್ ಇಂಡಿಯಾ C755 ಕ್ಯೂಡಿ ಮಿನಿ ಎಲ್‌ಇಡಿ 4K ಟಿವಿ ಮತ್ತು P745 4K ಯುಹೆಚ್‌ಡಿ ಸ್ಮಾರ್ಟ್‌ಟಿವಿಗಳನ್ನು ಘೋಷಣೆ ಮಾಡಿದೆ(C755 QD Mini LED 4K TVs and P745 4K UHD TVs). ಈ ಸ್ಮಾರ್ಟ್‌ಟಿಗಳು 98 ಇಂಚುಗಳಷ್ಟು ಗಾತ್ರವನ್ನು ಹೊಂದಿರಲಿದ್ದು, C755 ಕ್ಯೂಡಿ ಮಿನಿ ಎಲ್‌ಇಡಿ 4K AMD ಫ್ರೀಸಿಂಕ್ ಪ್ರೀಮಿಯಂ ಪ್ರೊ, ಡಾಲ್ಬಿ ವಿಷನ್ ಐಕ್ಯೂ ಸೇರಿದಂತೆ ಅನೇಕ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ ಬನ್ನಿ.

ಟಿಸಿಎಲ್ ಇಂಡಿಯಾ C755 ಕ್ಯೂಡಿ ಮಿನಿ ಎಲ್‌ಇಡಿ 4K ಫೀಚರ್ಸ್: ಈ ಸ್ಮಾರ್ಟ್‌ಟಿವಿ 50, 55, 65, 75, 85 ಹಾಗೂ 98 ಇಂಚಿನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಸ್ಲಿಮ್ ಮತ್ತು ಯುನಿ-ಬಾಡಿ ವಿನ್ಯಾಸ ಪಡೆದುಕೊಂಡಿದ್ದು, ಡಿಸ್‌ಪ್ಲೇ ಮಾತ್ರವಲ್ಲದೆ ಟಿವಿ ಸಹ ಆಕರ್ಷಕವಾಗಿದೆ. ಈ ಸ್ಮಾರ್ಟ್‌ಟಿವಿ 3840×2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 144Hz VRR ಹಾಗೂ 240Hz DLG ಫೀಚರ್ಸ್ ಪಡೆದುಕೊಂಡಿದೆ.
ಇದರೊಂದಿಗೆ 6000:1 ಕಾಂಟ್ರಾಸ್ಟ್ ಅನುಪಾತ, 16:09 ಆಕಾರ ಅನುಪಾತ, 550 ನಿಟ್ಸ್ ಹೊಳಪು ಆಯ್ಕೆ ಹಾಗೂ 96% ಡಿಸಿಐ-P3 ನೊಂದಿಗೆ ಡಾಲ್ಬಿ ವಿಷನ್ ಐಕ್ಯೂ ಹೆಚ್‌ಎಲ್‌ಜಿ, ಹೆಚ್‌ಡಿಆರ್10+ ಮೂಲಕ ಸ್ಮಾರ್ಟ್‌ಟಿವಿ ವೀಕ್ಷಕರು ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ AiPQ ಪ್ರೊಸೆಸರ್ 3.0 ಬಲ ಪಡೆದಿದ್ದು, ಇದರಿಂದ ಉತ್ತಮವಾದ ಸ್ಟ್ರೀಮಿಂಗ್ ಅನುಭವ ಸಿಗಲಿದೆ.
ಉಳಿದಂತೆ ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಜೊತೆಗೆ ಗೂಗಲ್ ಟಿವಿ ಆಯ್ಕೆಯನ್ನು ಬೆಂಬಲಿಸಲಿದೆ. ಅದರಲ್ಲೂ 10W+10W ನ ಎರಡು ಸ್ಪೀಕರ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರು ಡಾಲ್ಬಿ ಅಟ್ಮಾಸ್, ಡಿಟಿಎಸ್-ಹೆಚ್‌ಡಿ+ಡಿಟಿಎಸ್ ವರ್ಚುವಲ್ ಎಕ್ಸ್, 2.1 ಚಾನೆಲ್ ಅನುಭವ ಪಡೆದುಕೊಳ್ಳಬಹುದಾಗಿದೆ. ಇದರೊಟ್ಟಿಗೆ ಗೇಮ್ ಮಾಸ್ಟರ್ 2.0, ಮಿರಾಕಾಸ್ಟ್, ವೀಡಿಯೊ ಚಾಟ್ ಮತ್ತು ತ್ವರಿತ ಸೆಟ್ಟಿಂಗ್ ಆಯ್ಕೆ ಇದರಲ್ಲಿದೆ.
ಕೊನೆಯದಾಗಿ ಈ ಸ್ಮಾರ್ಟ್‌ಟಿವಿ ಬ್ಲೂಟೂತ್ ಆವೃತ್ತಿ v5.2, ವೈ-ಫೈ 6, ಎಎಮ್‌ಡಿ ಫ್ರೀಸಿಂಕ್ ಪ್ರೀಮಿಯಂ ಪ್ರೊ, ಹೆಚ್‌ಡಿಎಮ್ 1.4 ಹಾಗೂ ಹೆಚ್‌ಡಿಎಮ್‌ಐ I2.0 & ಹೆಚ್‌ಡಿಎಮ್‌ಐ 2.1, ಹೆಚ್‌ಡಿಸಿಪಿ1.4 & ಹೆಚ್‌ಡಿಸಿಪಿ 2.2 ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ವಾಲ್-ಮೌಂಟಿಂಗ್ ಪ್ರಯೋಜನ ತುಂಬಾ ಸರಳವಾಗಿದೆ.
ಟಿಸಿಎಲ್ P745 4K ಯುಹೆಚ್‌ಡಿ ಸ್ಮಾರ್ಟ್‌ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ 43, 50, 55, 65, 75 ಹಾಗೂ 85 ಇಂಚಿನ ವೇರಿಯಂಟ್‌ನಲ್ಲಿ ಲಭ್ಯ ಇದೆ. ಈ ಟಿವಿ ಮೆಟಾಲಿಕ್ ಬೆಜೆಲ್-ಲೆಸ್ ವಿನ್ಯಾಸ ಪಡೆದುಕೊಂಡಿದ್ದು, ಫ್ಲಾಟ್ ಮತ್ತು ಎಲ್‌ಸಿಡಿ ಡಿಸ್‌ಪ್ಲೇ ಹಾಗೂ DLED ಬ್ಯಾಕ್‌ಲೈಟ್ ಆಯ್ಕೆ ಹೊಂದಿದೆ. ಇದರೊಂದಿಗೆ 3840×2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದೆ.
ಉಳಿದಂತೆ ಈ ಸ್ಮಾರ್ಟ್‌ಟಿವಿ 144Hz VRR +240Hz DLG ಸೌಲಭ್ಯ, 6000:1 ಕಾಂಟ್ರಾಸ್ಟ್ ಅನುಪಾತ, 16:9 ಆಕಾರ ಅನುಪಾತ, 450 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಮತ್ತು 95% DCI-P3 ನಲ್ಲಿ ಈ ಸ್ಮಾರ್ಟ್‌ಟಿವಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಡಾಲ್ಬಿ ವಿಷನ್ ಹೆಚ್‌ಡಿಆರ್ 10+ ಮೂಲಕ ವೀಕ್ಷಣೆಯಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದು.
ಇನ್ನು AiPQ ಪ್ರೊಸೆಸರ್ 3.0 ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಜೊತೆಗೆ ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಹಾಗೆಯೇ 10W+10W ಸ್ಪೀಕರ್, ಇಂಟಿಗ್ರೇಟೆಡ್ ಸ್ಪೀಕರ್ ಬಾಕ್ಸ್ ಆಯ್ಕೆ ಇದ್ದು, ಡಾಲ್ಬಿ ಅಟ್ಮಾಸ್, ಡಿಟಿಎಸ್ ಎಕ್ಸ್, 2.1 ಚಾನೆಲ್ ಆಡಿಯೋ ಬೆಂಬಲ ಈ ಟಿವಿಯಲ್ಲಿದೆ.

ಜೊತೆಗೆ ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್, ಗೇಮ್ ಮಾಸ್ಟರ್ 2.0, ಮಿರಾಕಾಸ್ಟ್, ವಿಡಿಯೋ ಚಾಟ್ ಮತ್ತು ತ್ವರಿತ ಸೆಟ್ಟಿಂಗ್‌ಗಳು ಆಯ್ಕೆಯನ್ನು ಈ ಟಿವಿ ಹೊಂದಿದೆ. ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಈ ಸ್ಮಾರ್ಟ್‌ಟಿವಿ ಬ್ಲೂಟೂತ್ ಆವೃತ್ತಿ v5.0, ವೈ-ಫೈ 5, ಮೂರು ಹೆಚ್‌ಡಿಎಮ್‌ಐ ಪೋರ್ಟ್, ಎರಡು ಹೆಚ್‌ಡಿಸಿಪಿ ಪೋರ್ಟ್ ಮೂಲಕ ವಿವಿಧ ರೀತಿಯಲ್ಲಿ ಕನೆಕ್ಟಿವಿಟಿ ಆಯ್ಕೆ ನೀಡಲಿದೆ.
ಟಿಸಿಎಲ್ ಸ್ಮಾರ್ಟ್‌ಟಿವಿಗಳ ಬೆಲೆ ಹಾಗೂ ಲಭ್ಯತೆ: ಟಿಸಿಎಲ್ C755 ಕ್ಯೂಡಿ ಮಿನಿ ಎಲ್‌ಇಡಿ 89,990ರೂ.ಗಳ ಬೆಲೆಯಿಂದ ಆರಂಭ ಆಗಲಿದ್ದು, 499,990ರೂ.ಗಳ ವರೆಗೆ ಬೆಲೆ ಪಡೆದುಕೊಂಡಿದೆ. ಹಾಗೆಯೇ P745 ವೇರಿಯಂಟ್ ಟಿವಿ ಬೆಲೆ 3,09,990ರೂ.ಗಳಾಗಿದೆ. ಈ ಸ್ಮಾರ್ಟ್‌ಟಿವಿಗಳನ್ನು ಚಿಲ್ಲರೆ ಅಂಗಡಿಗಳು ಹಾಗೂ ಬ್ರ್ಯಾಂಡ್ ಶೋರೂಮ್‌ಗಳು ಮತ್ತು ಅಧಿಕೃತ ಡೀಲರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








