TCLನಿಂದ ಭಿನ್ನ ಬೆಲೆಯಲ್ಲಿ ನೂತನ ಹೆಡ್‌ಫೋನ್‌ಗಳ ಬಿಡುಗಡೆ!

|

ಟಿಸಿಎಲ್ ಕಂಪನಿಯು ಭಾರತದಲ್ಲಿ ಹೊಸದಾಗಿ ವಾಯರ್ಡ್‌ ಮತ್ತು ವಾಯರ್‌ಲೆಸ್‌ ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಸರಣಿಯು ಮೂರು ವಾಯರ್‌ಲೆಸ್‌ ನೆಕ್‌ಬ್ಯಾಂಡ್ ಶೈಲಿಯ ಇನ್-ಇಯರ್ ಹೆಡ್‌ಫೋನ್‌ಗಳನ್ನು ಒಳಗೊಂಡಿದೆ. ಹಾಗೆಯೇ ವಾಯರ್ಡ್‌ ಓವರ್-ದಿ-ಇಯರ್ ಹೆಡ್‌ಫೋನ್‌ಗಳು ಹಾಗೂ ANC ಹೆಡ್‌ಫೋನ್‌ಗಳನ್ನು ಸಹ ಅನಾವರಣ ಮಾಡಿದೆ.

ನೆಕ್‌ಬ್ಯಾಂಡ್‌

ಹೌದು, ಟಿಸಿಎಲ್‌ ಕಂಪನಿಯು ನೂತನವಾಗಿ TCL SOCL200BT, TCL ACTV100BT ಮತ್ತು TCL ELIT200NC ಹೆಸರಿನ ನೆಕ್‌ಬ್ಯಾಂಡ್‌ ಮಾದರಿಯ ಹೆಡ್‌ಫೋನ್‌ಗಳನ್ನು ಪರಿಚಯಿಸಿದೆ. ಇದರೊಂದಿಗೆ ನಾಲ್ಕು ವಾಯರ್ಡ್‌ ಹೆಡ್‌ಫೋನ್‌ ಲಾಂಚ್ ಮಾಡಿದ್ದು, ಅವುಗಳು ಕ್ರಮವಾಗಿ TCL SOCL100, TCL SOCL200, TCL SOCL300, ಮತ್ತು TCL ACTV100 ಆಗಿವೆ. TCL MTRO200 ಮತ್ತು TCL ELIT400NC ಹೆಸರಿನ ಮಾಡೆಲ್‌ಗಳ ಹೆಡ್‌ಫೋನ್‌ ಬಿಡುಗಡೆ ಮಾಡಿದೆ.

ಹೆಡ್‌ಫೋನ್‌ಗಳು

ಟಿಸಿಎಲ್ ELIT200NC ಹೆಡ್‌ಫೋನ್‌ಗಳು 12.2 ಎಂಎಂ ಹೈ-ರೆಸ್ ಆಡಿಯೊ ಡ್ರೈವರ್‌ಗಳನ್ನು ಒಳಗೊಂಡಿದ್ದು, ಇವುಗಳ ಬೆಲೆ ಭಾರತದಲ್ಲಿ 2,299ರೂ. ಆಗಿದೆ. ಈ ಡಿವಯಸ್ 15 ನಿಮಿಷಗಳ ಚಾರ್ಜಿಂಗ್ ನಲ್ಲಿ ಎರಡು ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇಕೋ ಕ್ಯಾನ್ಸಲೇಶನ್ ತಂತ್ರಜ್ಞಾನ ಪಡೆದಿದ್ದು, ಬ್ಲೂಟೂತ್ 4.2 ಸಪೋರ್ಟ್‌ ಪಡೆದಿದೆ. ಸಿಮೆಂಟ್ ಗ್ರೇ ಮತ್ತು ಮಿಡ್ನೈಟ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯ.

ಡಿವೈಸ್

ಅದೇ ರೀತಿ ಟಿಸಿಎಲ್ ACTV100BT ಡಿವೈಸ್ ಭಾರತದಲ್ಲಿ 1,799ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದು ಬ್ಲೂಟೂತ್ v5 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಈ ಡಿವೈಸ್ ಸುಮಾರು 12 ಗಂಟೆಗಳವರೆಗೆ ನಿರಂತರ ಪ್ಲೇಬ್ಯಾಕ್ ನೀಡುವುದಾಗಿ ಕಂಪನಿಯು ಹೇಳಿಕೊಂಡಿದೆ. ಈ ಹೆಡ್‌ಫೋನ್ ಇಯರ್ ಹುಕ್ ವಿನ್ಯಾಸ ಮತ್ತು ಹೊಂದಾಣಿಕೆ ಕೇಬಲ್ ಅನ್ನು ಹೊಂದಿದ್ದಾರೆ. ಹಾಗೆಯೇ IPX4 ಬೆವರು ಮತ್ತು ಸ್ಪ್ಲಾಶ್ ಪ್ರೂಫ್ ಸೌಲಭ್ಯ ಹೊಂದಿದೆ. ಈ ಇಯರ್‌ಫೋನ್‌ ಬ್ಲ್ಯಾಕ್ ಮತ್ತು ಕ್ರಿಮ್ಸನ್ ವೈಟ್ ಬಣ್ಣಗಳಲ್ಲಿ ಲಭ್ಯ.

ತ್ವರಿತ

ಟಿಸಿಎಲ್ SOCL200BT ಭಾರತದಲ್ಲಿ 1,299ರೂ.ಗಳ ದರವನ್ನು ಪಡೆದಿದೆ. ನೆಕ್‌ಬ್ಯಾಂಡ್ ಶೈಲಿಯ ವೈರ್‌ಲೆಸ್ ಇಯರ್‌ಫೋನ್‌ ಇದಾಗಿದ್ದು, ಬ್ಲೂಟೂತ್ v5 ಅನ್ನು ಬೆಂಬಲಿಸುತ್ತದೆ. ಸುಮಾರು 17 ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ ಎಂದು ಹೇಳಲಾಗಿದೆ. 15 ನಿಮಿಷದ ತ್ವರಿತ ಚಾರ್ಜ್ ಸುಮಾರು ಮೂರು ಗಂಟೆಗಳ ಬ್ಯಾಕ್‌ಅಪ್ ಒದಗಿಸಲಿದೆ ಎಂದು ಹೇಳಲಾಗಿದೆ.

ಹೆಡ್‌ಫೋನ್‌

ಟಿಸಿಎಲ್ ELIT400NC ಡಿವೈಸ್ ಭಾರತದಲ್ಲಿ 6,999ರೂ. ಬೆಲೆಯನ್ನು ಹೊಂದಿದೆ. ಈ ಡಿವೈಸ್ ಸಿಮೆಂಟ್ ಗ್ರೇ ಮತ್ತು ಮಿಡ್ನೈಟ್ ಬ್ಲೂ ಕಲರ್ ಆಯ್ಕೆಗಳನ್ನು ಹೊಂದಿದೆ. ಈ ಹೆಡ್‌ಫೋನ್‌ ANC ಮತ್ತು Hi-Res ಆಡಿಯೊವನ್ನು ಬೆಂಬಲಿಸುತ್ತವೆ. ಜಸ್ಟ್‌ 15 ನಿಮಿಷಗಳ ಚಾರ್ಜ್‌ ಸುಮಾರು ನಾಲ್ಕು ಗಂಟೆಗಳ ಪ್ಲೇಬ್ಯಾಕ್‌ ಅನ್ನು ಒದಗಿಸಲಿದೆ.

Most Read Articles
Best Mobiles in India

English summary
TCL Launches New Wired and Wireless Headphone Range in India, Priced Starting at Rs. 299.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X