TCL ಸಂಸ್ಥೆಯಿಂದ ನೂತನ ಟ್ಯಾಬ್ಲೆಟ್‌ಗಳು ಲಾಂಚ್!..ಫೀಚರ್ಸ್‌ ಏನು?

|

ಜನಪ್ರಿಯ ಟಿಸಿಎಲ್ ಕಂಪನಿಯು ಈಗಾಗಲೇ ಭಿನ್ನ ಶ್ರೇಣಿಯ ಉತ್ಪನ್ನಗಳಿಂದ ಗುರುತಿಸಿಕೊಂಡಿದೆ. ಇದೀಗ ಮತ್ತೆ ನೂತನವಾಗಿ ಕೆಲವು ಹೊಸ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2022 ಕಾರ್ಯಕ್ರಮದಲ್ಲಿ ಟಿಸಿಎಲ್ ಕಂಪನಿಯು ಟಿಸಿಎಲ್‌ ನೆಕ್ಸ್ಟ್‌ಪೇಪರ್ ಮ್ಯಾಕ್ಸ್‌ 10, ಟ್ಯಾಬ್‌ 10s 5G, ಟ್ಯಾಬ್‌ 10 FHD 4G ಮತ್ತು ಟ್ಯಾಬ್‌ 10 HD ಡಿವೈಸ್‌ಗಳನ್ನು ಲಾಂಚ್ ಮಾಡಿ ಗ್ರಾಹಕರ ಗಮನ ಸೆಳೆದಿದೆ.

TCL ಸಂಸ್ಥೆಯಿಂದ ನೂತನ ಟ್ಯಾಬ್ಲೆಟ್‌ಗಳು ಲಾಂಚ್!..ಫೀಚರ್ಸ್‌ ಏನು?

ಹೌದು, ಟಿಸಿಎಲ್‌ ಸಂಸ್ಥೆಯ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2022 ಕಾರ್ಯಕ್ರಮದಲ್ಲಿ ಹೊಸದಾಗಿ ನೆಕ್ಸ್ಟ್‌ಪೇಪರ್ ಮ್ಯಾಕ್ಸ್‌ 10, ಟ್ಯಾಬ್‌ 10s 5G, ಟ್ಯಾಬ್‌ 10 FHD 4G ಮತ್ತು ಟ್ಯಾಬ್‌ 10 HD ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಆ ಪೈಕಿ ಟಿಸಿಎಲ್‌ ಟ್ಯಾಬ್ 10s 5G ಡಿವೈಸ್ 5G ಸಕ್ರಿಯಗೊಳಿಸಿದ ಮೀಡಿಯಾ ಟೆಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಜೊತೆಗೆ ಈ ಡಿವೈಸ್ 10.1 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ.

ಟಿಸಿಎಲ್‌ ನೆಕ್ಸ್ಟ್‌ಪೇಪರ್ ಮ್ಯಾಕ್ಸ್‌ 10 ಫೀಚರ್ಸ್‌
ಟಿಸಿಎಲ್‌ ನೆಕ್ಸ್ಟ್‌ಪೇಪರ್ ಮ್ಯಾಕ್ಸ್‌ 10 ಟ್ಯಾಬ್ಲೆಟ್ ಟಿಸಿಎಲ್‌ ಕಿಡ್ಸ್ ವೈಶಿಷ್ಟ್ಯದೊಂದಿಗೆ ಆಂಡ್ರಾಯ್ಡ್‌ 11 ಸಪೋರ್ಟ್‌ ಅನ್ನು ಪಡೆದಿದೆ. ಈ ಡಿವೈಸ್ 83 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದ್ದು, 10.36 ಇಂಚಿನ ಪೂರ್ಣ ಹೆಚ್‌ಡಿ + ಪೇಪರ್ ತರಹದ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್‌ನ ಪ್ರೊಸೆಸರ್, RAM ಅಥವಾ ಶೇಖರಣಾ ಆಯ್ಕೆಗಳ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಸಾಧನ ವೈ-ಫೈ ಮತ್ತು 4G LTE + ವೈ-ಫೈ ಹೊಂದಿದೆ. ಟಿಸಿಎಲ್‌ನ ಈ ಟ್ಯಾಬ್ಲೆಟ್ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಬೆಲೆ EUR 269 (ಭಾರತದಲ್ಲಿ ಅಂದಾಜು 22,700ರೂ.)

ಟಿಸಿಎಲ್‌ ಟ್ಯಾಬ್ 10s 5G ಫೀಚರ್ಸ್‌
ಟಿಸಿಎಲ್‌ ಟ್ಯಾಬ್ಲೆಟ್ Tab 10s 5G ಡಿವೈಸ್ MWC 2022 ಕಾರ್ಯಕ್ರಮದಲ್ಲಿ ಟಿಸಿಎಲ್‌ ಪರಿಚಯಿಸಿದ ಏಕೈಕ 5G ಸಾಧನ ಆಗಿದೆ. ಇದು 10.1 ಇಂಚಿನ ಪೂರ್ಣ-HD (1,920 x 1,200 ಪಿಕ್ಸೆಲ್‌ಗಳು) IPS LCD ಡಿಸ್‌ಪ್ಲೇ ಪಡೆದಿದ್ದು, ಜೊತೆಗೆ 16:10 ಆಕಾರ ಅನುಪಾತ ಹೊಂದಿದೆ. ಹಾಗೆಯೇ ಇದು ಟಿಸಿಎಲ್‌ ನ NxtVision ತಂತ್ರಜ್ಞಾನವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಚಿಪ್‌ಸೆಟ್ ಅನ್ನು ಆರ್ಮ್ ಮಾಲಿ-ಜಿ 57 ಎಂಸಿ 2 ಜಿಪಿಯು, 4 ಜಿಬಿ RAM ಮತ್ತು 64 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು. ಟಿಸಿಎಲ್‌ ಟ್ಯಾಬ್ 10s 5G 18W ಚಾರ್ಜಿಂಗ್ ಬೆಂಬಲದೊಂದಿಗೆ 8,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಜೊತೆಗೆ 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮರಾ ಮತ್ತು 5-ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ. ಇದರ ಬೆಲೆಯು EUR 349 (ಭಾರತದಲ್ಲಿ ಅಂದಾಜು 29,500ರೂ)

ಟಿಸಿಎಲ್‌ ಟ್ಯಾಬ್ 10 FHD 4G ಮತ್ತು ಟಿಸಿಎಲ್‌ ಟ್ಯಾಬ್ 10 HD ಫೀಚರ್ಸ್‌
ಟಿಸಿಎಲ್‌ ಟ್ಯಾಬ್ 10 FHD 4G ಮತ್ತು ಟಿಸಿಎಲ್‌ ಟ್ಯಾಬ್ 10 HD ಎರಡೂ ವಿಭಿನ್ನ ರೆಸಲ್ಯೂಶನ್‌ಗಳೊಂದಿಗೆ 10.1 ಇಂಚಿನ IPS LCD ಡಿಸ್ಪ್ಲೇಯನ್ನು ಪಡೆದಿವೆ. ಮೊದಲನೆಯದು 1,920x1,200 ರೆಸಲ್ಯೂಶನ್ ಪ್ರದರ್ಶನವನ್ನು ಪಡೆಯುತ್ತದೆ, ಆದರೆ ಎರಡನೆಯದು 1,280x800 ರೆಸಲ್ಯೂಶನ್ ಪ್ರದರ್ಶನವನ್ನು ಪಡೆಯುತ್ತದೆ. ಎರಡೂ ಪವರ್‌ವಿಆರ್ ಜಿಇ8320 ಜಿಪಿಯು ಜೊತೆಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಟಿಸಿಎಲ್‌ ಟ್ಯಾಬ್ 10 FHD 4G 32GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ 3GB RAM ಅನ್ನು ಪಡೆಯುತ್ತದೆ. ಇದು ಟಿಸಿಎಲ್‌ ಕಿಡ್ಸ್ ವೈಶಿಷ್ಟ್ಯದೊಂದಿಗೆ ಆಂಡ್ರಾಯ್ಡ್‌ 11 ಅನ್ನು ರನ್ ಮಾಡುತ್ತದೆ. ಟಿಸಿಎಲ್‌ ಟ್ಯಾಬ್ 10 HD ಎರಡು ರೂಪಾಂತರಗಳನ್ನು ಪಡೆಯುತ್ತದೆ: 3GB RAM + 32GB ಶೇಖರಣಾ ರೂಪಾಂತರವು ಆಂಡ್ರಾಯ್ಡ್‌ 11 ಅನ್ನು ರನ್ ಮಾಡುತ್ತದೆ, ಆದರೆ 2GB RAM + 32GB ಶೇಖರಣಾ ರೂಪಾಂತರವು ಆಂಡ್ರಾಯ್ಡ್‌ 11 (Go ಆವೃತ್ತಿ) ಅನ್ನು ರನ್ ಮಾಡುತ್ತದೆ.

Best Mobiles in India

English summary
TCL NxtPaper Max 10, Tab 10s 5G, Tab 10 FHD 4G, Tab 10 HD Tablets Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X