Home
ಸುದ್ದಿಜಾಲ

ವಾರದ ಟೆಕ್‌ ಸುದ್ದಿ; ರಿಯಲ್‌ಮಿ ಲಾಂಚ್ ನಿಂದ ಹಿಡಿದು ಫೋನ್‌ಪೇನ ಹೊಸ ಫೀಚರ್ಸ್‌ ವರೆಗೆ!

ಇಂದು ಎಲ್ಲೆಲ್ಲೂ ಸ್ಮಾರ್ಟ್‌ ಡಿವೈಸ್‌ಗಳ ಅಬ್ಬರ ಜೋರಾಗಿದೆ. ಅದರಲ್ಲೂ ಹೊಸ ಹೊಸ ಬ್ರ್ಯಾಂಡ್‌ಗಳು ಸೃಷ್ಟಿಯಾಗುವುದರ ಜೊತೆಗೆ ಅತ್ಯಾಕರ್ಷಕ ಎನಿಸುವ ಸ್ಮಾರ್ಟ್‌ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಹಾಗೆಯೇ ಮೆಟಾ ಮಾಲೀಕತ್ವದ ಮೆಸೆಜಿಂಗ್‌ ಆಪ್‌ಗಳಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದರೆ ಇತ್ತ ಚಾಟ್‌ಜಿಪಿಟಿ ಶೈಲಿಯಲ್ಲಿಯೇ ಪ್ರಮುಖ ಕಂಪೆನಿಗಳು ಹೊಸ ಟೂಲ್ಸ್‌ ಅನ್ನು ಪರಿಚಯಿಸುತ್ತಾ ಬರುತ್ತಿವೆ.

ವಾರದ ಟೆಕ್‌ ಸುದ್ದಿ; ರಿಯಲ್‌ಮಿ ಲಾಂಚ್ ನಿಂದ ಫೋನ್‌ಪೇನ ಹೊಸ ಫೀಚರ್ಸ್‌ ವರೆಗೆ!

ಹೌದು, ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಹಲವಾರು ವಿವಿಧ ಡಿವೈಸ್‌ಗಳು ಆಕರ್ಷಕ ಎನಿಸಿವೆ. ಅದರಲ್ಲೂ ಟೆಲಿಕಾಂ ಕಂಪೆನಿಗಳು ವಿವಿಧ ಆಫರ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಪಡೆದುಕೊಳ್ಳಲು ಮುಂದಾಗಿವೆ. ಈ ನಡುವೆ ಈ ವಾರದಲ್ಲಿ ಘಟಿಸಿದ ಪ್ರಮುಖ ಬೆಳವಣಿಗೆಗಳು ಏನು, ಯಾವೆಲ್ಲಾ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ V30 ಲಾಂಚ್‌

ರಿಯಲ್‌ಮಿ ಎರಡು ನೂತನ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದ್ದು, ರಿಯಲ್‌ಮಿ V30 (Realme V30) ಮತ್ತು ರಿಯಲ್‌ಮಿ V30T (Realme V30T) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ, ಈ ಫೋನ್‌ಗಳು ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಕ್ರಮವಾಗಿ ಭಾರತದಲ್ಲಿ ಅಂದಾಜು 13,000 ರೂ. ಹಾಗೂ 15,000 ರೂ. ಗಳ ಆಸುಪಾಸಿನಲ್ಲಿ ಲಭ್ಯವಿದೆ.

ವಾರದ ಟೆಕ್‌ ಸುದ್ದಿ; ರಿಯಲ್‌ಮಿ ಲಾಂಚ್ ನಿಂದ ಫೋನ್‌ಪೇನ ಹೊಸ ಫೀಚರ್ಸ್‌ ವರೆಗೆ!

ವಾಟ್ಸಾಪ್‌ನಲ್ಲಿ ಬದಲಾವಣೆ

ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಮತ್ತು ಐಒಎಸ್‌ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದ್ದು, ಈ ಮೂಲಕ ಬಳಕೆದಾರರು ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಹೊಸ ಆಯ್ಕೆಗಳನ್ನು ಪಡೆದಿದ್ದಾರೆ. ಅದರಂತೆ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಖಾಸಗಿ ಪ್ರೇಕ್ಷಕರ ಆಯ್ಕೆ, ವಾಯ್ಸ್‌ ಸ್ಟೇಟಸ್‌, ಸ್ಟೇಟಸ್‌ ರಿಯಾಕ್ಷನ್‌, ಸ್ಟೇಟಸ್‌ ಪ್ರೊಫೈಲ್‌ ರಿಂಗ್ಸ್‌ ಮತ್ತು ಸ್ಟೇಟಸ್‌ನಲ್ಲಿ ಲಿಂಕ್ ಪ್ರಿವ್ಯೂ ಮಾಡುವ ಆಯ್ಕೆಗಳನ್ನು ಪಡೆದುಕೊಂಡಿದ್ದಾರೆ.

ಒನ್‌ಪ್ಲಸ್ ಡಿವೈಸ್‌ಗಳ ಅನಾವರಣ

ಒನ್‌ಪ್ಲಸ್‌ನ ಯಾವುದೇ ಡಿವೈಸ್‌ಗಳಿಗೂ ಭಾರೀ ಬೇಡಿಕೆ ಇದೆ ಅದರಂತೆ ಒನ್‌ಪ್ಲಸ್‌ ತನ್ನ ಲಾಂಚ್‌ ಕಾರ್ಯಕ್ರಮದಲ್ಲಿ ಒಟ್ಟಾಗಿ ಒನ್‌ಪ್ಲಸ್‌ 11, ಒನ್‌ಪ್ಲಸ್‌ ಬಡ್ಸ್‌ ಪ್ರೊ 2R, ಒನ್‌ಪ್ಲಸ್‌ 11R ಹಾಗೂ ಟ್ಯಾಬ್‌ ಅನ್ನು ಅನಾವರಣ ಮಾಡಲಾಗಿದೆ. ಈ ಡಿವೈಸ್‌ಗಳು ಜಾಗತಿಕವಾಗಿ ಲಭ್ಯವಿದ್ದು, ಪ್ರಮುಖ ಇ ಕಾಮರ್ಸ್‌ ಸೈಟ್‌ ಮೂಲಕ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಹೊಸ ಎಐ ಟೂಲ್ಸ್‌ ಪರಿಚಯಿಸಿದ ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಚಾಟ್‌ ಜಿಪಿಟಿಗಿಂತಲೂ ಮಿಗಿಲಾದ ಸುಧಾರಿತ ಎಐ ಟೂಲ್ಸ್‌ ಅನ್ನು ತನ್ನ ಸರ್ಚ್‌ ಇಂಜಿನ್‌ ಬಿಂಗ್‌ ಹಾಗೂ ಎಡ್ಜ್‌ ನಲ್ಲಿ ಪರಿಚಯಿಸಿದೆ. ಇದು ಓಪನ್ ಎಐನ ಮುಂದಿನ ಪೀಳಿಗೆಯ ಭಾಷಾ ಮಾದರಿಯಿಂದ ಕಾರ್ಯನಿರ್ವಹಿಸಿದ್ದು, ಇದರಲ್ಲಿ ಬಳಕೆದಾರರು ಪೂರ್ವ ವೀಕ್ಷಣೆ ಮಾಡಬಹುದಾಗಿದೆ. ಈ ಮೂಲಕ ಉತ್ತಮ ಅನುಭವ ಪಡೆಯಬಹುದು ಎಂಬುದು ಮೈಕ್ರೋಸಾಪ್ಟ್‌ ಹೇಳಿದೆ.

ವಾರದ ಟೆಕ್‌ ಸುದ್ದಿ; ರಿಯಲ್‌ಮಿ ಲಾಂಚ್ ನಿಂದ ಫೋನ್‌ಪೇನ ಹೊಸ ಫೀಚರ್ಸ್‌ ವರೆಗೆ!

ಕೋಕಾ-ಕೋಲಾ ಸ್ಮಾರ್ಟ್‌ಫೋನ್‌

ಕೋಕಾ-ಕೋಲಾ ಸ್ಮಾರ್ಟ್‌ಫೋನ್‌ ಇಂದು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ರಿಯಲ್‌ಮಿ ಜೊತೆಗೆ ಕೈ ಜೋಡಿಸಿ ಈ ಸ್ಮಾರ್ಟ್‌ಫೋನ್‌ ಅನಾವರಣ ಮಾಡಲಾಗಿದ್ದು, ಈ ಫೋನ್‌ 108 ಮೆಗಾ ಪಿಕ್ಸಲ್‌ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಭಾರತದಲ್ಲಿ ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ 8GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 20,999 ರೂ. ಆಗಿದೆ.

ರೆಟ್ರೊ ಸ್ಟೈಲ್‌ ಇರುವ ಹೊಸ ಸ್ಪೀಕರ್‌

ಐವಾ ಕಂಪೆನಿಯು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಲಾಂಚ್ ಮಾಡಿದ್ದು, ಯುವಜನತೆಯನ್ನು ಕೇಂದ್ರೀಕರಿಸಿಕೊಂಡು ಈ ಡಿವೈಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಈ ಮೂರು ಸ್ಪೀಕರ್‌ಗಳಿಗೆ ಐವಾ MIX- 440 Enigma Beta, ಐವಾ RS-X 150 Natsukasii ಪ್ರೊ ಮತ್ತು ಐವಾ RS-X 100 Natsukasii ಪ್ರೊ ಗಳೆಂದು ಹೆಸರಿಸಲಾಗಿದೆ. ಅದರಂತೆ 27,990 ರೂ. ಗಳ ಆರಂಭದ ಬೆಲೆಯಿಂದ 54,990ರೂ. ಗಳ ಬೆಲೆ ವರೆಗೆ ಈ ಡಿವೈಸ್‌ಗಳು ಲಭ್ಯ.

ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌

ರಿಯಲ್‌ಮಿ ಕಂಪೆನಿಯು ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ ಜನ್ 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯಿಂದ ಹೆಚ್ಚು ಆಕರ್ಷಕವಾಗಿದೆ. ಇದರೊಂದಿಗೆ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ವಿದೇಶದಲ್ಲೂ ಫೋನ್‌ ಪೇ ಬಳಸಬಹುದು

ಫೋನ್‌ ಪೇ ಭಾರತೀಯರ ನೆಚ್ಚಿನ ಆಪ್‌ ಆಗಿದೆ. ಈ ಆಪ್‌ ಇದೀಗ ವಿದೇಶದಲ್ಲೂ ಕೆಲಸ ಮಾಡಲಿದ್ದು, ಯುಪಿಐ ಇಂಟರ್ನ್ಯಾಷನಲ್ ಪಾವತಿಗಳಿಗೆ ಬೆಂಬಲವನ್ನು ಪ್ರಾರಂಭಿಸಿರುವುದಾಗಿ ಮಾಹಿತಿ ನೀಡಿದೆ. ಈ ಸೌಲಭ್ಯದ ಮೂಲಕ ಭಾರತೀಯ ಬಳಕೆದಾರರು ವಿದೇಶದಲ್ಲಿ ಪ್ರಯಾಣ ಮಾಡುವಾಗ ಹಾಗೂ ಅಲ್ಲಿನ ಸ್ಟೋರ್‌ಗಳಲ್ಲಿ ಪಾವತಿ ಮಾಡುವಾಗ ಈ ಆಪ್‌ ಅನ್ನು ಬಳಕೆ ಮಾಡಬಹುದಾಗಿದೆ.

Best Mobiles in India

English summary
Tech News of this Week (12 feb 2023) : Gizbot Kannada provides latest technology news, phone launch details, latest smartphones, news on laptops, cameras, whatsapp and mobile apps news of this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+