Home
ಸುದ್ದಿಜಾಲ

Tech News of this Week; ಜಿಯೋ ಹಿಂದಿಕ್ಕಿದ ಏರ್‌ಟೆಲ್‌, ಹೆಚ್ಚು ಸೇಲ್‌ ಆದ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಟೆಕ್‌ ವಲಯದಲ್ಲಿ ಪ್ರತಿವಾರವೂ ಅಗಾಧವಾದ ಬೆಳವಣಿಗೆಗಳು ಕಂಡುಬರುತ್ತವೆ. ಅದರಲ್ಲೂ ವಾಟ್ಸಾಪ್‌ ಹಲವು ಫೀಚರ್ಸ್‌ಗಳನ್ನು ಪಡೆದುಕೊಂಡರೆ, ಪ್ರಮುಖ ಬ್ರ್ಯಾಂಡ್‌ಗಳು ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ವಾಚ್‌ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಈ ಮೂಲಕ ಗ್ರಾಹಕರು ತಮಗೆ ಬೇಕಾದ ಸ್ಮಾರ್ಟ್‌ ಡಿವೈಸ್‌ ಅನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ.

Tech News of this Week; ಈ ವಾರ ಟೆಕ್‌ ವಲಯದಲ್ಲಿ ಜರುಗಿದ ಘಟನೆಗಳೇನು?

ಹೌದು, ಮೆಸೆಜಿಂಗ್‌ ಆಪ್‌ಗಳಲ್ಲಿ ಕೆಲವು ಬದಲಾವಣೆ ಕಂಡುಬಂದರೆ, ಟೆಲಿಕಾಂ ವಿಭಾಗದಲ್ಲಿ ಹಲವಾರು ಹೊಸ ಸೇವೆಗಳು ಬಳಕೆದಾರರಿಗೆ ಲಭ್ಯವಾಗಿವೆ. ಹಾಗಿದ್ರೆ, ಈ ವಾರದಲ್ಲಿ ಅಂದರೆ ಈ ತಿಂಗಳ 23 ನೇ ತಾರೀಖಿನಿಂದ ಇಲ್ಲಿಯವರೆಗೆ ಟೆಕ್‌ ವಲಯದಲ್ಲಿ ಕಂಡುಬಂದ ಪ್ರಮುಖ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದೇವೆ. ಈ ಮೂಲಕ ನೀವು ಹೊಸ ಸ್ಮಾರ್ಟ್‌ಫೊನ್‌ ಖರೀದಿ ಮಾಡುವುದಕ್ಕೆ ಅಥವಾ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಕಾರಿ ಓದಿರಿ.

ಬ್ಯಾಟಲ್ ರಾಯಲ್ ಇಂಡಸ್ ಗೇಮ್‌
ಭಾರತದಲ್ಲಿ ಪಬ್‌ಜಿ ಗೇಮ್‌ ಅನ್ನು ಬ್ಯಾನ್‌ ಮಾಡಲಾಗಿದ್ದು, ಇದೇ ರೀತಿಯ ಆಟಗಳಿಗೆ ಭಾರತೀಯರು ಈವರೆಗೂ ಹಾತೊರೆಯುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಭಾರತ ಮೂಲದ ಕಂಪೆನಿಯೇ ಪಬ್‌ಜಿ ಗೇಮ್‌ ಅನ್ನು ಹೋಲುವ ಒಂದನ್ನು ಘೋಷಣೆ ಮಾಡಲಾಗಿದೆ. ಸೂಪರ್‌ಗೇಮಿಂಗ್ ಕಂಪೆನಿ ಬ್ಯಾಟಲ್ ರಾಯಲ್ ಇಂಡಸ್‌ಎಂಬ ಗೇಮ್‌ ಅನ್ನು ಘೋಷಣೆ ಮಾಡಲಾಗಿದ್ದು, ಪೂರ್ವ-ನೋಂದಣಿ ವ್ಯವಸ್ಥೆಯನ್ನೂ ಕಲ್ಪಿಸಿದೆ.

ವೇಗವರ್ಧಿಸಿಕೊಂಡ ಜಿಯೋ
ಭಾರತದಲ್ಲಿ ಜಿಯೋ ಭಾರೀ ವೇಗ ಪಡೆದುಕೊಂಡಿದೆ. ಅದರಂತೆ ಸರಿಸುಮಾರು 25 ರಷ್ಟು ಜನರಿಗೆ ಈ 5G ಸೇವೆ ಲಭ್ಯವಾಗುತ್ತಿದ್ದು, ಹೆಚ್ಚಿನ ಸೇವೆ ಜಿಯೋದಿಂದಲೇ ಲಭ್ಯವಾಗುತ್ತಿರುವುದು ವಿಶೇಷ. ಇದರ ನಡುವೆ ಕರ್ನಾಟಕಕ್ಕೆ ಗುಡ್‌ ನ್ಯೂಸ್‌ ನೀಡಿರುವ ಜಿಯೋ 20 ನಗರಗಳಲ್ಲಿ 5G ನೀಡುವುದಾಗಿ ತಿಳಿಸಿದೆ. ಅದರಲ್ಲಿ ಬೀದರ್‌, ಗುಲ್ಬರ್ಗ, ಬಳ್ಳಾರಿ, ದಾವಣಗೆರೆ ಹಾಗೂ ಹಾಸನ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಜಿಯೋ 5G ಸೇವೆ ಲಭ್ಯವಾಗಲಿದೆ.

Tech News of this Week; ಈ ವಾರ ಟೆಕ್‌ ವಲಯದಲ್ಲಿ ಜರುಗಿದ ಘಟನೆಗಳೇನು?

ಕನಿಷ್ಠ ರೀಚಾರ್ಜ್‌ ದರ ಹೆಚ್ಚಿಗೆ ಮಾಡಿದ ಏರ್‌ಟೆಲ್‌
ಏರ್‌ಟೆಲ್‌ ತನ್ನ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ನಿರಂತರವಾಗಿ ಸುಂಕ ಹೆಚ್ಚಿಗೆ ಮಾಡಿಕೊಂಡು ಬರುತ್ತಲೇ ಇದೆ. ಇದಕ್ಕೆ ನಿದರ್ಶನ ಎಂಬಂತೆ ತನ್ನ ಕನಿಷ್ಠ ರೀಚಾರ್ಜ್‌ ದರವನ್ನು ಹೆಚ್ಚಿಗೆ ಮಾಡಿದೆ. ಅಂದರೆ, ಈ ಹಿಂದೆ 99 ರೂ. ಇದ್ದ ರೀಚಾರ್ಜ್‌ ಪ್ಲ್ಯಾನ್‌ 155 ರೂ.ಗೆ ಏರಿಕೆಯಾಗಿದೆ. ಈ ಮೂಲಕ ನಿಮ್ಮ ಸಿಮ್‌ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳಬಹುದಾಗಿದೆ. ಆದರೆ, ಜಿಯೋದ ಈ ನಿರ್ಧಾರದಿಂದಾಗಿ ಬಹುಪಾಲು ಏರ್‌ಟೆಲ್‌ ಗ್ರಾಹಕರಿಗೆ ಬೇಸರ ಉಂಟಾಗಿದೆ.

ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದುಕೊಂಡ ಏರ್‌ಟೆಲ್‌
ಜಗತ್ತಿನಲ್ಲಿ ಹಲವಾರು ಟೆಲಿಕಾಂ ಸಂಸ್ಥೆಗಳು ಲಭ್ಯ ಇವೆ. ಇದರಲ್ಲಿ ಚೀನಾ ಮೊಬೈಲ್‌ ಪ್ರಮುಖ ಸ್ಥಾನ ಪಡೆದುಕೊಂಡಿದ್ದರೆ, ಏರ್‌ಟೆಲ್‌ ಇಡೀ ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದುಕೊಂಡು ಜನಪ್ರಿಯಗೊಂಡಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಜಿಯೋ ಇದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಚೀನಾ ಟೆಲಿಕಾಂ ಕಾರ್ಪೋರೇಶನ್‌ ಇದ್ದರೆ ವೋಡಾಫೋನ್‌ ಗ್ರೂಪ್‌ ಐದನೇ ಸ್ಥಾನ ಪಡೆದುಕೊಂಡಿದೆ.

ಮೊಬೈಲ್‌ ಡಾಟಾ ವೇಗದಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ
ಭಾರತದಲ್ಲಿ 5G ಸೇವೆ ಬಂದಾಗಿನಿಂದ ಇತರೆ ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿ ಡಾಟಾ ವೇಗದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. 5G ಸೇವೆ ಭಾರತದಲ್ಲಿ ಲಭ್ಯವಾಗುವ ಮುನ್ನ 105 ನೇ ಸ್ಥಾನದಲ್ಲಿ ಇದ್ದ ಭಾರತ ಇದೀಗ 79 ನೇ ಸ್ಥಾನಕ್ಕೆ ಜಿಗಿದಿದೆ. ಈ ಬೆಳವಣಿಗೆ ಇನ್ನೂ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರ್ಯಾಂಕ್‌ ಪಡೆಯುವುದರಲ್ಲಿ ಎರಡು ಮಾತಿಲ್ಲ.

Tech News of this Week; ಈ ವಾರ ಟೆಕ್‌ ವಲಯದಲ್ಲಿ ಜರುಗಿದ ಘಟನೆಗಳೇನು?

ಹೆಚ್ಚು ಮಾರಾಟವಾದ ಫೋನ್‌ ಇದು
ಭಾರತದಲ್ಲಿ 2022 ರಲ್ಲಿ ಅತೀ ಹೆಚ್ಚು ಮಾರಾಟವಾದ ಫೋನ್‌ ಎಂದರೆ ಅದುವೇ ಆಪಲ್‌ನ ಐಫೋನ್‌ 13. ಈ ಫೋನ್‌ 2021 ಸೆಪ್ಟೆಂಬರ್ 14 ರಂದು ಲಾಂಚ್‌ ಆಗಿದ್ದು,
ಸೆಪ್ಟೆಂಬರ್ 24 ರಿಂದ ಗ್ರಾಹಕರಿಗೆ ಲಭ್ಯವಾಗಿದೆ. ಈ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1170 x 2532 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ. ಜೊತೆಗೆ ಆಪಲ್‌ A15 ಬಯೋನಿಕ್ (5 nm) ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಅನ್ನು ಆಫರ್‌ ಬೆಲೆ 50,000 ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ.

ಕೋಕ ಕೋಲಾದಿಂದ ಫೋನ್‌ ಲಾಂಚ್‌
ಅಮೆರಿಕಾದ ಜನಪ್ರಿಯ ದೈತ್ಯ ಪಾನೀಯ ಸಂಸ್ಥೆ ಕೋಕಕೋಲಾ (Coca-Cola) ಈಗ ಸ್ಮಾರ್ಟ್‌ಫೋನ್‌ ವಲಯಕ್ಕೆ ಎಂಟ್ರಿ ನೀಡಲಿದ್ದು, ಟೆಕ್‌ ವಲಯದಲ್ಲಿ ಹೊಸ ಅಲೆ ಎಬ್ಬಿಸಿದೆ. ಅಂತೆಯೇ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಈ ಕಂಪೆನಿಯು ಸ್ಮಾರ್ಟ್‌ಫೋನ್‌ ನಿರ್ಮಾಣಕ್ಕಾಗಿ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ಕೈ ಜೋಡಿಸಲಿದೆ.

ಭಾರತದಿಂದ ಹೆಚ್ಚಿನ ಐಫೋನ್‌ಗಳ ರಪ್ತು
ಆಪಲ್‌ ಸಂಸ್ಥೆಯ ಐಫೋನ್‌ಗಳನ್ನು ಭಾರತದಿಂದ ದಾಖಲೆ ಮಟ್ಟದಲ್ಲಿ ರಪ್ತು ಮಾಡಲಾಗಿದೆ. ಈ ಆಪಲ್‌ ಫೋನ್‌ಗಳು ಮೇಡ್‌ ಇನ್‌ ಇಂಡಿಯಾ ಫೋನ್‌ಗಳಾಗಿದ್ದು ಸಂತಸದ ವಿಷಯವಾಗಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಮೊದಲ ಬಾರಿಗೆ ಆಪಲ್‌ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಪ್ತು ಮಾಡಿದ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಈ ವಿಚಾರದಲ್ಲಿ ಆಪಲ್‌ಗೂ ಸ್ಯಾಮ್‌ಸಂಗ್‌ಗೂ ಪೈಪೋಟಿ ಇದೆ.

ಸ್ಯಾಮ್‌ಸಂಗ್‌ S23 ಸ್ಮಾರ್ಟ್‌ಫೋನ್ ಬೆಲೆ ಬಹಿರಂಗ
ಸ್ಯಾಮ್‌ಸಂಗ್‌ S23 ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮುನ್ನವೇ ಅದರ ಬೆಲೆ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಸರಣಿಯಲ್ಲಿ S23,S23+ಹಾಗೂ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಲಿದ್ದು, ಕ್ರಮವಾಗಿ 80,000, 90,000 1,20,000 ರೂ. ಗಳ ಬೆಲೆ ಹೊಂದಿದೆ. ಅದರಂತೆ ಈ ಫೋನ್‌ಗಳಿಗೆ ಭಾರತದಲ್ಲಿ ಈಗಾಗಲೇ ಭಾರೀ ಕ್ರೇಜ್‌ ನಿರ್ಮಾಣ ಆಗಿದೆ.

Best Mobiles in India

English summary
Tech News of this Week (29 January 2023): Gizbot Kannada provides latest technology news, phone launch details, latest smartphones, news on laptops, cameras, whatsapp and mobile apps news of this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+