Home
ಸುದ್ದಿಜಾಲ

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ...ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಬೆಂಗಳೂರಲ್ಲಿ ಮನೆ ಹುಡುಕುವುದು ಎಂದರೆ ಅದೊಂದು ದೊಡ್ಡ ತ್ರಾಸದಾಯಕ ಕೆಲಸ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳು ನಿಮ್ಮ ಜೇಬನ್ನು ಖಾಲಿಮಾಡಲು ಸಜ್ಜಾಗಿದ್ದಾರೆ. ಅದರಂತೆ ಇಲ್ಲೋರ್ವ ಟೆಕ್ಕಿ ಮನೆ ಹುಡುಕುವ ಸಂದರ್ಭದಲ್ಲಿ ಸ್ಕ್ಯಾಮರ್‌ಗಳ ಬೆಲೆಗೆ ಬಿದ್ದು, ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ.

ಹೌದು, ಬೆಂಗಳೂರಲ್ಲಿ ಬಾಡಿಗೆಗೆ ನೋ ಬ್ರೋಕರ್‌ ಮೂಲಕ ಮನೆ ಹುಡುಕುತ್ತಿದ್ದ ಟೆಕ್ಕಿಯೋರ್ವರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಈ ಮೂಲಕ ಬಾಡಿಗೆ ಮನೆ ವಿಚಾರದಲ್ಲೂ ಸ್ಕ್ಯಾಮರ್‌ಗಳು ತಮ್ಮ ಕೈಚಳಕ ತೋರಿಸುತ್ತಿರುವುದು ನಗರದಲ್ಲಿ ಕಂಡುಬಂದಿದೆ. ಹಾಗಿದ್ರೆ, ಮನೆ ಹುಡುಕುವ ಸಂದರ್ಭದಲ್ಲಿ ಈ ಟೆಕ್ಕಿ ಹೇಗೆ ಮೋಸ ಹೋಗಿದ್ದಾರೆ?, ವಂಚಕರು ಹಾಕಿದ ಬಲೆ ಹೇಗಿರಲಿದೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ;ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಮೋಸ ಹೋಗಿದ್ದು ಯಾರು?: ಕೋಲ್ಕತ್ತಾ ಮೂಲದ 25 ವರ್ಷದ ಟೆಕ್ಕಿ ಇತ್ತೀಚೆಗೆ ಕಾಡುಬೀಚನಹಳ್ಳಿಯ ಪ್ರಮುಖ ಐಟಿ ಸಂಸ್ಥೆಯೊಂದರಲ್ಲಿ ಉತ್ತಮ ಸಂಬಳದ ಕೆಲಸ ಗಿಟ್ಟಿಸಿಕೊಂಡಿದ್ದರು. ಅವರು ಜೂನ್ 1 ರಂದು ನಗರಕ್ಕೆ ತೆರಳಿ ತಮ್ಮ ಹೊಸ ಕೆಲಸವನ್ನು ಪ್ರಾರಂಭಿಸಲು ಮುಂದಾಗಿದ್ದರು. ಆದರೆ, ಇಲ್ಲಿಗೆ ಸ್ಥಳಾಂತರಗೊಳ್ಳುವ ಮೊದಲು ನೋ ಬ್ರೋಕರ್‌ ನಲ್ಲಿ ಉತ್ತಮ ಮನೆ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಭಾರತೀಯ ಸೇನೆಯ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿ ಆನ್‌ಲೈನ್‌ನಲ್ಲಿ ಪರಿಚಯ ಆಗಿದ್ದಾನೆ.

ಇದಾದ ನಂತರ ನಕಲಿ ಸೇನಾ ಅಧಿಕಾರಿಯು ತನ್ನ ಬೆಂಗಳೂರಿನ ಫ್ಲ್ಯಾಟ್‌ನ ಮ್ಯಾನೇಜರ್ ಎಂದು ಹೇಳಿಕೊಳ್ಳುವ ಯಾರೋ ಒಬ್ಬ ವ್ಯಕ್ತಿಗೆ ಟೆಕ್ಕಿಯನ್ನು ಪರಿಚಯ ಮಾಡಿಸಿದ್ದಾನೆ. ಆತ ಮನೆಯನ್ನು ಬುಕಿಂಗ್ ಮಾಡುವ ಉದ್ದೇಶದಿಂದ 4,000ರೂ.ಅನ್ನು ಠೇವಣಿ ಮಾಡಲು ಕೇಳಿದ್ದಾನೆ. ಇದು ಅಧಿಕೃತ ಪ್ರಾಪರ್ಟಿ ಎಂದು ಹೇಳುವ ಮೂಲಕ ಟೆಕ್ಕಿಯನ್ನು ನಂಬಿಸಲಾಗಿದೆ. ಜೊತೆಗೆ ಪ್ರಾಪರ್ಟಿ ನೋಡಲು ಪಾವತಿಸಿದ ವಿಸಿಟಿಂಗ್ ಪಾಸ್ ಅನ್ನು ಪಡೆಯಬೇಕು, ಇದಕ್ಕಾಗಿ ಆತ ಒಂದು ಪೋರ್ಟಲ್‌ ಲಿಂಕ್‌ ಅನ್ನು ಕಳುಹಿಸಿದ್ದಾನೆ.

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ;ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಇನ್ನು ಪ್ರಾಪರ್ಟಿ ವೀಕ್ಷಣೆ ಮಾಡಲು ಈ ಹಣ ಪಾವತಿ ಮಾಡಬೇಕಾಗಿದ್ದು, ಇದನ್ನು ವಾಪಸ್‌ ನೀಡಲಾಗುತ್ತದೆ ಎಂದು ಹೇಳಿದ್ದರಿಂದ ಎಂಟು ಆನ್‌ಲೈನ್ ವಹಿವಾಟುಗಳನ್ನು ಈ ಮೂಲಕ ಮಾಡಲಾಗಿದೆ. ಅದರಂತೆ ಟೆಕ್ಕಿ ಒಟ್ಟು 1.6 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ. ಇದಾದ ನಂತರ ಟೆಕ್ಕಿ ಆತನನ್ನು ಸಂಪರ್ಕ ಮಾಡಲು ಮುಂದಾದಾಗ ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ಮೂಲಕ ಮೋಸ ಹೋಗಿದ್ದೇವೆ ಎಂದು ಟೆಕ್ಕಿಗೆ ಮನವರಿಕೆ ಆಗಿದೆ.

ನಾನು ಮತ್ತು ನನ್ನ ಗೆಳತಿ ಬೆಂಗಳೂರಿಗೆ ಹೋಗಲು ಯೋಜಿಸಿದ್ದೆವು. ನಾನು ಬಾಡಿಗೆ ಮನೆಗಳಿಗಾಗಿ ನೋಬ್ರೋಕರ್‌ಹುಡುಕುತ್ತಿದ್ದಾಗ ಮಾರತ್ತಹಳ್ಳಿಯಲ್ಲಿ ಉತ್ತಮ ಆಫರ್‌ ಇರುವ ಫ್ಲಾಟ್‌ ಬಗ್ಗೆ ತಿಳಿದುಕೊಂಡೆ. ಅದರಲ್ಲಿ ಮಾಸಿಕ ಬಾಡಿಗೆ 25,000ರೂ ಮತ್ತು ಎರಡು ತಿಂಗಳ ಬಾಡಿಗೆ ನೀಡಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಮನೆ ಮಾಲೀಕರಾದ ಹಾಗೂ ಭಾರತೀಯ ಸೇನೆಯ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಆ ವ್ಯಕ್ತಿಗೆ ಹಣ ಪಾವತಿ ಮಾಡಿದೆ ಎಂದು ಟೆಕ್ಕಿ ಮಾಹಿತಿ ನೀಡಿದ್ದಾರೆ.

ನೀವೇನಾದರೂ ಬಾಡಿಗೆ ಮನೆಯನ್ನು ಹುಡುಕುತ್ತಿದ್ದರೆ ಈ ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಿ, ಇಲ್ಲವಾದರೆ ನೀವು ಮೋಸ ಹೋಗಬೇಕಾಗುತ್ತದೆ. ನೀವು ಠೇವಣಿ ಪಾವತಿಸುವ ಮೊದಲು ಸಹಿ ಮಾಡಿದ ಗುತ್ತಿಗೆ ಒಪ್ಪಂದವನ್ನು ಪಡೆಯಿರಿ ಮತ್ತು ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಡಿ. ನಗದು ಪಾವತಿಸುವುದನ್ನು ತಪ್ಪಿಸಿ. ಒಮ್ಮೆಯಾದರೂ ಆಸ್ತಿಯನ್ನು ಖುದ್ದಾಗಿ ಭೇಟಿ ಮಾಡಿ ಮತ್ತು ಜಮೀನುದಾರರನ್ನು ಮುಖಾಮುಖಿಯಾಗಿ ಭೇಟಿ ಮಾಡಿ. ಅವನ ಗುರುತು ಮತ್ತು ರುಜುವಾತುಗಳನ್ನು ದೃಢೀಕರಿಸಿ.

ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ;ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಹಾಗೆಯೇ ಸ್ಕ್ಯಾನ್ ಮಾಡಲು ಅಥವಾ ಕ್ಲಿಕ್ ಮಾಡಲು ನಿಮಗೆ ಕ್ಯೂಆರ್‌ ಕೋಡ್‌ಗಳು ಅಥವಾ ಲಿಂಕ್‌ಗಳನ್ನು ಕಳುಹಿಸುವ ಅಪರಿಚಿತರ ಬಗ್ಗೆ ಎಚ್ಚರದಿಂದಿರಿ. ಅವರು ನಿಮ್ಮ ಬ್ಯಾಂಕ್ ಖಾತೆ ಅಥವಾ ಡೇಟಾವನ್ನು ಹ್ಯಾಕ್ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಇದು ಒಪ್ಪುವ ವ್ಯವಹಾರ ಎಂದು ನಿಮಗೆ ಅನಿಸಿದರೂ ಸಹ ಅದರ ಬಗ್ಗೆ ಸಂಶಯವಿರಲಿ. ಅವು ಹಗರಣವಾಗಿ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ.

Best Mobiles in India

English summary
A techie who was looking for a house on rent in Bangalore lost lakhs of money. Through this it has been seen that scammers are showing their skill even in the matter of rented houses in the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+