ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಿದವರಿಗೆ ಆತಂಕ!..ಕೈ ಕೊಟ್ಟ ಸರ್ವರ್!!

ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಶೇಖರಿಸಿಟ್ಟಿದ್ದ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಹಾಗಾಗಿ, ಇಲಾಖೆಯ ಆನ್‌ಲೈನ್‌ ಸೇವೆಗಳೆಲ್ಲ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.!!

|

ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಲು ಆನ್‌ಲೈನ್‌ ಸೇವೆಗಳನ್ನು ಪರಿಚಯಿಸಿದ್ದ ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಶೇಖರಿಸಿಟ್ಟಿದ್ದ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ.! ಹಾಗಾಗಿ, ಇಲಾಖೆಯ ಆನ್‌ಲೈನ್‌ ಸೇವೆಗಳೆಲ್ಲ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.!!

ಇದಿಂರದಾಗಿ, ಇಲ್ಲಿಯವರೆಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸಾರ್ವಜನಿಕರ ಮಾಹಿತಿಯೆಲ್ಲ ಅಳಿಯುವ ಆತಂಕವಿದ್ದು, ಆ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಆಗದು ಎಂದು ಆರ್‌ಟಿಒ ಅಧಿಕಾರಿ ಓರ್ವರು ತಿಳಿಸಿದ್ದಾರೆ. ಹಾಗಾಗಿ, ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನಗಳ ನೋಂದಣಿಗಾಗಿ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗುವ ಸಂಭವವಿದೆ.!!

ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಿದವರಿಗೆ ಆತಂಕ!..ಕೈ ಕೊಟ್ಟ ಸರ್ವರ್!!

ಆನ್‌ಲೈನ್‌ ಸೇವೆ ಹಾಗೂ ಜಾಲತಾಣದ ನಿರ್ವಹಣೆಯನ್ನು ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ವಹಿಸಿಕೊಂಡಿದ್ದು, ಸರ್ವರ್‌ನಲ್ಲಿ ಕಾಣಿಸಿಕೊಂಡಿರುವ ತೊಂದರೆಯನ್ನು ಸರಿಪಡಿಸಲು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸೇವೆಗಳು ಮರು ಆರಂಭವಾಗುವುದು ಎಷ್ಟು ಸಮಯ ಬೇಕು ಎಂದು ಅವರು ತಿಳಿಸಿಲ್ಲ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.!!

ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಿದವರಿಗೆ ಆತಂಕ!..ಕೈ ಕೊಟ್ಟ ಸರ್ವರ್!!

ಹಾಗಾಗಿ, ಇಲಾಖೆಯ ಜಾಲತಾಣ 'www.transport.karnataka.gov.in' ಮೂಲಕ ಲಭ್ಯವಾಗುತ್ತಿದ್ದ ಕಲಿಕಾ, ಚಾಲನಾ ಪ್ರಮಾಣಪತ್ರ ಮತ್ತು ಹೊಸ ವಾಹನಗಳ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಹಾಗೂ ಇ-ಪಾವತಿ ಸೇವೆಗಳು ನಿಷ್ಕ್ರಿಯಗೊಂಡಿವೆ. ಇದರಿಂದ ಸಾರ್ವಜನಿಕರು ಮತ್ತೆ ತೊಂದರೆ ಅನುಭವಿಸುತ್ತಿದ್ದಾರೆ.!!

ಓದಿರಿ: ಒಟ್ಟಿಗೆ 3 ಫೋನ್‌ ಪರಿಚಯಿಸಿದ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ 'ಕೊಮಿಯೋ'!!

Best Mobiles in India

English summary
Regional transport office's (RTO) newly implemented scheme hasTechnicalsnag hits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X