Home
ಸುದ್ದಿಜಾಲ

ಕೇವಲ 7,999ರೂ.ಗಳಿಗೆ ಲಾಂಚ್ ಆಯ್ತು 'ಟೆಕ್ನೋ ಸ್ಪಾರ್ಕ್ 4' ಫೋನ್!.ಮೂರು ಕ್ಯಾಮೆರಾ!

ಟೆಕ್ನೋ ಕಂಪನಿಯು ಅಗ್ಗದ ಬೆಲೆ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿಗೆ 'ಟೆಕ್ನೋ ಸ್ಪಾರ್ಕ್ ಗೋ' ಮತ್ತು 'ಟೆಕ್ನೋ ಸ್ಪಾರ್ಕ್ 4 ಏರ್' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಸರಣಿಯಲ್ಲಿ ಅಗ್ಗದ 'ಟೆಕ್ನೋ ಸ್ಪಾರ್ಕ್‌ 4' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸಿಕೊಂಡಿದೆ.

ಟೆಕ್ನೋ ಸ್ಪಾರ್ಕ್‌ 4

ಹೌದು, ಟೆಕ್ನೋ ಕಂಪನಿಯು ಇಂದು (ಸೆ.25) ದೇಶಿಯ ಮಾರುಕಟ್ಟೆಗೆ 'ಟೆಕ್ನೋ ಸ್ಪಾರ್ಕ್‌ 4' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 3GB / 4GB ಮತ್ತು 32GB / 64GB ಸಾಮರ್ಥ್ಯ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಆರಂಭಿಕ ಬೆಲೆಯು 7,999ರೂ.ಗಳಾಗಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 4 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಟೆಕ್ನೋ ಸ್ಪಾರ್ಕ್‌ 4 ಸ್ಮಾರ್ಟ್‌ಫೋನ್ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 720×1600 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇಯ ಬ್ರೈಟ್ನೆಸ್ nits 450 ಆಗಿದೆ. ಡಿಸ್‌ಪ್ಲೇಯ ನಾಲ್ಕು ಮೂಲೆಗಳಲ್ಲಿ ಕರ್ವ್ ರಚನೆ ಪಡೆದಿದ್ದು, ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಎನಿಸುವ ರಚನೆ ಇದೆ.

ಪ್ರೊಸೆಸರ್ ಹೇಗಿದೆ

ಪ್ರೊಸೆಸರ್ ಹೇಗಿದೆ

ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ A22 ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ ಪೈ 9 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಆಯ್ಕೆ ಹಾಗೂ 4GB ಮತ್ತು 64GB ಆಂತರಿಕ ಸ್ಟೋರೇಜ್‌ನ ಎರಡು ವೇರಿಯಂಟ್ ಮಾದರಿಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ಮೂರು ಕ್ಯಾಮೆರಾ

ಮೂರು ಕ್ಯಾಮೆರಾ

ಟೆಕ್ನೋ ಸ್ಪಾರ್ಕ್‌ 4 ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದೆ. ಎರಡನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ನಲ್ಲಿದ್ದು, ಹಾಗೂ ಮೂರನೇ ಕ್ಯಾಮೆರಾವು VGA ಸಾಮರ್ಥ್ಯದಲ್ಲಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೊ ಕಾಲಿಂಗ್ ಸೌಲಭ್ಯಕ್ಕಾಗಿ 8ಎಂಪಿಯ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಫೀಚರ್ಸ್

ಬ್ಯಾಟರಿ ಮತ್ತು ಫೀಚರ್ಸ್

ಟೆಕ್ನೋ ಸ್ಪಾರ್ಕ್‌ 4 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು, ಮತ್ತು 4G VoLTE, HiOS skin, ಆಂಡ್ರಾಯ್ಡ್ 9 ಓಎಸ್‌ ಸಪೋರ್ಟ್ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 4 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಮಾದರಿಯಲ್ಲಿ ಲಾಂಚ್ ಆಗಿದೆ. 3GB RAM ಮತ್ತು 32GB ಸ್ಟೋರೇಜ್ ವೇರಿಯಂಟ್ ಬೆಲೆಯು 7,999ರೂ.ಆಗಿದೆ. ಹಾಗೂ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ 8,999ರೂ ಪ್ರೈಸ್‌ಟ್ಯಾಗ್ ಹೊಂದಿದೆ.

Best Mobiles in India

English summary
Tecno Spark 4 will be offered in two storage variants with prices starting at Rs 7,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+