ಹೊಸ ಎಡಿಷನ್‌ನಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಟೆಕ್ನೊ ಕಂಪನಿಯು ಈಗಾಗಲೇ ಹಲವು ಸ್ಮಾರ್ಟ್‌ಫೋಸ್ಮಾರ್ಟ್‌ಫೋನ್‌ನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚೆಗೆ ಕ್ಯಾಮನ್‌ 19 ಪ್ರೊ ಫೋನ್‌ ಅನ್ನು ಪರಿಚಯಿಸಿತ್ತು. ಇದೀಗ ಹೊಸದಾಗಿ ಟೆಕ್ನೋ ಕ್ಯಾಮನ್ 19 ಪ್ರೊ ಮಾಂಡ್ರಿಯನ್ ಆವೃತ್ತಿ (Mondrian Edition). ಇದು ಬಣ್ಣವನ್ನು ಬದಲಾಯಿಸುವ ಬ್ಯಾಕ್ ಪ್ಯಾನಲ್ ವಿನ್ಯಾಸ ಹೊಂದಿದೆ.

 ಹೊಸ ಎಡಿಷನ್‌ನಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

ಹೌದು, ಟೆಕ್ನೋ ಕಂಪನಿಯು ಬಿಡುಗಡೆ ಮಾಡಿರುವ ಕ್ಯಾಮನ್‌ 19 ಪ್ರೊ ಫೋನ್‌ ಬಣ್ಣ ಬದಲಾಯಿಸುವ ಪ್ಯಾನಲ್‌ ಫೀಚರ್‌ನ್ನು ಒಳಗೊಂಡಿದೆ. ನೂತನವಾಗಿ ಲಾಂಚ್‌ ಆಗಿರುವ ಸ್ಮಾರ್ಟ್‌ ಫೋನ್‌ 8GB RAM ಮತ್ತು 128GB ಆಂತರಿಕ ಸ್ಟೋರೇಜ್‌ನಲ್ಲಿ ಲಭ್ಯವಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ OTA ಅಪ್‌ಡೇಟ್ ಮೂಲಕ 5GB ವರ್ಚುವಲ್ RAM ಅನ್ನು ಸಕ್ರಿಯಗೊಳಿಸಲು ಕಂಪೆನಿ ಯೋಜಿಸಿದೆ.

ಟೆಕ್ನೋ ಕ್ಯಾಮನ್‌ 19 ಪ್ರೊ ಮಾಂಡ್ರಿಯನ್ ಆವೃತ್ತಿಯು ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು ಕ್ವಾಡ್-ಎಲ್ಇಡಿ ಫ್ಲ್ಯಾಷ್ ಇದ್ದು, 32MP ಸೆಲ್ಫಿ ಕ್ಯಾಮರಾ ಇದರಲ್ಲಿದೆ. ಈ ಆವೃತ್ತಿಯು 5000mAh ಸಾಮರ್ಥ್ಯದ ಬ್ಯಾಟರಿ ಹಾಗೂ 33W ವೇಗದ ಚಾರ್ಜಿಂಗ್ ವ್ಯವಸ್ಥೆ ಇದೆ. ಈ ಸ್ಮಾರ್ಟ್‌ಫೋನ್‌ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

 ಹೊಸ ಎಡಿಷನ್‌ನಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

ಡಿಸ್‌ಪ್ಲೇ ರಚನೆ ಹೇಗಿದೆ
ಈ ಸ್ಮಾರ್ಟ್‌ಫೋನ್‌ ಆವೃತ್ತಿಯು 6.9 ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಪ್ಯಾನೆಲ್ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಹಾಗೂ 0.98mm ಬೆಜೆಲ್‌ಗಳು ಮತ್ತು ಸೆಂಟರ್ಡ್ ಪಂಚ್ ಹೋಲ್ ನಾಚ್ ಅನ್ನು ಒಳಗೊಂಡಿದೆ. ಇದರಲ್ಲಿ 2060 x 1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯ ಇದೆ.

ಪ್ರೊಸೆಸರ್‌ ಯಾವುದು
ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ 96 ಪ್ರೊಸೆಸರ್ ಹೊಂದಿದ್ದು, ಇಂಟಿಗ್ರೇಟೆಡ್ ಮಾಲಿ ಜಿ 57 ಜಿಪಿಯುನೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಏಕಕಾಲದಲ್ಲಿಹಲವಾರು ಆಪ್‌ಗಳನ್ನು ತೆರೆದು ತಡೆ ರಹಿತವಾಗಿ ಬಳಕೆ ಮಾಡಿಕೊಳ್ಳಬಹುದು. ಇದು 8GB RAM ಮತ್ತು 128GB ಸಂಗ್ರಹಣೆಯೊಂದಿಗೆ ಬಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ OS ಅನ್ನು ಪಡೆದುಕೊಂಡಿದೆ.

ಕ್ಯಾಮರಾ ವಿಶೇಷತೆ ಏನು?
ಈ ಫೋನ್‌ 64 MP + 50 MP + 2 MP ರಚನೆಯ ಟ್ರಿಪಲ್‌ ಕ್ಯಾಮೆರಾಗಳನ್ನು ಹೊಂದಿದೆ. ಕ್ಯಾಮೆರಾವು ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್ ಟು ಫೋಕಸ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 32 MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

 ಹೊಸ ಎಡಿಷನ್‌ನಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

ಬ್ಯಾಟರಿ ಹಾಗೂ ಇತರೆ ಮಾಹಿತಿ
ಈ ಸ್ಮಾರ್ಟ್‌ಫೋನ್‌ ಆವೃತ್ತಿಯು 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲ ಇದೆ. ಇದು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್ ಆಯ್ಕೆಯನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ, ಇದು ಪವರ್ ಬಟನ್‌ನಲ್ಲಿಯೇ ಎಂಬೆಡೆಡ್ ಆಗುತ್ತದೆ. ಜೊತೆಗೆ ಡ್ಯುಯಲ್-ಸಿಮ್, 4G, ವೈ-ಫೈ 802.11ac, ಬ್ಲೂಟೂತ್ 5.1, NFC, GPS ಆಯ್ಕೆಗಳಿವೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ ಮಾಂಡ್ರಿಯನ್ ಆವೃತ್ತಿಯ ಬೆಲೆ 17,999 ರೂ. ಗಳು. ಇನ್ನು ಸ್ಮಾರ್ಟ್‌ಫೋನ್ ಪೋಲಾರ್ ಬ್ಲೂ, ಇಕೋ ಬ್ಲಾಕ್, ಮಾಂಡ್ರಿಯನ್ ಬಣ್ಣಗಳಲ್ಲಿ ಬರುತ್ತದೆ. ಸೆಪ್ಟೆಂಬರ್ 22 ರಿಂದ ಅಮೆಜಾನ್ ಮೂಲಕ ಮುಂಗಡ ಬುಕಿಂಗ್‌ ಗೆ ಲಭ್ಯವಿದೆ. ಗ್ರಾಹಕರು ಎಸ್‌ಬಿಐ ಬ್ಯಾಂಕ್ ಕಾರ್ಡ್ ವಹಿವಾಟಿನ ಮೂಲಕ ಖರೀದಿಸಿದರೆ 10 % ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ.

Best Mobiles in India

English summary
Tecno Camon 19 Pro Mondrian Edition was launched. this is Tecno's first smartphone with a colour changing rear design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X