Home
ಸುದ್ದಿಜಾಲ

ಭಾರತದಲ್ಲಿ ಟೆಕ್ನೋದಿಂದ ಹೊಸ ಫೋನ್‌ ಲಾಂಚ್‌!..ಅಚ್ಚರಿ ಮೂಡಿಸಿದ ಫೀಚರ್ಸ್‌!

ಟೆಕ್ನೋ ಮೊಬೈಲ್‌ ಸಂಸ್ಥೆಯು ಅಗ್ಗದ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯು ಕ್ಯಾಮನ್‌ ಸರಣಿಯಲ್ಲಿ ಕೆಲವು ಸ್ಮಾರ್ಟ್‌ಫೋನ್‌ ಈಗಾಗಲೇ ಲಾಂಚ್ ಮಾಡಿದ್ದು, ಈಗ ಅದೇ ಸರಣಿಯಲ್ಲಿ ಹೊಸದಾಗಿ ಮತ್ತೊಂದು ಮೊಬೈಲ್‌ ಬಿಡುಗಡೆ ಮಾಡಿದೆ. ಅದುವೇ ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್‌ 5G ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 8050SoC ಪ್ರೊಸೆಸರ್‌ ಪಡೆದಿದೆ.

ಹೌದು, ಟೆಕ್ನೋ ಸಂಸ್ಥೆಯು ನೂತನವಾಗಿ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದ್ದು, ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ ಅಮೊಲೆಡ್‌ ಡಿಸ್‌ಪ್ಲೇ ಪಡೆದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಜೊತೆಗೆ 32 ಮೆಗಾಪಿಕ್ಸಲ್‌ AI ಕ್ಯಾಮೆರಾ ಸೌಲಭ್ಯ ಪಡೆದಿದೆ.

ಭಾರತದಲ್ಲಿ ಟೆಕ್ನೋದಿಂದ ಹೊಸ ಫೋನ್‌ ಲಾಂಚ್‌!..ಅಚ್ಚರಿ ಮೂಡಿಸಿದ ಫೀಚರ್ಸ್‌!

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಫೋನ್‌ ಕ್ಯಾಮೆರಾ ಅಂಶದಿಂದಲೂ ಗಮನ ಸೆಳೆದಿದ್ದು, ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 108 ಮೆಗಾಪಿಕ್ಸಲ್‌ ಆಗಿದೆ. ಜೊತೆಗೆ ಇನ್ನೊಂದು ಕ್ಯಾಮೆರಾವು 50 ಮೆಗಾಪಿಕ್ಸಲ್‌ ಇದ್ದು, RGBW ಸೆನ್ಸಾರ್‌ ಒಳಗೊಂಡಿದೆ. ಹಾಗೆಯೇ 5000mAh ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 1080 x 2400 ಪಿಕ್ಸಲ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿದ್ದು, ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಪ್ರೊಸೆಸರ್‌ ಪವರ್ ಏನಿದೆ : ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ 8GB RAM ಮತ್ತು 512GB ಆಂತರೀಕ ಸ್ಟೋರೇಜ್‌ ಪಡೆದಿದೆ. ಇದಲ್ಲದೆ 8GB ವರ್ಚುವಲ್ RAM ಅನ್ನು ಕೂಡ ಒಳಗೊಂಡಿದೆ.

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಕ್ಯಾಮೆರಾ ಸೆನ್ಸಾರ್ ವಿಶೇಷ : ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 108ಎಂಪಿ ಸೆನ್ಸಾರ್‌ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 50ಎಂಪಿ ಸೆನ್ಸಾರ್‌ ಪಡೆದಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾ 2ಎಂಪಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ 32ಎಂಪಿ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಬ್ಯಾಟರಿ ಬಲ ಹಾಗೂ ಇತರೆ ಆಯ್ಕೆ ಮಾಹಿತಿ : ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್‌ಗೆ ಸಪೋರ್ಟ್ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಹಾಗೂ ಹೆಡ್‌ಫೋನ್‌ ಜ್ಯಾಕ್‌ ಸೌಲಭ್ಯ ಪಡೆದಿದೆ.

ಬೆಲೆ ಮತ್ತು ಲಭ್ಯತೆ : ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಫೋನ್‌ 8GB + 512GB ವೇರಿಯಂಟ್‌ ಬೆಲೆಯು 29,999ರೂ. ಆಗಿದೆ. ಇನ್ನು ಈ ಫೋನ್‌ ಸೆರಿನಿಟಿ ಬ್ಲೂ ಮತ್ತು ಡಾರ್ಕ್ ವೆಲ್ಕಿನ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಈ ಫೋನ್‌ ಅಮೆಜಾನ್‌ ನ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
TECNO CAMON 20 Premier 5G with Dimensity 8050 launched in India. price starts at Rs. 29999. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+