ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಟೆಕ್ನೋ ಕ್ಯಾಮನ್ 30 5G ಫೋನ್!
ಟೆಕ್ನೋ ಮೊಬೈಲ್ ಸಂಸ್ಥೆಯು ನೂತನವಾಗಿ ಟೆಕ್ನೋ ಕ್ಯಾಮನ್ 30 (TECNO CAMON 30 5G) ಸ್ಮಾರ್ಟ್‌ಫೋನ್ ಸರಣಿಯನ್ನು ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯು ಟೆಕ್ನೋ ಕ್ಯಾಮನ್ 30 ಹಾಗೂ ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ ಫೋನ್‌ಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳು 5000mAh ಬ್ಯಾಟರಿ ಒಳಗೊಂಡಿದ್ದು, ಆ ಪೈಕಿ ಟೆಕ್ನೋ ಕ್ಯಾಮನ್ 30 5G ಗಮನ ಸೆಳೆದಿದೆ.
ಹೌದು, ಟೆಕ್ನೋ ಸಂಸ್ಥೆಯು ಟೆಕ್ನೋ ಕ್ಯಾಮನ್ 30 5G ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 100 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯವನ್ನು ಪಡೆದುಕೊಂಡಿದೆ.

ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಐಸ್‌ಲ್ಯಾಂಡ್ ಬಸಲ್ಟಿಕ್ ಡಾರ್ಕ್ ಹಾಗೂ ಸಾಲ್ಟ್ ವೈಟ್ ಕಲರ್ ಆಯ್ಕೆಗಳನ್ನು ಪಡೆದಿದೆ. ಹಾಗಾದರೇ ಟೆಕ್ನೋ ಕ್ಯಾಮನ್ 30 5G ಫೋನಿನ ಬೆಲೆ ಎಷ್ಟು, ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಕ್ಯಾಮನ್ 30 5G ಫೀಚರ್ಸ್
ಟೆಕ್ನೋ ಕ್ಯಾಮನ್ 30 5G ಫೋನ್ 6.68 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 1200 nits ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿವೆ.
ಟೆಕ್ನೋ ಕ್ಯಾಮನ್ 30 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, ಇದರ ಜೊತೆಗೆ ಮಾಲಿ ಜಿ610 ಜಿಪಿಯು ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ 8 GB + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದಿದೆ.
ಟೆಕ್ನೋ ಕ್ಯಾಮನ್ 30 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 100 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 50 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿದೆ.
ಟೆಕ್ನೋ ಕ್ಯಾಮನ್ 30 5G ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 70W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB-C ಪೋರ್ಟ್, 3.5mm ಜ್ಯಾಕ್, ವೈಫೈ, ಬ್ಲೂಟೂತ್, NFC, ಡ್ಯುಯಲ್ 5G VoLTE, ಡಾಲ್ಬಿ ಅಟ್ಮಾಸ್ ಆಡಿಯೋ ಅನ್ನು ಒಳಗೊಂಡಿವೆ.
ಟೆಕ್ನೋ ಕ್ಯಾಮನ್ 30 5G ಫೋನ್ 8 GB + 256 GB ಸ್ಟೋರೇಜ್ ವೇರಿಯಂಟ್ 22,999 ರೂ. ಗಳ ಬೆಲೆಯನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಐಸ್‌ಲ್ಯಾಂಡ್ ಬಸಲ್ಟಿಕ್ ಡಾರ್ಕ್ ಹಾಗೂ ಸಾಲ್ಟ್ ವೈಟ್ ಕಲರ್ ಆಯ್ಕೆಗಳನ್ನು ಪಡೆದಿದೆ.


Click it and Unblock the Notifications








