Tecno: ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್: 1 TB ವರೆಗೂ ಸ್ಟೋರೇಜ್ ಆಯ್ಕೆ
ಟೆಕ್ನೋ ಸ್ಮಾರ್ಟ್‌ಫೋನ್‌ಗಳು (Tecno smartphone) ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಸೇಲ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿವೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್ ನೀಡುತ್ತಿರುವುದು. ಅದರಂತೆ ಇದೀಗ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ವೊಂದಕ್ಕೆ ಬೆಸ್ಟ್ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್‌ಗೆ (Tecno Common 20s Pro 5G Smartphone) ಉತ್ತಮ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 256 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹೊಂದಿದ್ದು, ಈ ಬೆಲೆ ವಿಭಾಗದಲ್ಲಿ ಅತ್ಯುತ್ತಮ ಫೋನ್ ಎನಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್: ಈ ಫೋನ್ 25,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 21,830 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್ ಮೇಲೆ ಫ್ಲಿಪ್‌ಕಾರ್ಟ್(Flipkart) 16% ರಿಯಾಯಿತಿ ಘೋಷಣೆ ಮಾಡಿದೆ. ಅದಾಗ್ಯೂ ನೀವು ಬ್ಯಾಂಕ್ ಕೊಡುಗೆ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದು.
ಬ್ಯಾಂಕ್ ಆಫರ್ ವಿಚಾರಕ್ಕೆ ಬರುವುದಾದರೆ BOB ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ, BOB ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ಇನ್ನೂ ಅನೇಕ ರೀತಿಯ ಆಫರ್ ಅನ್ನು ಈ ಫೋನ್ ಮೇಲೆ ಪಡೆಯಬಹುದು. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಕಡೆ ಕಣ್ಣಾಯಿಸೋಣ ಬನ್ನಿ.

ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ.
ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮಾಲಿ-G77 MC9 ಗ್ರಾಪಿಕ್ಸ್ ಕಾರ್ಡ್ ಬಲ ಪಡೆದಿದ್ದು, ಆಂಡ್ರಾಯ್ಡ್ 13 ಓಎಸ್‌ನಲ್ಲಿ ರನ್ ಆಗಲಿದೆ. ಹಾಗೆಯೇ ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ಹಾಗೂ 256 GB ಇಂಟರ್ ಸ್ಟೋರೇಜ್ ಬೆಂಬಲದೊಂದಿಗೆ 1 TB ವರೆಗೆ ವಿಸ್ತರಿಸಲು ಅನುವು ಮಾಡಿಕೊಡಲಿದೆ.
ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 64MP + 2MP + 2MP ನ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಸೆನ್ಸರ್‌ಗಳು ಡಿಜಿಟಲ್ ಜೂಮ್,ಆಟೋ ಫ್ಲಾಶ್, ಫೇಸ್ ಫೈಂಡ್, ಟಚ್ ಫಾರ್ ಫೋಕಸ್ ಫೀಚರ್ಸ್ ಪಡೆದಿದೆ. ಹಾಗೆಯೇ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಟೆಕ್ನೋ ಕಾಮನ್ 20s ಪ್ರೊ 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 5G, 4G VOLTE, 4G ನೆಟ್‌ವರ್ಕ್ ಬೆಂಬಲ, ಬ್ಲೂಟೂತ್ ಆವೃತ್ತಿ 5.2, ವೈ-ಫೈ ಆವೃತ್ತಿ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಹಾಟ್‌ಸ್ಪಾಟ್, ಯುಎಸ್‌ಬಿ ಟೆಥರಿಂಗ್, 3.5ಮಿ.ಮೀ ಆಡಿಯೋ ಜಾಕ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.


Click it and Unblock the Notifications








