Home
ಸುದ್ದಿಜಾಲ

ಗ್ರಾಹಕರಿಗೆ ಸಿಹಿಸುದ್ದಿ; ಈ 5G ಮೊಬೈಲ್‌ ಖರೀದಿಸಿದರೆ, ಸ್ಮಾರ್ಟ್‌ವಾಚ್‌ ಉಚಿತ!

ಪ್ರಿಯ ಗ್ರಾಹಕರೇ, ಪ್ರಸ್ತುತ ನೀವೇನಾದರೂ ಬಜೆಟ್‌ ಪ್ರೈಸ್‌ ರೇಂಜ್‌ನಲ್ಲಿ ನೂತನ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಆಲೋಚನೆ ಮಾಡಿದ್ದರೆ, ಈ ಡಿಸ್ಕೌಂಟ್‌ ಆಫರ್‌ ಖಂಡಿತಾ ನಿಮಗೆ ಸೂಕ್ತ ಎನಿಸುತ್ತದೆ. ಏಕೆಂದರೆ, ಟೆಕ್ನೋ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಟೆಕ್ನೋ ಕ್ಯಾಮನ್‌ 30 5G ಫೋನ್‌ ಖರೀದಿಯ ಜೊತೆಗೆ ಅಮೊಲೆಡ್‌ ಸ್ಮಾರ್ಟ್‌ವಾಚ್‌ ಉಚಿತವಾಗಿ ಲಭ್ಯ ಸಿಗಲಿದೆ. ಈ ಕೊಡುಗೆಯು ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ಟೆಕ್ನೋ ಡೇಸ್‌ ಸೇಲ್‌ನಲ್ಲಿ ಲಭ್ಯ ಇದ್ದು, ಈ ಮಾರಾಟವು ಇದೇ ಜೂನ್ 20 ರ ವರೆಗೂ ಲೈವ್‌ ಇರಲಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಇದೀಗ ಟೆಕ್ನೋ ಡೇಸ್‌ ಸೇಲ್‌ (Tecno Days) ಚಾಲ್ತಿ ಇದೆ. ಈ ಕೊಡುಗೆಯಲ್ಲಿ ಟೆಕ್ನೋ ಸಂಸ್ಥೆಯು ಆಯ್ದ ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯ ಇದೆ. ಹಾಗೆಯೇ ಟೆಕ್ನೋ ಕ್ಯಾಮನ್‌ 30 5G (TECNO CAMON 30 5G) ಮೊಬೈಲ್‌ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಡಿಸ್ಕೌಂಟ್‌ ಜೊತೆಗೆ ಈ ಫೋನ್‌ ಖರೀದಿಯೊಂದಿಗೆ ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ ಉಚಿತ ಕೊಡುಗೆ ತಿಳಿಸಲಾಗಿದೆ.

ಗ್ರಾಹಕರಿಗೆ ಸಿಹಿಸುದ್ದಿ; ಈ 5G ಮೊಬೈಲ್‌ ಖರೀದಿಸಿದರೆ, ಸ್ಮಾರ್ಟ್‌ವಾಚ್‌ ಉಚಿತ!

ಇನ್ನು ಟೆಕ್ನೋ ಕ್ಯಾಮನ್‌ 30 5G ಫೋನ್‌ 16GB*+256GB ಸ್ಟೋರೇಜ್‌ ವೇರಿಯಂಟ್‌ ಶೇ 18% ರಷ್ಟು ರಿಯಾಯಿತಿ ಪಡೆದಿದ್ದು, 22,999ರೂ. ಗಳ ಆಫರ್‌ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇತರೆ ಕೊಡುಗೆ ಪಡೆದುಕೊಂಡರೆ, ಗ್ರಾಹಕರು ಇದನ್ನು 19,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಕ್ಯಾಮನ್‌ 30 5G ಫೀಚರ್ಸ್‌ ಹೀಗಿವೆ

ಟೆಕ್ನೋ ಕ್ಯಾಮನ್‌ 30 5G ಮೊಬೈಲ್‌ 6.68 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಸಪೋರ್ಟ್‌ ಮಾಡಲಿದೆ. ಇನ್ನು ಡಿಸ್‌ಪ್ಲೇ 1200 nits ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಒಳಗೊಂಡಿವೆ.

ಟೆಕ್ನೋ ಕ್ಯಾಮನ್‌ 30 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದ್ದು, ಇದರ ಜೊತೆಗೆ ಮಾಲಿ ಜಿ610 ಜಿಪಿಯು ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್ 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದಿದೆ.

ಟೆಕ್ನೋ ಕ್ಯಾಮನ್‌ 30 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾವು 100 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ.

ಟೆಕ್ನೋ ಕ್ಯಾಮನ್‌ 30 5G ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 70W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB-C ಪೋರ್ಟ್, 3.5mm ಜ್ಯಾಕ್, ವೈಫೈ, ಬ್ಲೂಟೂತ್, NFC, ಡ್ಯುಯಲ್ 5G VoLTE, ಡಾಲ್ಬಿ ಅಟ್ಮಾಸ್‌ ಆಡಿಯೋ ಅನ್ನು ಒಳಗೊಂಡಿವೆ. ಹಾಗೆಯೇ ಈ ಫೋನ್ ಐಸ್‌ಲ್ಯಾಂಡ್‌ ಬಸಲ್ಟಿಕ್ ಡಾರ್ಕ್ ಹಾಗೂ ಸಾಲ್ಟ್‌ ವೈಟ್‌ ಕಲರ್‌ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Tecno Days sale: Big discount on TECNO CAMON 30 5G with Free itel icon 3 AMOLED Smartwatch. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+