ಈ ದೈತ್ಯ ಫ್ಲಿಪ್ ಸ್ಮಾರ್ಟ್‌ಫೋನಿಗೂ ಬಿಗ್ ಆಫರ್!..ಈ ಚಾನ್ಸ್ ಬಿಡಬೇಡಿ!
ಅನೇಕ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಮುಂದಾಗುತ್ತಾರೆ. ಅಮೆಜಾನ್ ಇ ಕಾಮರ್ಸ್ ಖರೀದಿದಾರರನ್ನು ಆಕರ್ಷಿಸಲು ಒಂದಿಲ್ಲೊಂದು ಆಫರ್ ಲಭ್ಯ ಮಾಡುತ್ತಲೇ ಸಾಗಿದೆ. ಮುಖ್ಯವಾಗಿ ಫೋನ್‌ಗಳಿಗೆ ಅಧಿಕ ಡಿಸ್ಕೌಂಟ್ ನೀಡುತ್ತದೆ. ಅಮೆಜಾನ್ ಸದ್ಯ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೋನ್ ಜಬರ್ದಸ್ತ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಪ್ರಮುಖ ಇ ಕಾಮರ್ಸ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಸ್ಮಾರ್ಟ್‌ಫೋನ್ ಶೇ. 24% ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 16GB RAM + 256GB ವೇರಿಯಂಟ್ ಫೋನ್ 54,999.ರೂ ಗಳ ಆಫರ್ ಬೆಲೆಯಲ್ಲಿ ದೊರೆಯುತ್ತದೆ. ಅದಾಗ್ಯೂ, ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್ ಕೊಡುಗೆ, ಬ್ಯಾಂಕ್ ಆಫರ್ ಹಾಗೂ ಇತರೆ ಪಡೆದರೆ 53,999ರೂ. ಗಳಿಗೆ ಖರೀದಿಸಬಹುದು.

ಅಂದಹಾಗೆ ಈ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್ ಶಕ್ತಿಯೊಂದಿಗೆ ಕೆಲಸ ಮಾಡಲಿದ್ದು, ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಒಳಗೊಂಡಿದೆ. ಇನ್ನುಳಿದಂತೆ ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ವಿನ್ಯಾಸದ ಮಾಹಿತಿ
ಟೆಕ್ನೋ ಸಂಸ್ಥೆಯ ಈ ಫೋನ್ 6.9 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 1000 ನೀಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಪಡೆದಿದ್ದು, ಇದಲ್ಲದೆ 1.32 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕವರ್ ಡಿಸ್‌ಪ್ಲೇ ಮೂಲಕವೇ ಬಳಕೆದಾರರು ಸಂದೇಶಗಳಿಗೆ ರಿಪ್ಲೇ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಪ್ರೊಸೆಸರ್ ಕಾರ್ಯವೈಖರಿ ಮಾಹಿತಿ
ಟೆಕ್ನೋ ಫ್ಯಾಂಟಮ್ V ಫ್ಲಿಪ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್‌ನಲ್ಲಿ ಕಾರ್ಯ ಮಾಡಲಿದ್ದು, ಜೊತೆಗೆ ಮಾಲಿ-G77 GPU ಸಪೊರ್ಟ್ ಪಡೆದಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 13.5 ಬೆಂಬಲ ಕೂಡಾ ಒಳಗೊಂಡಿದೆ. ಹಾಗೆಯೇ 8GB RAM ಅನ್ನು 256GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದ್ದು, ಇದರೊಂದಿಗೆ 16GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವ ಚಾನ್ಸ್ ಇದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಟೆಕ್ನೋದ ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ದ್ವಿತೀಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿರುವ ಜತೆಗೆ ಕ್ವಾಡ್ ಫ್ಲ್ಯಾಶ್‌ಲೈಟ್ ಯೂನಿಟ್ ಸೌಲಭ್ಯ ಪಡೆದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಸೌಲಭ್ಯ
ಟೆಕ್ನೋ ಕಂಪನಿಯ ಈ ಮೊಬೈಲ್ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಜೊತೆಗೆ ಎಲ್ಲಾ GPT 3.0 ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಸ್ಮಾರ್ಟ್‌ಫೋನ್ ಅನ್ನು ನೀವು ಫೋಲ್ಡ್ ಮಾಡಿದಾಗ 88.77mm x 74.05mm x 14.95mm ಗಾತ್ರದಲ್ಲಿ ಇದೆ.


Click it and Unblock the Notifications








