Home
ಸುದ್ದಿಜಾಲ

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಖರೀದಿಗೆ ಡೇಟ್‌ ಫಿಕ್ಸ್‌!..ಬೆಲೆಗೆ ಬೆರಗಾದ ಗ್ರಾಹಕ!

ಟೆಕ್ನೋ ಮೊಬೈಲ್‌ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಫೋನ್‌ ದೈತ್ಯ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಫೋಲ್ಡಬಲ್‌ ಮಾದರಿಯ ರಚನೆ ಪಡೆದಿದ್ದು, ತನ್ನ ಡಿಸೈನ್‌ನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಅಕ್ಟೋಬರ್ 1 ರಿಂದ ಖರೀದಿಗೆ ಲಭ್ಯವಾಗಲಿದೆ.

ಹೌದು, ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಮೊಬೈಲ್‌ ಇದೇ ಅಕ್ಟೋಬರ್ 1, 2023 ರಿಂದ ಅಮೆಜಾನ್‌ (Amazon.in) ನಲ್ಲಿ ಖರೀದಿಗೆ ಲಭ್ಯ ಇರಲಿದ್ದು, 49,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಪಡೆದಿದೆ. ಗ್ರಾಹಕರು ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಖರೀದಿಸಬಹುದು. ಆಕರ್ಷಕ ಇಎಮ್‌ಐ ಕೊಡುಗೆಯು ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಖರೀದಿಗೆ ಡೇಟ್‌ ಫಿಕ್ಸ್‌!

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಡಿಸ್‌ಪ್ಲೇ ಮಾಹಿತಿ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಮೊಬೈಲ್‌ 6.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 1000 ನೀಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ಪಡೆದಿದ್ದು, ಇದಲ್ಲದೆ 1.32 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕವರ್‌ ಡಿಸ್‌ಪ್ಲೇ ಮೂಲಕವೇ ಬಳಕೆದಾರರು ಸಂದೇಶಗಳಿಗೆ ರಿಪ್ಲೇ ಮಾಡುವುದಕ್ಕೆ ಅವಕಾಶವನ್ನು ಸಹ ಒದಗಿಸಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಪ್ರೊಸೆಸರ್‌ ಸಾಮರ್ಥ್ಯ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಮಾಲಿ-G77 GPU ಸಪೊರ್ಟ್‌ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13.5 ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ 8GB RAM ಅನ್ನು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದ್ದು, ಜೊತೆಗೆ 16GB ವರೆಗೆ ವರ್ಚುವಲ್‌ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶ ಇದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಕ್ಯಾಮೆರಾ ಸೆನ್ಸಾರ್‌
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದು ಕ್ವಾಡ್ ಫ್ಲ್ಯಾಶ್‌ಲೈಟ್ ಯೂನಿಟ್‌ನೊಂದಿಗೆ ಬರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಬ್ಯಾಟರಿ ಮತ್ತು ಇತರೆ ಆಯ್ಕೆ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಜೊತೆಗೆ ಎಲ್ಲಾ GPT 3.0 ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಸ್ಮಾರ್ಟ್‌ಫೋನ್‌ ಅನ್ನು ನೀವು ಫೋಲ್ಡ್‌ ಮಾಡಿದಾಗ 88.77mm x 74.05mm x 14.95mm ಗಾತ್ರದಲ್ಲಿ ಇದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಬೆಲೆ ಮತ್ತು ಲಭ್ಯತೆ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಮೊಬೈಲ್‌ 8GB RAM + 256GB ಸ್ಟೋರೇಜ್‌ ಆಯ್ಕೆಗೆ ಭಾರತದಲ್ಲಿ 49,999ರೂ ದರ ಇದೆ. ಇನ್ನು ಈ ಫೋನ್‌ ಐಕಾನಿಕ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಡಾನ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಲು ಅವಕಾಶ ಇರಲಿದೆ. ಅಂದಹಾಗೆ ಅಮೆಜಾನ್‌ನಲ್ಲಿ ಇದೇ ಅಕ್ಟೋಬರ್ 1 ರಿಂದ ಖರೀದಿಸಬಹುದಾಗಿದೆ.

Best Mobiles in India

English summary
TECNO Phantom V Flip 5G will be available from October 1, 2023 on Amazon. know offer price, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+