ಟೆಕ್ನೋ ಫ್ಯಾಂಟಮ್ V ಫೋಲ್ಡ್ ಬೆಲೆಯಲ್ಲಿ ಸಖತ್ ಇಳಿಕೆ!..ಗ್ರಾಹಕರು ಫುಲ್ ಖುಷ್!
ಬಜೆಟ್ ಬೆಲೆಯಲ್ಲಿ ಹಲವು ಫೋನ್ ಪರಿಚಯಿಸಿ ಸೈ ಎನಿಸಿಕೊಂಡಿರುವ ಟೆಕ್ನೋ ಸಂಸ್ಥೆಯು ಹೈ ಎಂಡ್ ಫೀಚರ್ಸ್‌ನ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಮೂಲಕ ಗಮನ ಸೆಳೆದಿದೆ. ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ. ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣ ಗ್ರೇಟ್ ಸಮ್ಮರ್ ಸೇಲ್ ಆಯೋಜಿಸಿದೆ. ಈ ಮಾರಾಟದಲ್ಲಿ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್ ಬೆಲೆಯು 1,09,999 ರೂ. ಗಳು ಆಗಿದ್ದು, ಕೊಡುಗೆಯಲ್ಲಿ ಈ ಫೋನ್ 88,888ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್ 12 GB RAM + 256 GB ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಹಾಗಾದರೆ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಫ್ಯಾಂಟಮ್ V ಫೋಲ್ಡ್ ಡಿಸ್‌ಪ್ಲೇ ರಚನೆ : ಈ ಫೋಲ್ಡಬಲ್ ಫೋನ್ 6.42 ಇಂಚಿನ LTPO ಔಟರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು FHD+ ಪ್ಯಾನೆಲ್ ಆಗಿದೆ. ಹಾಗೆಯೇ 2296 X 2000 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 7.65 ಇಂಚಿನ 2K LTPO ಅಮೋಲೆಡ್ ಫೋಲ್ಡಬಲ್ ಡಿಸ್‌ಪ್ಲೇ ಇದ್ದು, ಅಟೋಮ್ಯಾಟಿಕ್ ಆಗಿ 10Hz ನಿಂದ 120Hz ನಡುವೆ ರಿಫ್ರೆಶ್ ರೇಟ್ ಅನ್ನು ಬದಲಾಯಿಸಿಕೊಳ್ಳುತ್ತದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಚಿಪ್‌ಸೆಟ್‌ಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಫೋನ್ ಹೊಸದಾದರೂ ಈ ಸ್ಟೋರೇಜ್ ಆವೃತ್ತಿ ಮಾತ್ರ ಹಳೆಯದಾಗಿದೆ.
ಟೆಕ್ನೋ ಫ್ಯಾಂಟಮ್ V ಫೋಲ್ಡ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು 50 ಮೆಗಾಪಿಕ್ಸೆಲ್ 2x ಪೋಟ್ರೇಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಡಿವೈಸ್ ಅನ್ನು ಓಪನ್ ಮಾಡಿದಾಗ ಹೊರಗಿನ ಡಿಸ್‌ಪ್ಲೇನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ, ಇನ್ನುಳಿದಂತೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಟೆಕ್ನೋ ಫ್ಯಾಂಟಮ್ V ಫೋಲ್ಡ್ ಬ್ಯಾಟರಿ ಸಾಮರ್ಥ್ಯ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 45W ವೇಗದ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಆದರೆ, ಈ ಹಿಂದೆ ಲಾಂಚ್ ಆಗಿರುವ ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ 4,400mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 25W ವೇಗದ ಚಾರ್ಜ್‌ಗೆ ಬೆಂಬಲ ಪಡೆದಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ನ ಇತರೆ ಫೀಚರ್ಸ್: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಪಡೆದುಕೊಂಡಿದ್ದು, ಇದರಲ್ಲಿನ ಸ್ಟೀರಿಯೋ ಸ್ಪೀಕರ್ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುತ್ತದೆ. ಹಾಗೆಯೇ ಏರೋಸ್ಪೇಸ್-ಗ್ರೇಡ್ ನವೀನ ಡ್ರಾಪ್ ಆಕಾರದ ಹಿಂಜ್ ಅನ್ನು ಹೊಂದಿದ್ದು, ಈ ಮೂಲಕ ಮೃದುವಾಗಿ ಮಡಿಸಬಹುದಾಗಿದೆ.
ಟೆಕ್ನೋ ಫ್ಯಾಂಟಮ್ V ಫೋಲ್ಡ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಬಣ್ಣದ ಆಯ್ಕೆ ಪಡೆದಿದ್ದು, ಜೊತೆಗೆ 12 GB RAM + 256 GB ವೇರಿಯಂಟ್ ಆಯ್ಕೆ ಸಹ ಪಡೆದಿದೆ.


Click it and Unblock the Notifications








