Home
ಸುದ್ದಿಜಾಲ

ಈ ಫೋಲ್ಡ್ ಮಾದರಿಯ ಫೋನಿನ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

ಮೊಬೈಲ್‌ ಮಾರುಕಟ್ಟೆಯಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಮೊಬೈಲ್‌ ಪರಿಚಯಿಸಿ ಗಮನ ಸೆಳೆದಿರುವ ಟೆಕ್ನೋ ಸಂಸ್ಥೆಯು ಹೈ ಎಂಡ್‌ ಫೀಚರ್ಸ್‌ನ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಸದ್ಯ ಈ ಫೋಲ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಗಮನಾರ್ಹ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಟೆಕ್ನೋ ಸಂಸ್ಥೆಯ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಶೇ. 36% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 12GB RAM + 256GB ಸ್ಟೋರೇಜ್‌ ಅನ್ನು ಗ್ರಾಹಕರು ಆಫರ್‌ನಲ್ಲಿ 69,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇತರೆ ಕೆಲವು ಆಯ್ದ ಬ್ಯಾಂಕ್‌ ಡಿಸ್ಕೌಂಟ್‌ಗಳು ಕೂಡಾ ಖರೀದಿದಾರರಿಗೆ ಲಭ್ಯ ಆಗಲಿವೆ.

ಈ ಫೋಲ್ಡ್ ಮಾದರಿಯ ಫೋನಿನ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

ಅಂದಹಾಗೆ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಪಡೆದಿದೆ. ಹಾಗಾದರೆ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಮೊಬೈಲ್‌ - ಫೀಚರ್ಸ್‌

ಟೆಕ್ನೋ ಸಂಸ್ಥೆಯ ಈ ಫೋಲ್ಡಬಲ್‌ ಫೋನ್ 6.42 ಇಂಚಿನ LTPO ಔಟರ್‌ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದ್ದು, ಇದು FHD+ ಪ್ಯಾನೆಲ್ ಆಗಿದೆ. ಹಾಗೆಯೇ 2296 X 2000 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 7.65 ಇಂಚಿನ 2K LTPO ಅಮೋಲೆಡ್‌ ಫೋಲ್ಡಬಲ್ ಡಿಸ್‌ಪ್ಲೇ ಇದ್ದು, ಅಟೋಮ್ಯಾಟಿಕ್‌ ಆಗಿ 10Hz ನಿಂದ 120Hz ನಡುವೆ ರಿಫ್ರೆಶ್‌ ರೇಟ್‌ ಅನ್ನು ಬದಲಾಯಿಸಿಕೊಳ್ಳುತ್ತದೆ.

ಈ ಫೋಲ್ಡ್ ಮಾದರಿಯ ಫೋನಿನ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಚಿಪ್‌ಸೆಟ್‌ ಪ್ರೊಸೆಸರ್‌ ಪವರನಲ್ಲಿ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಅಲ್ಲದೇ 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್‌ ಮತ್ತು 50 ಮೆಗಾ ಪಿಕ್ಸೆಲ್ 2x ಪೋಟ್ರೇಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಇನ್ನು ಈ ಡಿವೈಸ್‌ ಅನ್ನು ಓಪನ್‌ ಮಾಡಿದಾಗ ಹೊರಗಿನ ಡಿಸ್‌ಪ್ಲೇನಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ. ಇನ್ನು ಈ ಫೋಲ್ಡ್‌ ಮಾದರಿಯಲ್ಲಿ ಕಾಣಿಸಿಕೊಂಡಿರವ ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ 4,400mAh ಬ್ಯಾಟರಿ ಪವರ್‌ ಸಾಮರ್ಥ್ಯ ಹೊಂದಿದ್ದು, 25W ಫಾಸ್ಟ್‌ ಚಾರ್ಜ್‌ಗೆ ಬೆಂಬಲ ಪಡೆದಿದೆ.

ಈ ಮೊಬೈಲ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಅನ್ನು ಪಡೆದುಕೊಂಡಿದ್ದು, ಇದರಲ್ಲಿನ ಸ್ಟೀರಿಯೋ ಸ್ಪೀಕರ್‌ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ಒದಗಿಸುತ್ತದೆ. ಹಾಗೆಯೇ ಏರೋಸ್ಪೇಸ್-ಗ್ರೇಡ್ ನವೀನ ಡ್ರಾಪ್ ಆಕಾರದ ಹಿಂಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ ಬಣ್ಣದ ಆಯ್ಕೆ ಪಡೆದಿದ್ದು, ಜೊತೆಗೆ 12 GB RAM + 256 GB ವೇರಿಯಂಟ್‌ ಆಯ್ಕೆ ಸಹ ಪಡೆದಿದೆ.

Best Mobiles in India

English summary
TECNO Phantom V Fold 5G received biggest price drop in india. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+