Home
ಸುದ್ದಿಜಾಲ

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರಿ-ಬುಕ್ಕಿಂಗ್ ಪ್ರಾರಂಭ: ಅಚ್ಚರಿಯ ಬೆಲೆ!

ಟೆಕ್ನೋ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಟೆಕ್ನೋ ಫ್ಯಾಂಟಮ್ V ಫೋಲ್ಡ್ (Tecno Phantom V Fold) ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿದೆ. ಈ ಸ್ಮಾರ್ಟ್‌ಫೋನ್‌ ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಪವರ್‌ಫುಲ್‌ ಫೋನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಇಂದಿನಿಂದ ಈ ಫೋನಿನ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.

ಹೌದು, ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್ ಪ್ರಿ-ಬುಕಿಂಗ್ ಶುರುವಾಗಿದ್ದು, ಇದೇ ಏ. 27 ರವರೆಗೂ ಪ್ರಿ-ಬುಕಿಂಗ್‌ಗೆ ಲಭ್ಯ ಇರುತ್ತದೆ. ಇನ್ನು ಈ ಫೋನ್‌ ಇದೇ ಏಪ್ರಿಲ್ 28 ರಂದು ಮೊದಲ ಸೇಲ್‌ ಪ್ರಾರಂಭಿಸಲಿದೆ. ಈ ಫೋನಿನ ಬೆಲೆಯು 88,888ರೂ. ಆಗಿದ್ದು, ಪ್ರಿ-ಬುಕಿಂಗ್‌ನಲ್ಲಿ 10 ಲಕ್ಕಿ ಗ್ರಾಹಕರಿಗೆ ಟೆಕ್ನೋ TWS ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯು ತನ್ನ ಟ್ವಿಟ್‌ನಲ್ಲಿ ತಿಳಿಸಿದೆ. ಈ ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರಿ-ಬುಕ್ಕಿಂಗ್ ಪ್ರಾರಂಭ: ಅಚ್ಚರಿಯ ಬೆಲೆ!

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಡಿಸ್‌ಪ್ಲೇ ರಚನೆ : ಈ ಫೋಲ್ಡಬಲ್‌ ಫೋನ್ 6.42 ಇಂಚಿನ LTPO ಔಟರ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು FHD+ ಪ್ಯಾನೆಲ್ ಆಗಿದೆ. ಹಾಗೆಯೇ 2296 X 2000 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 7.65 ಇಂಚಿನ 2K LTPO ಅಮೋಲೆಡ್‌ ಫೋಲ್ಡಬಲ್ ಡಿಸ್‌ಪ್ಲೇ ಇದ್ದು, ಅಟೋಮ್ಯಾಟಿಕ್‌ ಆಗಿ 10Hz ನಿಂದ 120Hz ನಡುವೆ ರಿಫ್ರೆಶ್‌ ರೇಟ್‌ ಅನ್ನು ಬದಲಾಯಿಸಿಕೊಳ್ಳುತ್ತದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರೊಸೆಸರ್‌ ಮಾಹಿತಿ: ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಚಿಪ್‌ಸೆಟ್‌ಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಫೋನ್‌ ಹೊಸದಾದರೂ ಈ ಸ್ಟೋರೇಜ್‌ ಆವೃತ್ತಿ ಮಾತ್ರ ಹಳೆಯದಾಗಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರಿ-ಬುಕ್ಕಿಂಗ್ ಪ್ರಾರಂಭ: ಅಚ್ಚರಿಯ ಬೆಲೆ!

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್‌ ಮತ್ತು 50 ಮೆಗಾಪಿಕ್ಸೆಲ್ 2x ಪೋಟ್ರೇಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಡಿವೈಸ್‌ ಅನ್ನು ಓಪನ್‌ ಮಾಡಿದಾಗ ಹೊರಗಿನ ಡಿಸ್‌ಪ್ಲೇನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ, ಇನ್ನುಳಿದಂತೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಬ್ಯಾಟರಿ ಸಾಮರ್ಥ್ಯ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 45W ವೇಗದ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಆದರೆ, ಈ ಹಿಂದೆ ಲಾಂಚ್‌ ಆಗಿರುವ ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ 4,400mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 25W ವೇಗದ ಚಾರ್ಜ್‌ಗೆ ಬೆಂಬಲ ಪಡೆದಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಪ್ರಿ-ಬುಕ್ಕಿಂಗ್ ಪ್ರಾರಂಭ: ಅಚ್ಚರಿಯ ಬೆಲೆ!

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ನ ಇತರೆ ಫೀಚರ್ಸ್‌: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಅನ್ನು ಪಡೆದುಕೊಂಡಿದ್ದು, ಇದರಲ್ಲಿನ ಸ್ಟೀರಿಯೋ ಸ್ಪೀಕರ್‌ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುತ್ತದೆ. ಹಾಗೆಯೇ ಏರೋಸ್ಪೇಸ್-ಗ್ರೇಡ್ ನವೀನ ಡ್ರಾಪ್ ಆಕಾರದ ಹಿಂಜ್ ಅನ್ನು ಹೊಂದಿದ್ದು, ಈ ಮೂಲಕ ಮೃದುವಾಗಿ ಮಡಿಸಬಹುದಾಗಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 88,888ರೂ. ಗಳ ಆರಂಭಿಕ ಬೆಲೆಯನ್ನು ಹೊಂದಿದ್ದು, ಬ್ಯಾಂಕ್‌ ಆಫರ್‌ ಲಭ್ಯವಾಗಲಿವೆ. ಇನ್ನು ಈ ಫೋನ್‌ ಇದೇ ಏಪ್ರಿಲ್ 28 ರಂದು ಮೊದಲ ಸೇಲ್‌ ಪ್ರಾರಂಭಿಸಲಿದೆ. ಈ ಫೋನಿನ ಬೆಲೆಯು 88,888ರೂ. ಆಗಿದೆ.

Best Mobiles in India

English summary
Tecno Phantom V Fold will be available for pre-booking until April 27th. The company is also offering free Tecno TWS earbuds for 10 lucky winners.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+