ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಲಾಂಚ್; ಅತ್ಯಾಕರ್ಷಕ ಶೈಲಿ!
ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಪ್ರಮುಖ ಬ್ರ್ಯಾಂಡ್‌ಗಳು ಸುಧಾರಿತ ಫೀಚರ್ಸ್ ಇರುವ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಅದರಂತೆ ಟೆಕ್ನೋ ಸಂಸ್ಥೆಯು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಈ ಫೋನ್ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫೋಲ್ಡ್ 4 ಗೆ ಪೈಪೋಟಿ ನೀಡಲಿದೆ.
ಹೌದು, ಭಾರತದಲ್ಲಿ ಬಹುನಿರೀಕ್ಷಿತ ಮೊದಲ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್( Tecno Phantom V Fold ) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ ಡೈಮೆನ್ಸಿಟಿ 9000+ ಪ್ರೊಸೆಸರ್ ಬಲ ಹೊಂದಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಿದ್ರೆ, ಈ ವಿಶೇಷ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ಫೋನ್‌ನ ಆಫರ್ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ನ ಡಿಸ್‌ಪ್ಲೆ ವಿವರ: ಈ ಫೋಲ್ಡಬಲ್ ಫೋನ್ 6.42 ಇಂಚಿನ LTPO ಔಟರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು FHD+ ಪ್ಯಾನೆಲ್ ಆಗಿದೆ. ಹಾಗೆಯೇ 2296 X 2000 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 7.65 ಇಂಚಿನ 2K LTPO ಅಮೋಲೆಡ್ ಫೋಲ್ಡಬಲ್ ಡಿಸ್‌ಪ್ಲೇ ಇದ್ದು, ಅಟೋಮ್ಯಾಟಿಕ್ ಆಗಿ 10Hz ನಿಂದ 120Hz ನಡುವೆ ರಿಫ್ರೆಶ್ ರೇಟ್ ಅನ್ನು ಬದಲಾಯಿಸಿಕೊಳ್ಳುತ್ತದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಪ್ರೊಸೆಸರ್ ಮಾಹಿತಿ: ಮೀಡಿಯಾಟೆಕ್ ಡೈಮೆನ್ಸಿಟಿ 9000+ ಚಿಪ್‌ಸೆಟ್‌ಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಫೋನ್ ಹೊಸದಾದರೂ ಈ ಸ್ಟೋರೇಜ್ ಆವೃತ್ತಿ ಮಾತ್ರ ಹಳೆಯದಾಗಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಕ್ಯಾಮೆರಾ ರಚನೆ: ಇದು ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು 50 ಮೆಗಾಪಿಕ್ಸೆಲ್ 2x ಪೋಟ್ರೇಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಡಿವೈಸ್ ಅನ್ನು ಓಪನ್ ಮಾಡಿದಾಗ ಹೊರಗಿನ ಡಿಸ್‌ಪ್ಲೇನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ, ಇನ್ನುಳಿದಂತೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಬ್ಯಾಟರಿ ಸಾಮರ್ಥ್ಯ: ಈ ವಿಶೇಷವಾದ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 45W ವೇಗದ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಆದರೆ, ಈ ಹಿಂದೆ ಲಾಂಚ್ ಆಗಿರುವ ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ 4,400mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 25W ವೇಗದ ಚಾರ್ಜ್‌ಗೆ ಬೆಂಬಲ ಪಡೆದಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ನ ಇತರೆ ಫೀಚರ್ಸ್: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಪಡೆದುಕೊಂಡಿದ್ದು, ಇದರಲ್ಲಿನ ಸ್ಟೀರಿಯೋ ಸ್ಪೀಕರ್ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುತ್ತದೆ. ಹಾಗೆಯೇ ಏರೋಸ್ಪೇಸ್-ಗ್ರೇಡ್ ನವೀನ ಡ್ರಾಪ್ ಆಕಾರದ ಹಿಂಜ್ ಅನ್ನು ಹೊಂದಿದ್ದು, ಈ ಮೂಲಕ ಮೃದುವಾಗಿ ಮಡಿಸಬಹುದಾಗಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 88,888ರೂ. ಗಳ ಆರಂಭಿಕ ಬೆಲೆಯನ್ನು ಹೊಂದಿದ್ದು, ಮೊದಲ ಮಾರಾಟದಲ್ಲಿ ರಿಯಾಯಿತಿ ನೀಡಲಾಗುತ್ತಿರುವುದರಿಂದ ನೀವು 77,777 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ HDB ಬ್ಯಾಂಕ್ ಕಾರ್ಡ್‌ಗಳ ಮೇಲೆ 5,000 ರೂ. ರಿಯಾಯಿತಿ ಸಹ ಲಭ್ಯ.

ಈ ಫೋನ್ ಕೇವಲ ಒಂದು ವೇರಿಯಂಟ್‌ನಲ್ಲಿ ಮಾತ್ರ ಲಭ್ಯ ಇದ್ದು, ನೀವು ಏಪ್ರಿಲ್ 12 ರಿಂದ ಖರೀದಿ ಮಾಡಬಹುದಾಗಿದೆ. ಇದರ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ ಬೆಲೆಯನ್ನು ಗಮನಿಸುವುದಾದರೆ ಈ ಫೋನ್ 1,54,998ರೂ. ಗಳ ಬೆಲೆಯೊಂದಿಗೆ ಮಾರಾಟ ಆಗುತ್ತಿದೆ. ಹೀಗಾಗಿ ಈ ಎರಡು ಫೋನ್‌ಗಳ ನಡುವೆ ಬೆಲೆ ಸಂಬಂಧ ಭಾರೀ ಅಂತರ ಇದೆ.


Click it and Unblock the Notifications








