ಈ ಫ್ಲ್ಯಾಗ್‌ಶಿಪ್ ಫೋನ್ ಬೆಲೆಯಲ್ಲಿ ನೇರ ಇಳಿಕೆ!..ಆಫರ್‌ಗೆ ಗ್ರಾಹಕರು ಫಿದಾ!
ಟೆಕ್ನೋ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದೆ. ಸಂಸ್ಥೆಯ ಟೆಕ್ನೋ ಫ್ಯಾಂಟಮ್ X2 5G ಫೋನ್ ಹೈ ಎಂಡ್ ಮಾದರಿಯ ಫೋನ್ ಆಗಿ ಕಾಣಿಸಿಕೊಂಡಿದ್ದು, ಈ ಫೋನ್ ಇದೀಗ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ಭರ್ಜರಿ ರಿಯಾಯಿತಿ ಪಡೆದಿದ್ದು, ಗ್ರಾಹಕರು ಭರ್ಜರಿ ಖುಷಿ ನೀಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ನಲ್ಲಿ ಟೆಕ್ನೋ ಫ್ಯಾಂಟಮ್ X2 5G ಫೋನ್ ಶೇ. 29% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8GB RAM + 256GB ವೇರಿಯಂಟ್ ಬೆಲೆಯು 51,999ರೂ. ಆಗಿದ್ದು, ಆದರೆ ಅಮೆಜಾನ್ ಕೊಡುಗೆಯಲ್ಲಿ ಈ ಫೋನ್ ಈಗ 36,998ರೂ. ಗಳಿಗೆ ಖರೀದಿ ಮಾಡಬಹುದು. ಇದರೊಂದಿಗೆ ಗ್ರಾಹಕರಿಗೆ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಲಭ್ಯ.

ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಪವರ್ ನಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಈ ಫೋನ್ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 45W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಹಾಗಾದರೇ ಟೆಕ್ನೋ ಫ್ಯಾಂಟಮ್ X2 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ ಹೇಗಿದೆ
ಟೆಕ್ನೋ ಫ್ಯಾಂಟಮ್ X2 5G ಮೊಬೈಲ್ 6.8 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ವನ್ನು ಒಳಗೊಂಡಿದೆ.

ಇದರೊಂದಿಗೆ ಇದರ ಡಿಸ್‌ಪ್ಲೇ 93.3% ಸ್ಕ್ರೀನ್ ಟು ಬಾಡಿ ಅನುಪಾತ ಅನ್ನು ಪಡೆದಿದ್ದು, 20:9 ರಚನೆಯ ಅನುಪಾತದ ರಚನೆ ಪಡೆದಿದೆ. ಇದರೊಂದಿಗೆ ಸ್ಕ್ರೀನ್ 120 Hz ರಿಫ್ರೆಶ್ ರೇಟ್ ಸಪೋರ್ಟ್ ಸಹ ಒಳಗೊಂಡಿದ್ದು, ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಪಡೆದಿದೆ.
ಪ್ರೊಸೆಸರ್ ಕಾರ್ಯ ವೈಖರಿ
ಟೆಕ್ನೋದ ಈ ಫೋನ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ ಮಾಲಿ-G710 MC10 GPU ಬೆಂಬಲ ಸಹ ಪಡೆದಿದ್ದು, ಜೊತೆಗೆ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಆಧಾರಿತ HiOS 12.0 ಓಎಸ್ ಸಪೋರ್ಟ್ ಇದೆ. ಹಾಗೆಯೇ ಈ ಫೋನ್ 8 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದೆ.
ಕ್ಯಾಮೆರಾ ರಚನೆ ವಿಶೇಷತೆ
ಸಂಸ್ಥೆಯ ಫ್ಯಾಂಟಮ್ X2 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇದರ ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಒದಗಿಸಲಾಗಿದೆ.
ಬ್ಯಟರಿ ಮತ್ತು ಇತರೆ ಆಯ್ಕೆಗಳ ಮಾಹಿತಿ
ಟೆಕ್ನೋ ಫ್ಯಾಂಟಮ್ X2 5G ಮೊಬೈಲ್ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯ Wi-Fi 2.4G, 5G & Wi-Fi 6, ಬ್ಲೂಟೂತ್ 5.3, GPS, OTG, NFC, ಮತ್ತು USB ಟೈಪ್-C ಪೋರ್ಟ್ ಸೌಲಭ್ಯಗಳನ್ನು ಇದು ಹೊಂದಿದೆ.


Click it and Unblock the Notifications








