ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X2 ಪ್ರೊ ಸ್ಮಾರ್ಟ್‌ಫೋನ್ ಲಾಂಚ್; ಶಕ್ತಿಶಾಲಿ ಪ್ರೊಸೆಸರ್ ಆಯ್ಕೆ!
ಟೆಕ್ನೋ ಸಂಸ್ಥೆಯು ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿಶೇಷವಾದ ಹಾಗೂ ಅಗತ್ಯ ಫೀಚರ್ಸ್ ಇರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಅನಾವರಣ ಮಾಡಿದೆ. ಅದರಂತೆ ಫ್ಯಾಂಟಮ್ ಎಕ್ಸ್ 2 ಸರಣಿಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆನಿಲ್ಲಾ ಫ್ಯಾಂಟಮ್ ಎಕ್ಸ್ 2 ಡ್ರಾಪ್‌ನೊಂದಿಗೆ ಅನಾವರಣಗೊಳಿಸಲಾಗಿತ್ತು. ಇದೀಗ ಈ ಸರಣಿಯ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಭಾರತದಲ್ಲಿ ಅನಾವರಣ ಮಾಡಿದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಟೆಕ್ನೋ ಸಂಸ್ಥೆಯು ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆಯಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿದ್ದು, ಇದೀಗ ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X2 ಪ್ರೊ (Tecno Phantom X2 Pro) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ 5,160 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ಡಿಸ್‌ಪ್ಲೇ ವಿವರ
ಟೆಕ್ನೋ ಫ್ಯಾಂಟಮ್ X2 ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ FHD+ ಅಮೋಲೆಡ್ ಕರ್ವ್ಡ ಡಿಸ್‌ಪ್ಲೇ ಹೊಂದಿದ್ದು, 20:9 ಆಕಾರ ಅನುಪಾತದೊಂದಿಗೆ 120Hz ರಿಫ್ರೆಶ್ ರೇಟ್ ಹಾಗೂ 360Hz ಟಚ್ ಸ್ಯಾಂಫ್ಲಿಂಗ್ ರೇಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ ಮೂಲಕ ಹೆಚ್ಚಿನ ರಕ್ಷಣೆ ಪಡೆದುಕೊಂಡಿದೆ. ಅದರಂತೆ ಕ್ಯಾಮೆರಾ ಉದ್ದೇಶಕ್ಕೆ ಈ ಡಿಸ್‌ಪ್ಲೇ ಪಂಚ್ ಹೋಲ್ ನಾಚ್ ಶೈಲಿ ಹೊಂದಿದೆ.
ಪ್ರೊಸೆಸರ್ ಬಗ್ಗೆ ಮಾಹಿತಿ
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ಅನ್ನು ಹೊಂದಿದ್ದು, ಈ ಫೋನ್ ಆಂಡ್ರಾಯ್ಡ್ 12 ಆಧಾರಿತ HiOS 12.0 ಅನ್ನು ರನ್ ಮಾಡುತ್ತದೆ. ಅದರಂತೆ 2GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಈ ಫೋನ್ ಪಡೆದುಕೊಂಡಿದೆ.

ಕ್ಯಾಮೆರಾ ರಚನೆ
ಈ ಹೊಸ ಫೋನ್ 50 ಮೆಗಾಪಿಕ್ಸೆಲ್1/1.3 ಸ್ಯಾಮ್‌ಸಂಗ್ ISOCELL GNV 3.0 ಸೆನ್ಸರ್ ಆಯ್ಕೆ ಪಡೆದುಕೊಳ್ಳುವುದರ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಅದರಂತೆ 13 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಸೆನ್ಸರ್ ಫೋಟೋಗಳಿಗೆ ವಿಶೇಷ ನೋಟ ನೀಡಲಿದೆ ಮತ್ತು 50 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಕ್ಯಾಮೆರಾ ಸಹ ಇದರಲ್ಲಿದ್ದು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.
ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ಟೆಕ್ನೋ ಫ್ಯಾಂಟಮ್ X2 ಪ್ರೊ ಸ್ಮಾರ್ಟ್‌ಫೋನ್ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,160 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ ದೀರ್ಘ ಸಮಯದ ಬ್ಯಾಕಪ್ ನೀಡಲಿದೆ.
ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X2 ಪ್ರೊ ನ 12GB/256GB ವೇರಿಯಂಟ್‌ಗೆ 49,999 ರೂ. ಗಳ ಬೆಲೆ ನಿಗದಿ ಪಡಿಸಲಾಗಿದೆ. ಅದರಲ್ಲೂ ಈ ಫೋನ್ ಖರೀದಿ ಮಾಡಲು ಪ್ರಿ ಬುಕ್ಕಿಂಗ್ ಆಯ್ಕೆ ನೀಡಲಾಗಿದ್ದು, ಅಮೆಜಾನ್ ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ. ಆದರೆ ಜನವರಿ 24 ರಿಂದ ಮಾರಾಟವಾಗಲಿದೆ ಎಂಬುದು ನಿಮ್ಮ ಗಮನಕ್ಕಿರಲಿ.

ಇನ್ನು ಅಮೆಜಾನ್ ಗ್ರಾಹಕರಿಗೆ 5,000 ರೂ. ಗಳ ಹೆಚ್ಚುವರಿ ವಿನಿಮಯ ಬೋನಸ್ ಸಹ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ ಖರೀದಿ ಮಾಡಿದರೆ 12 ತಿಂಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಮಾರ್ಸ್ ಆರೆಂಜ್ ಮತ್ತು ಸ್ಟಾರ್‌ಡಸ್ಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.


Click it and Unblock the Notifications








