ಟೆಕ್ನೋ ಪಾಪ್ 7 ಪ್ರೊ ಫೋನ್ ಈಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ!
ಟೆಕ್ನೋ ಕಂಪೆನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಟೆಕ್ನೋ ಪಾಪ್ 7 ಪ್ರೊ ಕಡಿಮೆ ಬೆಲೆಯಲ್ಲಿ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಸೇಲ್ ಆರಂಭಿಸಿದ್ದು, ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭಾರೀ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಅಗ್ಗದ ಫೋನ್ ಈಗ ಮತ್ತಷ್ಟು ಅಗ್ಗದ ಬೆಲೆಗೆ ಲಭ್ಯ.
ಹೌದು, ಇನ್ಫಿನಿಕ್ಸ್ ಕಂಪೆನಿಯ ಟೆಕ್ನೋ ಪಾಪ್ 7 ಪ್ರೊ ಅಮೆಜಾನ್‌ನಲ್ಲಿ 15% ರಿಯಾಯಿತಿ ಪಡೆದಿದೆ. 2 GB RAM + 64GB ವೇರಿಯಂಟ್ 6,799ರೂ. ದರದಲ್ಲಿ ಕಾಣಸಿಕೊಂಡಿದ್ದು, ಆದ್ರೆ, ಗ್ರಾಹಕರು 7,999ರೂ. ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ದೊರೆಯುತ್ತದೆ. ಈ ಫೋನಿನ ಇತರೆ ಫೀಚರ್ಸ್ ಮುಂದೆ ತಿಳಿಯೋಣ ಬನ್ನಿರಿ.

ಈ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದು 4GB RAM +64GB ಮತ್ತು 6GB RAM + 64GB ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಟೆಕ್ನೋ ಪಾಪ್ 7 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ 6.56 ಇಂಚಿನ HD+ ಡಾಟ್ ನಾಚ್ IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 20:9 ರಚನೆಯ ಅನುಪಾತವನ್ನು ಹೊಂದಿದೆ.
ಟೆಕ್ನೋ ಪಾಪ್ 7 ಪ್ರೊ ಪ್ರೊಸೆಸರ್ ಯಾವುದು : ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ಕೋರ್ ಮೀಡಿಯಾಟೆಕ್ ಹಿಲಿಯೋ A22 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಆಧಾರಿತ HiOS 11.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM +64GB ಮತ್ತು 6GB RAM + 64GB ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಟೆಕ್ನೋ ಪಾಪ್ 7 ಪ್ರೊ ಕ್ಯಾಮೆರಾ ಸೆಟ್‌ಅಪ್ : ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್‌ನೊಂದಿಗೆ 5 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.ಇದನ್ನು ಟಿಯರ್ ಡ್ರಾಪ್ ಕಟೌಟ್ ಸ್ಲಾಟ್‌ನಲ್ಲಿ ಇರಿಸಲಾಗಿದೆ.
ಟೆಕ್ನೋ ಪಾಪ್ 7 ಪ್ರೊ ಬ್ಯಾಟರಿ ಸಾಮರ್ಥ್ಯ : ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಇನ್-ದಿ-ಬಾಕ್ಸ್ 10W ಟೈಪ್ C ಅಡಾಪ್ಟರ್‌ನೊಂದಿಗೆ ಪ್ಯಾಕ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಇ-ದಿಕ್ಸೂಚಿ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ 4GB RAM +64GB ಇಂಟರ್ ಸ್ಟೋರೇಜ್ ಜೊತೆಗೆ 6GB RAM + 64GB ಇಂಟರ್ ಸ್ಟೋರೆಜ್ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಎಂಡ್‌ಲೆಸ್ ಬಾಲ್ಕ್ ಮತ್ತು ಯುಯುನಿ ಬ್ಲೂ ಕಲರ್ ಆಯ್ಕೆಗಳಲ್ಲಿ ಬರಲಿದೆ.


Click it and Unblock the Notifications








