ಈ ಸ್ಮಾರ್ಟ್‌ಫೋನಿಗೆ ಲಭ್ಯ ಇರುವ ಆಫರ್ ನಿಜಕ್ಕೂ ಅಚ್ಚರಿ ಮೂಡಿಸುತ್ತೆ!
ಟೆಕ್ನೋ ಮೊಬೈಲ್ ಸಂಸ್ಥೆಯ ಇತ್ತೀಚಿನ ಕೆಲವು ಆಂಡ್ರಾಯ್ಡ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿವೆ. ಆ ಪೈಕಿ ಸಂಸ್ಥೆಯ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ ಇದೀಗ ಆನ್‌ಲೈನ್ ತಾಣದಲ್ಲಿ ಆಕರ್ಷಕ ರಿಯಾಯಿತಿ ಪಡೆದಿದ್ದು, ಖರೀದಿದಾರರ ಗಮನ ಸೆಳೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ನಲ್ಲಿ ಟೆಕ್ನೋ ಪಾಪ್ 7 ಪ್ರೊ ಫೋನ್ ಬರೋಬ್ಬರಿ ಶೇ. 32% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 3GB RAM + 64GB ಸ್ಟೋರೇಜ್ ವೇರಿಯಂಟ್ 8,999ರೂ. ಬೆಲೆ ಅನ್ನು ಪಡೆದುಕೊಂಡಿದ್ದು, ಕೊಡುಗೆಯಲ್ಲಿ 6,099ರೂ. ಗಳಿಗೆ ಗ್ರಾಹಕರು ಖರೀದಿಸಲು ಬೊಂಬಾಟ್ ಅವಾಕಾಶ ಕೂಡಾ ಇದೆ. ಇದರೊಂದಿಗೆ ಗ್ರಾಹಕರಿಗೆ ಆಯ್ದ ಬ್ಯಾಂಕ್ ಆಫರ್ ಸೌಲಭ್ಯ ಸಹ ಸಿಗಲಿವೆ.

ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಉತ್ತಮ ಚಾರ್ಜಿಂಗ್ ಸೌಲಭ್ಯ ಅನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನುಳಿದಂತೆ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್ ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಮತ್ತು ರಚನೆ
ಟೆಕ್ನೋ ಪಾಪ್ 7 ಪ್ರೊ ಮೊಬೈಲ್ 6.56 ಇಂಚಿನ HD+ ಡಾಟ್ ನಾಚ್ IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 20:9 ರಚನೆಯ ಅನುಪಾತವನ್ನು ಪಡೆದಿದೆ.
ಪ್ರೊಸೆಸರ್ ಪವರ್ ಯಾವುದು
ಟೆಕ್ನೋ ಪಾಪ್ 7 ಪ್ರೊ ಮೊಬೈಲ್ ಕ್ವಾಡ್‌ಕೋರ್ ಮೀಡಿಯಾಟೆಕ್ ಹಿಲಿಯೋ A22 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಆಧಾರಿತ HiOS 11.0 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 2GB RAM + 64GB ಮತ್ತು 3GB RAM + 64GB ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ 6GB ವರೆಗೂ RAM ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ರಚನೆಯ ಮಾಹಿತಿ
ಟೆಕ್ನೋ ಪಾಪ್ 7 ಪ್ರೊ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್‌ನೊಂದಿಗೆ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದನ್ನು ಟಿಯರ್ ಡ್ರಾಪ್ ಕಟೌಟ್ ಸ್ಲಾಟ್‌ನಲ್ಲಿ ಇರಿಸಲಾಗಿದೆ.
ಅಧಿಕ ಬ್ಯಾಟರಿ ಸಾಮರ್ಥ್ಯ
ಟೆಕ್ನೋ ಪಾಪ್ 7 ಪ್ರೊ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇನ್-ದಿ-ಬಾಕ್ಸ್ 10W ಟೈಪ್ C ಅಡಾಪ್ಟರ್‌ನೊಂದಿಗೆ ಪ್ಯಾಕ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಇ-ದಿಕ್ಸೂಚಿ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಟೆಕ್ನೋ ಪಾಪ್ 7 ಪ್ರೊ ಮೊಬೈಲ್ 2GB RAM + 64 GB ಆಂತರೀಕ ಸ್ಟೋರೇಜ್ ಜೊತೆಗೆ 3GB RAM + 64 GB ಆಂತರೀಕ ಸ್ಟೋರೆಜ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಎಂಡ್‌ಲೆಸ್ ಬಾಲ್ಕ್ ಮತ್ತು ಯುಯುನಿ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








