Home
ಸುದ್ದಿಜಾಲ

ಟೆಕ್ನೋ ಸಂಸ್ಥೆಯ ಈ ಫೋನಿಗೆ ಬೊಂಬಾಟ್‌ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಟೆಕ್ನೋ ಕಂಪನಿಯು ತನ್ನ ಪಾಪ್‌ ಫೋನ್‌ ಸರಣಿಯಲ್ಲಿ ಕೆಲವು ಬಜೆಟ್‌ ದರದ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಒಂದಾದ ಟೆಕ್ನೋ ಪಾಪ್‌ 7 ಪ್ರೊ ಮೊಬೈಲ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಫೋನ್‌ ಗಮನ ಸೆಳೆದಿದೆ. ಇದೀಗ ಅಮೆಜಾನ್‌ ಈ ಕಾಮರ್ಸ್‌ ತಾಣದಲ್ಲಿ ಭಾರೀ ಡಿಸ್ಕೌಂಟ್‌ ಪಡೆದಿದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ನಲ್ಲಿ ಟೆಕ್ನೋ ಪಾಪ್‌ 7 ಪ್ರೊ ಫೋನ್ ನೇರವಾಗಿ ಶೇ. 32% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಹೀಗಾಗಿ ಈ ಮೊಬೈಲ್‌ 3GB RAM + 64GB ಸ್ಟೋರೇಜ್‌ ವೇರಿಯಂಟ್‌ 8,999 ರೂ. ಬೆಲೆ ಅನ್ನು ಹೊಂದಿದ್ದು, ಆಫರ್‌ ದರದಲ್ಲಿ 6,099ರೂ. ಗಳಿಗೆ ಗ್ರಾಹಕರು ಖರೀದಿಸಲು ಮಾಡಬಹುದು. ಇದಲ್ಲದೇ ಗ್ರಾಹಕರಿಗೆ ಆಯ್ದ ಬ್ಯಾಂಕ್‌ ಆಫರ್‌ ಸೌಲಭ್ಯ ಸಹ ಸಿಗಲಿವೆ.

ಟೆಕ್ನೋ ಸಂಸ್ಥೆಯ ಈ ಫೋನಿಗೆ ಬೊಂಬಾಟ್‌ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಅಂದಹಾಗೆ ಈ ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ A22 SoC ಪ್ರೊಸೆಸರ್‌ ಪವರ್‌ ಕಾರ್ಯ ವೈಖರಿ ಪಡೆದಿದ್ದು, ಇದರ ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 5,020mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇನ್ನುಳಿದಂತೆ ಟೆಕ್ನೋ ಪಾಪ್‌ 7 ಪ್ರೊ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೀಗಿದೆ

ಟೆಕ್ನೋ ಪಾಪ್‌ 7 ಪ್ರೊ ಮೊಬೈಲ್‌ 6.56 ಇಂಚಿನ HD+ ಡಾಟ್ ನಾಚ್ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ..

ಟೆಕ್ನೋ ಸಂಸ್ಥೆಯ ಈ ಫೋನಿಗೆ ಬೊಂಬಾಟ್‌ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಯಾವ ಪ್ರೊಸೆಸರ್‌ ಲಭ್ಯ

ಟೆಕ್ನೋ ಪಾಪ್‌ 7 ಪ್ರೊ ಮೊಬೈಲ್‌ ಕ್ವಾಡ್‌ಕೋರ್‌ ಮೀಡಿಯಾ ಟೆಕ್‌ ಹಿಲಿಯೋ A22 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 12 ಆಧಾರಿತ HiOS 11.0 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 2GB RAM + 64 GB ಮತ್ತು 3GB RAM + 64 GB ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ 6GB ವರೆಗೂ RAM ವಿಸ್ತರಿಸಲು ಅವಕಾಶ.

ಟೆಕ್ನೋ ಸಂಸ್ಥೆಯ ಈ ಫೋನಿಗೆ ಬೊಂಬಾಟ್‌ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಡ್ಯುಯಲ್‌ ಕ್ಯಾಮೆರಾ ರಚನೆ ಸೌಲಭ್ಯ

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ ಡ್ಯುಯಲ್ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್‌ನೊಂದಿಗೆ 5 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಇದನ್ನು ಟಿಯರ್ ಡ್ರಾಪ್ ಕಟೌಟ್ ಸ್ಲಾಟ್‌ನಲ್ಲಿ ನೀಡಲಾಗಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟಿದೆ

ಟೆಕ್ನೋ ಪಾಪ್‌ 7 ಪ್ರೊ ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಅಲ್ಲದೆ ಇನ್-ದಿ-ಬಾಕ್ಸ್ 10W ಟೈಪ್ C ಅಡಾಪ್ಟರ್‌ನೊಂದಿಗೆ ಪ್ಯಾಕ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ ಮತ್ತು ಬ್ಲೂಟೂತ್ 5.0 ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಇ-ದಿಕ್ಸೂಚಿ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಟೆಕ್ನೋ ಪಾಪ್‌ 7 ಪ್ರೊ ಮೊಬೈಲ್‌ 2GB RAM + 64 GB ಆಂತರೀಕ ಸ್ಟೋರೇಜ್‌ ಜೊತೆಗೆ 3GB RAM + 64 GB ಆಂತರೀಕ ಸ್ಟೋರೆಜ್‌ ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎಂಡ್‌ಲೆಸ್ ಬಾಲ್ಕ್ ಮತ್ತು ಯುಯುನಿ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
TECNO POP 7 Pro price cut by 32% in amazon website. check offer price and specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+