Home
ಸುದ್ದಿಜಾಲ

ಇಂದು ಟೆಕ್ನೋ ಪಾಪ್ 8 ಫಸ್ಟ್‌ ಸೇಲ್‌.. ಆಫರ್‌ ಏನಿದೆ?..ಫೀಚರ್ಸ್‌ ಏನು?

ಟೆಕ್ನೋ (Tecno) ಸ್ಮಾರ್ಟ್‌ಫೋನ್‌ ಸಂಸ್ಥೆಯು ಭಿನ್ನ ದರದಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಟೆಕ್ನೋ ಪಾಪ್ 8 ಫೋನ್‌ ಇಂದು (ಜನೆವರಿ 9 ರಂದು) ಇ ಕಾಮರ್ಸ್‌ ತಾಣ ಅಮೆಜಾನ್‌ ಮೂಲಕ ಮಧ್ಯಾಹ್ನ 12 ಗಂಟೆಯಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ.

ಹೌದು, ಟೆಕ್ನೋ ಪಾಪ್ 8 ಮೊಬೈಲ್‌ ಇಂದು ಮೊದಲ ಸೇಲ್‌ ಅನ್ನು ಅಮೆಜಾನ್‌ ಮೂಲಕ ಸೇಲ್‌ ಆರಂಭಿಸಲಿದ್ದು, ಗ್ರಾಹಕರಿಗೆ ಕೊಡುಗೆ ಸಹ ಸಿಗಲಿದೆ. ಈ ಫೋನ್‌ 4GB RAM ಮತ್ತು 64GB ವೇರಿಯಂಟ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಹಾಗೆಯೇ ಇದು ಯುನಿಸೋಕ್‌ T606 SoC ಪ್ರೊಸೆಸರ್‌ ಸೌಲಭ್ಯ ಕೂಡಾ ಪಡೆದಿದೆ.

ಇಂದು ಟೆಕ್ನೋ ಪಾಪ್ 8 ಫಸ್ಟ್‌ ಸೇಲ್‌.. ಆಫರ್‌ ಏನಿದೆ?..ಫೀಚರ್ಸ್‌ ಏನು?

ಅಂದಹಾಗೆ ಈ ಫೋನಿನ ಆರಂಭಿಕ ವೇರಿಯಂಟ್‌ ದರವು 5,999ರೂ. ಆಗಿದೆ. ಹಾಗೆಯೇ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 14,999ರೂ. ಆಗಿದೆ. ಇನ್ನು ಈ ಫೋನ್‌ 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದುಕೊಂಡಿದ್ದು, ಬ್ಲ್ಯಾಕ್‌ ಹಾಗೂ ವೈಟ್ ಕಲರ್ ಆಯ್ಕೆ ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇಂದು ಟೆಕ್ನೋ ಪಾಪ್ 8 ಫಸ್ಟ್‌ ಸೇಲ್‌.. ಆಫರ್‌ ಏನಿದೆ?..ಫೀಚರ್ಸ್‌ ಏನು?

ಟೆಕ್ನೋ ಪಾಪ್ 8 - ಫೀಚರ್ಸ್: ಟೆಕ್ನೋ ಪಾಪ್ 8 ಮೊಬೈಲ್‌ 6.56 ಇಂಚಿನ HD+ ಡಾಟ್-ಇನ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಸಪೋರ್ಟ್‌ನೊಂದಿಗೆ ಲಗ್ಗೆ ಇಡಲಿದ್ದು, ಇದಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇ ಡೈನಾಮಿಕ್ ಪೋರ್ಟ್ ಫೀಚರ್ಸ್‌ನೊಂದಿಗೆ ಬರುತ್ತದೆ. ಇದು ತ್ವರಿತ ಅಧಿಸೂಚನೆಗಳನ್ನು ಒದಗಿಸುವ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಇರುತ್ತದೆ.

ಟೆಕ್ನೋದ ಈ ಮೊಬೈಲ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಫಾಸ್ಟ್‌ ಪಡೆದಿದೆ. ಇದು ಆಂಡ್ರಾಯ್ಡ್‌ 13 Go ಆವೃತ್ತಿ ಆಧಾರಿತ HiOS 13ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದರೊಂದಿಗೆ RAM ಅನ್ನು ಹೆಚ್ಚುವರಿ 4GB ಯಿಂದ 8GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.

ಇನ್ನು ಟೆಕ್ನೋ ಸಂಸ್ಥೆಯ ಈ ನೂತನ ಮೊಬೈಲ್‌ 12 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ AI ಸಹಾಯದ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಂ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ LED ಫ್ಲಾಷ್ ಸೌಲಭ್ಯ ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಡ್ಯುಯಲ್ ಎಲ್ಇಡಿ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್ ಕೂಡ ಇದೆ.

ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇದು 10W ವೈರ್ಡ್ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, Wi-Fi 802.11, ಬ್ಲೂಟೂತ್ 5.0, GPS ಮತ್ತು USB ಟೈಪ್-C ಸಂಪರ್ಕವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX2 ರೇಟಿಂಗ್‌ನೊಂದಿಗೆ ಬರಲಿದೆ. ಇನ್ನು ಈ ಫೋನ್ ಡಿಟಿಎಸ್ ಬೆಂಬಲಿತ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

ಟೆಕ್ನೋ ಪಾಪ್ 8 ಮೊಬೈಲ್‌ 4GB + 64GB ವೇರಿಯಂಟ್‌ ಆಯ್ಕೆಗೆ 6,499ರೂ ಬೆಲೆಯನ್ನು ಹೊಂದಿದೆ. ಇದೀಗ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳೊಂದಿಗೆ 5,999ರೂ ಬೆಲೆಯಲ್ಲಿ ಸೀಮಿತ ಕೊಡುಗೆಯನ್ನು ಹೊಂದಿದೆ. ಇನ್ನು ಫೋನ್ ಜನವರಿ 9 ರಿಂದ ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Tecno Pop 8 first sale today in india via flipkart. offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+