Home
ಸುದ್ದಿಜಾಲ

ಅಗ್ಗದ ಟೆಕ್ನೋ ಪಾಪ್ 8 ಫೋನಿಗೆ ಬಿಗ್‌ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು ಗೊತ್ತಾ?

ಜನಪ್ರಿಯ ಟೆಕ್ನೋ ಸಂಸ್ಥೆಯ ಹಲವು ಮೊಬೈಲ್‌ಗಳು ಅಗ್ಗದ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ ಇತ್ತೀಚಿನ ಟೆಕ್ನೋ ಪಾಪ್ 8 ಮೊಬೈಲ್‌ ಕೂಡಾ ಒಂದಾಗಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ರಿಯಾಯಿತಿ ಪಡೆದಿದ್ದು, ಅಗ್ಗದ ಫೋನ್‌ ಖರೀದಿಸುವ ಗ್ರಾಹಕರಿಗೆ ಅಚ್ಚರಿ ಎನಿಸಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಟೆಕ್ನೋ ಪಾಪ್ 8 ಮೊಬೈಲ್‌ ಶೇ. 17% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ 8GB*+64GB ವೇರಿಯಂಟ್‌ ಫೋನ್‌ 6,499ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಇದರೊಂದಿಗೆ ಬ್ಯಾಂಕ್‌ ಆಫರ್‌ ಸಹ ಗ್ರಾಹಕರಿಗೆ ಲಭ್ಯ ಆಗಲಿವೆ.

ಅಗ್ಗದ ಟೆಕ್ನೋ ಪಾಪ್ 8 ಫೋನಿಗೆ ಬಿಗ್‌ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು ಗೊತ್ತಾ?

ಅಂದಹಾಗೆ ಟೆಕ್ನೋ ಪಾಪ್ 8 ಫೋನ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಸಾಮರ್ಥ್ಯದ ಹೊಂದಿದೆ. ಇದರ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಸೆಲ್ಫಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಇದೆ. ಇನ್ನುಳಿದಂತೆ ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಗ್ಗದ ಟೆಕ್ನೋ ಪಾಪ್ 8 ಫೋನಿಗೆ ಬಿಗ್‌ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು ಗೊತ್ತಾ?

ಟೆಕ್ನೋ ಪಾಪ್ 8 - ಫೀಚರ್ಸ್‌

ಈ ಮೊಬೈಲ್‌ 6.56 ಇಂಚಿನ HD+ ಡಾಟ್-ಇನ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಸಪೋರ್ಟ್‌ ಸಹ ಇದೆ. ಇದಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಇದರೊಂದಿಗೆ ಡಿಸ್‌ಪ್ಲೇ ಡೈನಾಮಿಕ್ ಪೋರ್ಟ್ ಫೀಚರ್ ಇದೆ. ಹಾಗೆಯೇ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆ ರಚನೆ ಇದೆ.

ಟೆಕ್ನೋ ಕಂಪನಿಯ ಈ ಮೊಬೈಲ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಪವರ್ ಪಡೆದಿದ್ದು, ಆಂಡ್ರಾಯ್ಡ್‌ 13 Go ಆವೃತ್ತಿ ಆಧಾರಿತ HiOS 13ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಹೊಂದಿದೆ. ಇದರೊಂದಿಗೆ RAM ಅನ್ನು ಹೆಚ್ಚುವರಿ 4GB ಯಿಂದ 8GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಲು ಅವಕಾಶ ಇದೆ.

ಹಾಗೆಯೇ ಟೆಕ್ನೋ ಸಂಸ್ಥೆಯ ಈ ನೂತನ ಮೊಬೈಲ್‌ 12 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ AI ಸಹಾಯದ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಂ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ LED ಫ್ಲಾಷ್ ಸೌಲಭ್ಯ ಪಡೆದಿದೆ. ಇನ್ನು ಮೊಬೈಲ್‌ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಇದರ ಜೊತೆಗೆ ಡ್ಯುಯಲ್ ಎಲ್ಇಡಿ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್ ಕೂಡ ಇದೆ.

ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇದು 10W ವೈರ್ಡ್ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G VoLTE, Wi-Fi 802.11, ಬ್ಲೂಟೂತ್ 5.0, GPS ಮತ್ತು USB ಟೈಪ್-C ಸಂಪರ್ಕ ಸೌಲಭ್ಯ ಇದೆ. ಇದಲ್ಲದೆ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX2 ರೇಟಿಂಗ್‌ ಹಾಗೂ ಡಿಟಿಎಸ್ ಬೆಂಬಲಿತ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

Best Mobiles in India

English summary
TECNO POP 8 received big price cut in amazon India website. check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+