Home
ಸುದ್ದಿಜಾಲ

ಅಗ್ಗದ ಬೆಲೆಗೆ ಜಬರ್ದಸ್ತ್‌ 5G ಫೋನ್‌ ಬೇಕಿದ್ರೆ, ಈ ಡಿಸ್ಕೌಂಟ್‌ ಬೆಸ್ಟ್‌!

ಮೊಬೈಲ್‌ ಮಾರುಕಟ್ಟೆಯಲ್ಲಿ ಟೆಕ್ನೋ ಮೊಬೈಲ್‌ ಸಂಸ್ಥೆಯು ಬಜೆಟ್‌ ಹಾಗೂ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯ ಇತ್ತೀಚಿನ ಫೋನ್‌ಗಳ ಪೈಕಿ ಟೆಕ್ನೋ ಸಂಸ್ಥೆಯ ಟೆಕ್ನೋ ಪೋವಾ 5 ಪ್ರೊ 5G ಮೊಬೈಲ್‌ ಡಿಸೈನ್‌ ಹಾಗೂ ಪ್ರೈಸ್‌ಟ್ಯಾಗ್‌ ಮೂಲಕ ಆಕರ್ಷಕ ಎನಿಸಿದೆ. ಈ ಫೋನ್‌ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಇದೀಗ ಭಾರೀ ರಿಯಾಯಿತಿ ಪಡೆದಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಟೆಕ್ನೋ ಸಂಸ್ಥೆಯ ಟೆಕ್ನೋ ಪೋವಾ 5 ಪ್ರೊ 5G ಮೊಬೈಲ್‌ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಫೋನ್ 19,999ರೂ. ಪ್ರೈಸ್‌ಟ್ಯಾಗ್‌ ಪಡೆದಿದ್ದು, ಆದ್ರೆ, ಆಫರ್‌ನಲ್ಲಿ ಈಗ 14,999 ರೂ. ಗಳಿಗೆ ಖರೀದಿ ಮಾಡಬಹುದು. ಅದಲ್ಲದೇ ಕೆಲವು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಸಹ ಸಿಗಲಿವೆ.

ಅಗ್ಗದ ಬೆಲೆಗೆ ಜಬರ್ದಸ್ತ್‌ 5G ಫೋನ್‌ ಬೇಕಿದ್ರೆ, ಈ ಡಿಸ್ಕೌಂಟ್‌ ಬೆಸ್ಟ್‌!

ಇನ್ನು ಟೆಕ್ನೋ ಸಂಸ್ಥೆಯ ಪೋವಾ 5 ಪ್ರೊ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ಟೆಕ್ನೋ ಪೋವಾ 5 ಪ್ರೊ 5G ಫೋನಿನ ಇತರ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಟೆಕ್ನೋ ಪೋವಾ 5 ಪ್ರೊ ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇ 84.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 396 ಪಿಪಿಐ ಸಾಂದ್ರತೆಯನ್ನು ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಅನ್ನು ಸಪೋರ್ಟ್ ಪಡೆದಿದೆ.

ಅಗ್ಗದ ಬೆಲೆಗೆ ಜಬರ್ದಸ್ತ್‌ 5G ಫೋನ್‌ ಬೇಕಿದ್ರೆ, ಈ ಡಿಸ್ಕೌಂಟ್‌ ಬೆಸ್ಟ್‌!

ಪ್ರೊಸೆಸರ್‌ ಪವರ್‌ ಯಾವುದು

ಟೆಕ್ನೋದ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಸಾಮರ್ಥ್ಯದ ಪವರ್ ಅನ್ನು ಪಡೆದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 13 ಆಧಾರಿತ HiOS 13 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಡ್ಯುಯಲ್ ಕ್ಯಾಮೆರಾ ಸೌಲಭ್ಯ

ಪೋವಾ 5 ಪ್ರೊ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾ AI ಸಪೋರ್ಟ್ ನಲ್ಲಿ ಇದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನಲ್‌ನಲ್ಲಿ ಅಧಿಸೂಚನೆಗಳಿಗಾಗಿ RGB LED ಲೈಟ್‌ ಒಳಗೊಂಡಿರುವ ಹೊಸ 'ಆರ್ಕ್ ಇಂಟರ್ಫೇಸ್' ಅನ್ನು ಒಳಗೊಂಡಿದೆ.

ಅಗ್ಗದ ಬೆಲೆಗೆ ಜಬರ್ದಸ್ತ್‌ 5G ಫೋನ್‌ ಬೇಕಿದ್ರೆ, ಈ ಡಿಸ್ಕೌಂಟ್‌ ಬೆಸ್ಟ್‌!

ಬಿಗ್ ಬ್ಯಾಟರಿ ಮತ್ತು ಇತರೆ ಆಯ್ಕೆ

ಟೆಕ್ನೋ ಪೋವಾ 5 ಪ್ರೊ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಇದು 68W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳು 5G, 4G LTE, Wi-Fi, ಬ್ಲೂಟೂತ್, NFC, GPS ಮತ್ತು A-GPS ಅನ್ನು ಒಳಗೊಂಡಿದೆ. ಇದಲ್ಲದೆ 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಸಹ ಪಡೆದಿದೆ.

Best Mobiles in India

English summary
Tecno Pova 5 Pro 5G big price drop on amazon website. offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+