Home
ಸುದ್ದಿಜಾಲ

Tecno: ನಾಳೆ ಹೊಸ 5G ಫೋನ್ ಮಾರಾಟ: ಕಡಿಮೆ ಬೆಲೆ.. ಜೊತೆಗೆ 2,000 ಆಫರ್‌!

ಟೆಕ್ನೋ (Tecno) ಕಂಪನಿಯು ಇತ್ತೀಚೆಗೆ ಟೆಕ್ನೋ ಪೋವಾ 6 ನಿಯೋ 5G (TECNO POVA 6 Neo 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು Pova ಸರಣಿಯ ಮತ್ತೊಂದು ಹೊಸ ಮೊಬೈಲ್ ಆಗಿದೆ. ಈ ಫೋನ್‌ ಹಲವು ಎಐ (ಕೃತಕ ಬುದ್ಧಿಮತ್ತೆ) ವೈಶಿಷ್ಟ್ಯಗಳನ್ನು ಹೊಂದಿದೆ. ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ, ಈ ಫೋನ್ ನಾಳೆ ( ಸೆ.14) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನಿನ ಬೆಲೆ ಮತ್ತು ಯಾವೆಲ್ಲಾ ಆಫರ್‌ಗಳಿಗೆ ತಿಳಿಯೋಣ ಬನ್ನಿ.

ಕಂಪನಿಯು ಈ ಹಿಂದೆ ಪರಿಚಯಿಸಿದ್ದ Tecno Pova 6 Neo 4G ಫೋನಿನ ಉತ್ತರಾಧಿಕಾರಿಯಾಗಿ ಟೆಕ್ನೋ ಪೋವಾ 6 ನಿಯೋ 5G ಫೋನ್ ಬಂದಿದೆ. ಇದು 6.67 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. MediaTek ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 5000mAh ಬ್ಯಾಟರಿ, 18W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

Tecno: ನಾಳೆ ಹೊಸ 5G ಫೋನ್ ಸೇಲ್: ಕಡಿಮೆ ಬೆಲೆ.. ಜೊತೆಗೆ 2,000 ಆಫರ್‌!

ಟೆಕ್ನೋ ಪೋವಾ 6 ನಿಯೋ 5G ಫೋನಿನ ಬೆಲೆ ಲಭ್ಯತೆ

ಕಂಪನಿಯು ಟೆಕ್ನೋ ಪೋವಾ 6 ನಿಯೋ 5G ಅನ್ನು ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್‌ ಬಣ್ಣಗಳಲ್ಲಿ ಪರಿಚಯಿಸಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವು 13,999 ರೂ. ಬೆಲೆಗೆ ಮಾರಾಟವಾಗಲಿದೆ. 8GB + 256GB ಸ್ಟೋರೇಜ್‌ ರೂಪಾಂತರವು 14,999 ರೂ. ಬೆಲೆಗೆ ಲಭ್ಯವಿರುತ್ತದೆ.

ಲಾಂಚ್ ಆಫರ್ ಭಾಗವಾಗಿ ಕಂಪನಿಯು, ಟೆಕ್ನೋ ಪೋವಾ 6 ನಿಯೋ 5G ಖರೀದಿ ಮೇಲೆ ಕೆಲವು ಆಫರ್‌ಗಳನ್ನು ನೀಡುತ್ತದೆ. ಮೊದಲ ದಿನವೇ ಈ ಮೊಬೈಲ್ ಖರೀದಿಸಿದರೆ 1,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಸಿಗುತ್ತದೆ. ಜೊತೆಗೆ, 1,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ. ರಿಯಾಯಿತಿಯೊಂದಿಗೆ ನೀವು 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಮೊಬೈಲ್‌ ಕೊಳ್ಳಬಹುದು. ನಾಳೆ (ಸೆಪ್ಟೆಂಬರ್ 14) ಅಮೆಜಾನ್ ಸೈಟ್‌ನಲ್ಲಿ ಈ ಫೋನ್‌ ಮಾರಾಟ ಪ್ರಾರಂಭಿಸಲಿದೆ.

ಟೆಕ್ನೋ ಪೋವಾ 6 ನಿಯೋ 5G ಫೋನಿನ ಫೀಚರ್ಸ್‌

ನೂತನ ಟೆಕ್ನೋ ಪೋವಾ 6 ನಿಯೋ 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಪಡೆದಿದೆ. ಜೊತೆಗೆ, 240Hz ಸ್ಪರ್ಶ ಮಾದರಿ ದರ, 480 ನಿಟ್ಸ್‌ ವರೆಗಿನ ಬ್ರೈಟ್‌ನೆಸ್‌, 90 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 20:09 ಆಕಾರ ಅನುಪಾತವನ್ನು ಹೊಂದಿದೆ.

ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ MediaTek ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದನ್ನು ಟೆಕ್ನೋ ಫೋನ್ 6 ​​ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದರ ಗಡಿಯಾರದ ವೇಗ 2.4GHz ಆಗಿದೆ. ಈ ಫೋನ್ ಗ್ರಾಫಿಕ್ಸ್‌ಗಾಗಿ Mali G57 MC2 GPU ಅನ್ನು ಹೊಂದಿದೆ. ಈ ಹೊಸ ಮೊಬೈಲ್ ಇತ್ತೀಚಿನ Android 14 ಆಧಾರಿತ HiOS 14.5 ನಲ್ಲಿ ಕೆಲಸ ಮಾಡುತ್ತದೆ.

ಈ ಸುದ್ದಿ ಓದಿದ್ದೀರಾ?: Samsung: ಬಂತು ಹೊಸ 5G ಫೋನ್: ಕೇವಲ 7,999 ರೂ.! 5000mAh ಬ್ಯಾಟರಿ, 50MP ಕ್ಯಾಮೆರಾ ಇದೆ

ಟೆಕ್ನೋ ಪೋವಾ 6 ನಿಯೋ 5G ಫೋನ್‌ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ ಸೌಲಭ್ಯ ಪಡೆದಿದೆ. ಜೊತೆಗೆ, 8GB ವಿಸ್ತೃತ ಮೆಮೊರಿಗೆ ಬೆಂಬಲವಿದೆ. ಇದರ ಸಹಾಯದಿಂದ ಒಟ್ಟು 16GB RAM ಅನ್ನು ಬಳಸಬಹುದು. ಇಂಟರ್ನಲ್ ಸ್ಟೋರೇಜ್‌ ಹೆಚ್ಚಿಸಲು, ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ನೀಡಲಾಗಿದೆ. ಇದರ ಸಹಾಯದಿಂದ 1 TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

Tecno: ನಾಳೆ ಹೊಸ 5G ಫೋನ್ ಸೇಲ್: ಕಡಿಮೆ ಬೆಲೆ.. ಜೊತೆಗೆ 2,000 ಆಫರ್‌!

108MP ಕ್ಯಾಮೆರಾ, 5000mAh ಬ್ಯಾಟರಿ

ನೂತನ ಟೆಕ್ನೋ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಎರಡನೇ ಲೆನ್ಸ್ ಲಭ್ಯವಿದೆ. ಈ ಕ್ಯಾಮೆರಾವು ಸೆನ್ಸಾರ್ ಜೂಮ್ ನಲ್ಲಿ 3X ಲಾಸ್ ಲೆಸ್ ಸೌಲಭ್ಯವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್‌ 18W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ 5G, Wi-Fi, ಬ್ಲೂಟೂತ್, ಎನ್‌ಎಫ್‌ಸಿ, ಲೈಟ್ ಸೆನ್ಸರ್, ಎಐ ಸೂಟ್, ಎಐಜಿಸಿ, ಎಐ ಮ್ಯಾಜಿಕ್ ಎರೇಸರ್, ಎಐ ಕಟೌಟ್, ಎಐ ವಾಲ್‌ಪೇಪರ್, ಎಐ ಆರ್ಟ್‌ಬೋರ್ಡ್, ಆಸ್ಕ್‌ ಎಐ ಫೀಚರ್ಸ್‌ ಹೊಂದಿದೆ.

Best Mobiles in India

English summary
Tecno Pova 6 Neo 5G Goes on First Sale in India Tomorrow: Know Discount Price, Offer details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+