Tecno: ಟೆಕ್ನೋ ಪೋವಾ 6 ಪ್ರೊ 5G ಇಂದಿನಿಂದ ಖರೀದಿಗೆ ಲಭ್ಯ! ಆಫರ್ ಏನಾದರೂ ಇದೆಯಾ?
ಕಳೆದ ವಾರ ಅನಾವರಣ ಮಾಡಲಾದ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಟೆಕ್ನೋ ಪೋವಾ 6 ಪ್ರೊ 5G (Tecno Pova 6 Pro 5G) ಅನ್ನು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಮಿನಿಎಲ್‌ಇಡಿ ಬೀಡ್ಸ್ ನೊಂದಿಗೆ ಕಾಣಿಸಿಕೊಂಡಿದೆ.
ಹೌದು, ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಲು ಕಾತುರದಿಂದ ಕಾದು ಕುಳಿತಿದ್ದವರು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಅತ್ಯಾಕರ್ಷಕ ಫೀಚರ್ಸ್ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್: ಭಾರತದಲ್ಲಿ ಇಂದಿನಿಂದ ಈ ವಿಶೇಷ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದ್ದು, 8GB/256GB ಸ್ಟೋರೇಜ್ ವೇರಿಯಂಟ್‌ಗೆ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ 12GB/256GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್ ಅನ್ನು ನೀವು 21,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದು.
ಅಲ್ಲದೆ ಈ ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವಾಗ 2,000ರೂ.ಗಳ ಬ್ಯಾಂಕ್ ರಿಯಾಯಿತಿ ಪಡೆಯಬಹುದಾಗಿದೆ. ಅಲ್ಲದೆ ಗ್ರಾಹಕರು 12 ತಿಂಗಳವರೆಗೆ ನೋ ಕಾಸ್ಟ್ ಇಎಮ್‌ಐ ಪಾವತಿ ಆಯ್ಕೆಯನ್ನು ಸಹ ಪಡೆಯಬಹುದು. ಇದಲ್ಲದೆ, ಈ ಫೋನ್ ಖರೀದಿ ಮಾಡುವ ಗ್ರಾಹಕರು ಟೆಕ್ನೋ ಸ್ಪೂರ್ S2 ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಕೆಲವು ಫೀಚರ್ಸ್ ಕಡೆ ಕಣ್ಣಾಯಿಸಿ ಬರೋಣ.

ಟೆಕ್ನೋ ಪೋವಾ 6 ಪ್ರೊ 5G ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1,300 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಮತ್ತು 100% DCI-P3 ಬಣ್ಣದ ಹರವು ಕವರೇಜ್ ಅನ್ನು ಈ ಫೋನ್ ಬೆಂಬಲಿಸಲಿದೆ.
ಟೆಕ್ನೋ ಪೋವಾ 6 ಪ್ರೊ 5G ಪ್ರೊಸೆಸರ್ ಮಾಹಿತಿ: ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಈ ಫೋನ್ ಲಭ್ಯ ಇದೆ. ಹಾಗೆಯೇ ಆಂಡ್ರಾಯ್ಡ್ 14 ಆಧಾರಿತ HiOS ಅನ್ನು ಈ ಸ್ಮಾರ್ಟ್‌ಫೋನ್ ರನ್ ಮಾಡಲಿದೆ.

ಟೆಕ್ನೋ ಪೋವಾ 6 ಪ್ರೊ 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಬರೋಬ್ಬರಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಸಹ ಪಡೆದಿದೆ. ಇದರ 0.08 ಮೆಗಾಪಿಕ್ಸೆಲ್ ಸಹಾಯಕ ಲೆನ್ಸ್ ಅನ್ನು ಈ ಫೋನ್‌ನಲ್ಲಿ ಇರಿಸಲಾಗಿದೆ. ಅಲ್ಲದೆ ಸಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಟೆಕ್ನೋ ಪೋವಾ 6 ಪ್ರೊ 5G ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 70W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಸ್ಪ್ಲಾಶ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP53 ರೇಟಿಂಗ್ ಅನ್ನು ಈ ಫೋನ್ ಹೊಂದಿದೆ. ಇದರ ಜೊತೆಗೆ ನೀವು ಈ ಫೋನ್ ಅನ್ನು ಕಾಮೆಟ್ ಗ್ರೀನ್ ಮತ್ತು ಮೆಟಿಯೊರೈಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.


Click it and Unblock the Notifications