Tecno: ಟೆಕ್ನೋ ಪೋವಾ 6 ಪ್ರೊ ಲಾಂಚ್‌ಗೆ ದಿನಾಂಕ ಫಿಕ್ಸ್! ಫೀಚರ್ಸ್ ಏನಿವೆ?
ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ವಿವಿಧ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯ ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದು, ಈ ನಡುವೆ ಕೆಲವೇ ದಿನಗಳಲ್ಲಿ ಟೆಕ್ನೋದ (Tecno) ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.
ಹೌದು, ಭಾರತದಲ್ಲಿ ಟೆಕ್ನೋ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದು, ಈ ಫೋನ್‌ಗಳು ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್ ಅನುಭವವನ್ನು ನೀಡುತ್ತವೆ. ಅದರಂತೆ ಈಗ ಟೆಕ್ನೋ ಪೋವಾ 6 ಪ್ರೊ ಲಾಂಚ್‌ಗೆ (Tecno Pova 6 Pro) ದಿನಾಂಕ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ವೈರಲ್ ಆಗಿದ್ದವು. ಹಾಗಿದ್ರೆ ಈ ಇದು ಯಾವಾಗ ಲಾಂಚ್ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 29 ರಂದು ಲಾಂಚ್ ಆಗಲಿದೆ ಎಂದು ದೃಢಪಡಿಸಲಾಗಿದೆ. ಈ ಫೋನ್ MWC 2024 ನಲ್ಲಿ ಈಗಾಗಲೇ ಅನಾವರಣಗೊಂಡಿರುವ ಈ ಮಿಡ್ ರೇಂಜ್ ಶ್ರೇಣಿಯ ಡಿವೈಸ್ 120Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಸ70W ವೇಗದ ಚಾರ್ಜಿಂಗ್‌ನೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.
ಇನ್ನು ಈ ಟೆಕ್ನೋ ಅಮೆಜಾನ್ ಮಿನಿಟಿವಿಯಲ್ಲಿನ ಸರಣಿಯಾದ ರಸ್ಕ್ ಮೀಡಿಯಾ ಪ್ಲೇಗ್ರೌಂಡ್ ಸೀಸನ್ 3 ರೊಂದಿಗೆ ಪಾಲುದಾರಿಕೆ ಪಡೆದುಕೊಂಡಿದೆ. ಫೋನ್ ಗಮನ ಸೆಳೆಯುವ ವಿನ್ಯಾಸವನ್ನು ಪಡೆದಿದ್ದು ನಥಿಂಗ್ ಫೋನ್‌ನಂತೆಯೇ ರಿಯರ್‌ನಲ್ಲಿ ಎಲ್‌ಇಡಿ ಲೈಟ್ ಸ್ಟ್ರಿಪ್ ಆಯ್ಕೆ ಪಡೆದುಕೊಂಡಿದೆ. ಅಧಿಕೃತ ಮಾಹಿತಿ ಪ್ರಕಾರ ಈ ಫೋನ್ 210 ಮಿನಿ ಎಲ್ಇಡಿಗಳು ವಿವಿಧ ಒಂಬತ್ತು ಬೆಳಕಿನ ಮೋಡ್ ಆಯ್ಕೆ ಪಡೆದಿರುತ್ತವೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ 108 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಆಯ್ಕೆ ಇರಲಿದ್ದು, ಪಂಚ್ ಹೋಲ್ ಆಯ್ಕೆ ಇರುವ ಫುಲ್‌ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿರಲಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಅಂದರೆ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಪ್ರೀಮಿಯಂ ಅನುಭವ ನೀಡಲಿದೆ.
ಉಳಿದಂತೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಬಲ ಪಡೆದಿದ್ದು, 12GB ವರ್ಚುವಲ್ RAM ಹಾಗೂ 256GB ಇಂಟರ್ ಸ್ಟೋರೇಜ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 6,000mAh ಸಾಮರ್ಥ್ಯದ ಬ್ಯಾಟರಿ ಹಾಗೂ 70W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ.ಈ ಮೂಲಕ ತಡೆ ರಹಿತ ಅನುಭವವನ್ನು ಈ ಫೋನ್‌ನಲ್ಲಿ ಪಡೆಯಬಹುದಾಗಿದೆ.

ಇನ್ನು ಈ ಫೋನ್ ಗ್ರೇ ಮತ್ತು ಕಾಮೆಟ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಮೊದಲೇ ತಿಳಿಸಿದಂತೆ ಡೈನಾಮಿಕ್-ಲೈಟ್ ಮಿನಿಎಲ್ಇಡಿ ಎಫೆಕ್ಟ್ ಆಯ್ಕೆ ಪಡೆದಿರಲಿದೆ. ಹಾಗೆಯೇ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದಿಂದ ವರ್ಧಿಸಲ್ಪಟ್ಟ ಡ್ಯುಯಲ್ ಸ್ಪೀಕರ್ ಆಯ್ಕೆ ಇದರಲ್ಲಿ ಇರಲಿದ್ದು, ಆಂಡ್ರಾಯ್ಡ್ 14 ಆಧಾರಿತ HiOS ನಲ್ಲಿ ರನ್ ಆಗಲಿದೆ. ಅಲ್ಲದೆ ಈ ಫೋನ್ ಖರೀದಿ ವೇಳೆ ಚಾರ್ಜರ್ ಕೇಬಲ್ ಮತ್ತು ಚಾರ್ಜರ್ ಅನ್ನೂ ಸಹ ನೀಡಲಾಗುತ್ತದೆ.
ಈ ನಡುವೆ ಟೆಕ್ನೋ MWC 2024 ರಲ್ಲಿ ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ ಅನ್ನು ಸಹ ಬಹಿರಂಗಪಡಿಸಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 6.77 ಇಂಚಿನ ಡಿಸ್‌ಪ್ಲೇ ಹಾಗೂ ಈ 50 ಮೆಗಾಪಿಕ್ಸೆಲ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ವಿಶಿಷ್ಟವಾದ ಆಕ್ಷನ್ ಡಾಟ್ ನೋಟಿಫಿಕೇಶನ್ ಫೀಚರ್ಸ್ ಪಡೆದಿದೆ.


Click it and Unblock the Notifications








