Home
ಸುದ್ದಿಜಾಲ

Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್‌! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?

ಭಾರತದಲ್ಲಿ ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ 5G (Tecno Pova 6 Pro) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಜೊತೆಗೆ ವಿಶೇಷ ಫೀಚರ್ಸ್‌ ಮೂಲಕ ಪ್ರೀಮಿಯಂ ಅನುಭವ ನೀಡಲಿದೆ.

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರೀ ಕಂಪನ ಉಂಟು ಮಾಡಿದ್ದ ಫೋನ್‌ ಟೆಕ್ನೋ ಪೋವಾ 6 ಪ್ರೊ ಲಾಂಚ್‌ ಆಗಿದೆ. ಈ ಫೋನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್‌! 12GB RAM.. 6000mAh ಬ್ಯಾಟರಿ..

ಟೆಕ್ನೋ ಪೋವಾ 6 ಪ್ರೊ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.78 ಇಂಚಿನ (2436 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌) ಫುಲ್‌ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್, 2160Hz ಹೈ-ಫ್ರೀಕ್ವೆನ್ಸಿ ಡಿಮ್ಮಿಂಗ್, TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣದ ಜೊತೆಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಟೆಕ್ನೋ ಪೋವಾ 6 ಪ್ರೊ ಪ್ರೊಸೆಸರ್‌ ವಿವರ: ಈ ಫೋನ್ ಮಾಲಿ-G57 MC2 ಜಿಪಿಯು ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ (ಡ್ಯುಯಲ್ 2.4GHz ಕಾರ್ಟೆಕ್ಸ್-A76 + ಹೆಕ್ಸಾ 2GHz ಕಾರ್ಟೆಕ್ಸ್-A55 ಸಿಪಿಯು) ಮೂಲಕ ಕಾರ್ಯನಿರ್ವಹಿಸಲಿದ್ದು, 8GB (8GB ವರ್ಚುವಲ್ RAM) / 12GB LPDDR4x RAM (12GB ವರ್ಚುವಲ್ RAM), 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್‌ ಬಲದೊಂದಿಗೆ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್‌! 12GB RAM.. 6000mAh ಬ್ಯಾಟರಿ..

ಟೆಕ್ನೋ ಪೋವಾ 6 ಪ್ರೊ ಕ್ಯಾಮೆರಾ ರಚನೆ: ಈ ಫೋನ್ 108 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮರಾ, ಎಐ ಕ್ಯಾಮರಾ, ಡ್ಯುಯಲ್ ಎಲ್‌ಇಡಿ ಫ್ಲಾಶ್‌ ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಕ್ಯಾಮೆರಾಗಳು ಆಕರ್ಷಕ ಫೀಚರ್ಸ್‌ ಅನ್ನು ಹೊಂದಿವೆ.

ಟೆಕ್ನೋ ಪೋವಾ 6 ಪ್ರೊ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್‌ನ ಬ್ಯಾಟರಿ ಬಗ್ಗೆ ಹೇಳುವುದಾದರೆ ಇದು 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 70W ಫಾಸ್ಟ್ ಚಾರ್ಜಿಂಗ್ ಬೆಂಬಲ ಹಾಗೂ ರಿವರ್ಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಓಎಸ್‌ ಅನ್ನು ರನ್‌ ಮಾಡಲಿದ್ದು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್‌, 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌, ಡಾಲ್ಬಿ ಅಟ್ಮಾಸ್, ಡ್ಯುಯಲ್ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌/ ಗ್ಲೋನಾಸ್‌ / ಬೀಡೌ, ಯುಎಸ್‌ಬಿ ಟೈಪ್‌ ಸಿ, ಎನ್‌ಎಫ್‌ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದಿದೆ.

ಟೆಕ್ನೋ ಪೋವಾ 6 ಪ್ರೊ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 8GB + 256GB ವೇರಿಯಂಟ್‌ಗೆ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 12GB + 256GB ವೇರಿಯಂಟ್‌ಗೆ 21,999 ರೂ.ಗಳ ಬೆಲೆ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಅನ್ನು ಏಪ್ರಿಲ್ 4 ರಿಂದ ಗ್ರಾಹಕರು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್ ಕಾಮೆಟ್ ಗ್ರೀನ್ ಮತ್ತು ಮೆಟಿಯೊರೈಟ್ ಗ್ರೇ ಬಣ್ಣಗಳಲ್ಲಿ ಲಭ್ಯ ಇರಲಿದೆ.

ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್‌! 12GB RAM.. 6000mAh ಬ್ಯಾಟರಿ..

ಜೊತೆಗೆ ಈ ಸ್ಮಾರ್ಟ್‌ಫೋನ್‌ ಮೇಲೆ ಕೆಲವು ಆಫರ್ ಸಹ ಇದೆ. ಅಂದರೆ ಎಲ್ಲಾ ಬ್ಯಾಂಕ್ ಕಾರ್ಡ್‌ಗಳ ಮೇಲೆ ನೀವು 2000 ರೂ.ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 4999 ರೂ.ಗಳ ಮೌಲ್ಯದ ಟೆಕ್ನೋ S2 ಸ್ಪೀಕರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇಷ್ಟಲ್ಲದೆ ಈ ಫೋನ್‌ ಖರೀದಿ ಮಾಡುವಾಗ 12 ತಿಂಗಳವರೆಗೆ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನೂ ಸಹ ಪಡೆಯಬಹುದು.

Best Mobiles in India

English summary
Tecno Pova 6 Pro is now launched. The phone has an AMOLED display and is powered by a MediaTek Dimensity 6080 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+