Home
ಸುದ್ದಿಜಾಲ

ಅಗ್ಗದ ಬೆಲೆಯ ಈ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಟೆಕ್ನೋ ಮೊಬೈಲ್‌ ಸಂಸ್ಥೆಯು ಅಗ್ಗದ ಸ್ಮಾರ್ಟ್‌ಫೋನ್‌ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ಟೆಕ್ನೋ ಪೋವಾ ನಿಯೋ 5G ಫೋನ್ ಸಹ ಒಂದಾಗಿದ್ದು, ಈ ಫೋನ್‌ ಸದ್ಯ ಅಮೆಜಾನ್‌ ಇ ಕಾಮರ್ಸ್ ತಾಣದಲ್ಲಿ ಸಖತ್ ಡಿಸ್ಕೌಂಟ್‌ ಪಡೆದಿದೆ. ಈ ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ತಾಣ ಅಮೆಜಾನ್‌ ನಲ್ಲಿ ಟೆಕ್ನೋ ಪೋವಾ ನಿಯೋ 5G ಮೊಬೈಲ್ 28% ರಷ್ಟು ಜಬರ್ದಸ್ತ್‌ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ 4GB RAM + 128GB ವೇರಿಯಂಟ್‌ ಮೊಬೈಲ್‌ 17,999ರೂ. ಪ್ರೈಸ್‌ ಟ್ಯಾಗ್‌ ಅನ್ನು ಪಡೆದಿದೆ. ಆದರೆ ಗ್ರಾಹಕರು ಅಮೆಜಾನ್‌ ತಾಣದಲ್ಲಿ ಇದನ್ನು 12,998ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ. ಇದರೊಂದಿಗೆ ಇತರೆ ಬ್ಯಾಂಕ್‌ ಡಿಸ್ಕೌಂಟ್‌ ಸಹ ಲಭ್ಯವಾಗಲಿವೆ.

ಅಗ್ಗದ ಬೆಲೆಯ ಈ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಲು ಅವಕಾಶ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಪೋವಾ ನಿಯೋ 5G ಡಿಸ್‌ಪ್ಲೇ ರಚನೆ : ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPS ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 1,080x2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದಿದೆ.

ಟೆಕ್ನೋ ಪೋವಾ ನಿಯೋ 5G ಪ್ರೊಸೆಸರ್‌ ಯಾವುದು : ಟೆಕ್ನೋ ಪೋವಾ ನಿಯೋ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್ ಪಡೆದ್ದು, ಮಾಲಿ-G57 GPU ಸಪೋರ್ಟ್‌ ಪಡೆದಿದೆ.

ಹಾಗೆಯೇ 4GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಅನ್ನು ಪಡೆದಿದೆ. ಇದಲ್ಲದೆ ಮೆಮೊರಿ ಫ್ಯೂಷನ್ RAM ಫೀಚರ್ಸ್‌ ಮೂಲಕ 3GB ವರೆಗೆ RAM ವಿಸ್ತರಿಸಬಹುದು. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಇದೆ.

ಟೆಕ್ನೋ ಪೋವಾ ನಿಯೋ 5G ಕ್ಯಾಮೆರಾ ರಚನೆ ಹೇಗಿದೆ : ಟೆಕ್ನೋ ಪೋವಾ ನಿಯೋ 5G ಮೊಬೈಲ್‌ ಕ್ವಾಡ್ ಫ್ಲ್ಯಾಷ್‌ ಬೆಂಬಲಿಸುವ AI ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಟೆಕ್ನೋ ಪೋವಾ ನಿಯೋ 5G ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು : ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್‌. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ v5.0 ಕನೆಕ್ಟಿವಿಟಿಯನ್ನು ಸಪೋರ್ಟ್‌ ಇದೆ. ಇದು DTS ಆಡಿಯೊ ತಂತ್ರಜ್ಞಾನದಿಂದ ಆಪ್ಟಿಮೈಸ್ ಮಾಡಲಾದ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

ಟೆಕ್ನೋ ಪೋವಾ ನಿಯೋ 5G ಮೆಮೊರಿ ಹಾಗೂ ಕಲರ್‌ : ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 4GB RAM + 128GB ಸ್ಟೋರೇಜ್‌ ವೇರಿಯಂಟ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಸಪೈರ್‌ ಬ್ಲಾಕ್‌ ಮತ್ತು ಸ್ಪ್ರಿಂಟ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Tecno POVA Neo 5G mobile available at discount price: more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+