Home
ಸುದ್ದಿಜಾಲ

ಜಬರ್ದಸ್ತ್‌ ಆಫರ್‌!..ಈ 5G ಮೊಬೈಲ್‌ ಈಗ ಅಗ್ಗದ ಬೆಲೆಗೆ ಲಭ್ಯ!

ಜನಪ್ರಿಯ ಟೆಕ್ನೋ ಮೊಬೈಲ್‌ ಸಂಸ್ಥೆಯು ಅಗ್ಗದ ಮೊಬೈಲ್‌ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಟೆಕ್ನೋ ಪೋವಾ ನಿಯೋ 5G ಫೋನ್ ಸಹ ಒಂದಾಗಿದ್ದು, ಈ ಮೊಬೈಲ್‌ ಸದ್ಯ ಅಮೆಜಾನ್‌ ಇ ಕಾಮರ್ಸ್ ತಾಣದಲ್ಲಿ ಸಖತ್ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ಅಮೆಜಾನ್‌ ತಾಣದಲ್ಲಿ ಟೆಕ್ನೋ ಪೋವಾ ನಿಯೋ 5G ಮೊಬೈಲ್ ಶೇ. 31% ರಷ್ಟು ರಿಯಾಯಿತಿ ಹೊಂದಿದೆ. ಈ ಮೊಬೈಲ್‌ 4GB RAM + 128GB ವೇರಿಯಂಟ್‌ ಮೊಬೈಲ್‌ 17,999ರೂ. ದರವನ್ನು ಪಡೆದಿದೆ. ಆದರೆ ಅಮೆಜಾನ್‌ ತಾಣದಲ್ಲಿ ಗ್ರಾಹಕರು 12,499ರೂ. ಗಳಿಗೆ ಲಭ್ಯ ಇದೆ.

ಜಬರ್ದಸ್ತ್‌ ಆಫರ್‌!..ಈ 5G ಮೊಬೈಲ್‌ ಈಗ ಅಗ್ಗದ ಬೆಲೆಗೆ ಲಭ್ಯ!

ಟೆಕ್ನೋ ಪೋವಾ ನಿಯೋ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಇನ್ನುಳಿದಂತೆ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಪೋವಾ ನಿಯೋ 5G ಡಿಸ್‌ಪ್ಲೇ :
ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPS ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಪಡೆದಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದಿದೆ.

ಟೆಕ್ನೋ ಪೋವಾ ನಿಯೋ 5G ಪ್ರೊಸೆಸರ್‌ ಪವರ್‌ :
ಟೆಕ್ನೋ ಪೋವಾ ನಿಯೋ 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್ ಹೊಂದಿದ್ದು, ಮಾಲಿ-G57 GPU ಸಪೋರ್ಟ್‌ ಕೂಡಾ ಪಡೆದಿದೆ.

ಅಲ್ಲದೇ 4GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಅನ್ನು ಹೊಂದಿದ್ದು, ಇದಲ್ಲದೆ ಮೆಮೊರಿ RAM ಫೀಚರ್ಸ್‌ ಮೂಲಕ 3GB ವರೆಗೆ RAM ವಿಸ್ತರಿಸಬಹುದು. ಇದರ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಕೂಡಾ ಪಡೆದಿದೆ.

ಟೆಕ್ನೋ ಪೋವಾ ನಿಯೋ 5G ಕ್ಯಾಮೆರಾ ಸೆನ್ಸಾರ್ :
ಟೆಕ್ನೋ ಪೋವಾ ನಿಯೋ 5G ಮೊಬೈಲ್‌ ಕ್ವಾಡ್ ಫ್ಲ್ಯಾಷ್‌ ಬೆಂಬಲಿಸುವ AI ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಕೂಡಾ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದು 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಟೆಕ್ನೋ ಪೋವಾ ನಿಯೋ 5G ಬ್ಯಾಟರಿ ಮತ್ತು ಇತರೆ ಆಯ್ಕೆಗಳು :
ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೇ 18W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್‌ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ v5.0 ಕನೆಕ್ಟಿವಿಟಿಯನ್ನು ಬೆಂಬಲ ಸಹ ಇದೆ.

ಟೆಕ್ನೋ ಪೋವಾ ನಿಯೋ 5G ಮೆಮೊರಿ ಹಾಗೂ ಕಲರ್‌ ಆಯ್ಕೆ :
ಟೆಕ್ನೋ ಪೋವಾ ನಿಯೋ 5G ಮೊಬೈಲ್‌ 4GB RAM + 128GB ಸ್ಟೋರೇಜ್‌ ವೇರಿಯಂಟ್‌ ಕೂಡಾ ಪಡೆದುಕೊಂಡಿದೆ. ಈ ಮೊಬೈಲ್‌ ಅನ್ನು ಸಪೈರ್‌ ಬ್ಲಾಕ್‌ ಮತ್ತು ಸ್ಪ್ರಿಂಟ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Tecno Pova Neo 5G price down on amazon website. price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+