Home
ಸುದ್ದಿಜಾಲ

ಪ್ರೀಮಿಯಂ ಫೀಚರ್ಸ್‌ ಇರುವ ಟೆಕ್ನೋ ಪೋವಾ ಪ್ರೊ 5G ಸೇಲ್ ಆರಂಭ! ಈ ಬೆಲೆಗೆ ಅಂದ್ರೆ ಅಚ್ಚರಿ ಆಗ್ತೀರಾ!?

ಮಾರುಕಟ್ಟೆಯಲ್ಲಿ ಬಹಳ ಕುತೂಹಲ ಸೃಷ್ಟಿಸಿದ್ದ ಟೆಕ್ನೋದ ಹೊಸ ಪೋವಾ (Pova) ಸರಣಿಯ ಫೋನ್‌ಗಳು ಇಂದಿನಿಂದ ಮಾರಾಟಕ್ಕೆ ಲಭ್ಯ ಇವೆ. ಈ ಸ್ಮಾರ್ಟ್‌ಫೋನ್‌ಗಳ (Smartphone) ಖರೀದಿ ವೇಳೆ ಗ್ರಾಹಕರು ಬ್ಯಾಂಕ್‌ ಆಫರ್‌ ಸೇರಿದಂತೆ ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು(premium smartphone) ಹೆಚ್ಚಿನ ಬೆಲೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾದ ವಿಚಾರ. ಆದರೆ, ಈ ರೀತಿಯ ಫೋನ್‌ಗಳನ್ನು ಲಾಂಚ್‌ ಮಾಡುವ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಟೆಕ್ನೋ ದೊಡ್ಡ ಹೊಡೆತ ನೀಡಿದೆ. ಅಂದರೆ ಅತ್ಯುತ್ತಮ ಫೀಚರ್ಸ್‌ ಆಯ್ಕೆಯ ಫೋನ್‌ಗಳಾದ ಟೆಕ್ನೋ ಪೋವಾ ಪ್ರೊ 5G (Tecno Pova 5 Pro 5G) ಸರಣಿ ಫೋನ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಇವುಗಳ ಸೇಲ್‌ಅನ್ನು ಇಂದಿನಿಂದ ಆರಂಭಿಸಿದೆ. ಹಾಗಿದ್ರೆ, ಇವುಗಳ ಬೆಲೆ ಹಾಗೂ ಫೀಚರ್ಸ್‌ ವಿವರ ನೋಡೋಣ ಬನ್ನಿ.

ಪ್ರೀಮಿಯಂ ಫೀಚರ್ಸ್‌ ಇರುವ ಟೆಕ್ನೋ ಪೋವಾ ಪ್ರೊ 5G ಸೇಲ್ ಆರಂಭ!

ಭಾರತದಲ್ಲಿ ಟೆಕ್ನೋ ಪೋವಾ ಪ್ರೊ 5G ಸೇಲ್‌: ಟೆಕ್ನೋ ಇತ್ತೀಚೆಗೆ ಭಾರತದಲ್ಲಿ ಟೆಕ್ನೋ ಪೋವಾ 5 ಸರಣಿಯ (Tecno Pova 5 series) ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿತ್ತು, ಈ ವಿಭಾಗದಲ್ಲಿ ಎರಡು ಫೋನ್‌ಗಳಿವೆ. ಅಂದರೆ ಒಂದು ಪೋವಾ 5 ಮತ್ತು ಪೋವಾ 5 ಪ್ರೊ 5G(Tecno Pova 5, Tecno Pova 5 Pro 5G). ಈಗ ಈ ಫೋನ್‌ಗಳನ್ನು ಇ-ಕಾಮರ್ಸ್ ವೆಬ್‌ಸೈಟ್ ಆಗಿರುವ ಅಮೆಜಾನ್‌ನಲ್ಲಿ(Amazon) ಖರೀದಿ ಮಾಡಬಹುದಾಗಿದೆ.

ಟೆಕ್ನೋ ಪೋವಾ ಪ್ರೊ 5G ಬೆಲೆ, ಬ್ಯಾಂಕ್ ರಿಯಾಯಿತಿ: ಈ ಫೋನ್‌ ನ(Tecno Pova 5 Pro 5G) 8GB + 128GB ವೇರಿಯಂಟ್‌ಗೆ 14,999ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ 256GB ಟಾಪ್ ಎಂಡ್‌ಗೆ 15,999 ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದ್ದು, ಈ ಫೋನ್‌ ಡಾರ್ಕ್ ಇಲ್ಯೂಷನ್ ಮತ್ತು ಸಿಲ್ವರ್ ಫ್ಯಾಂಟಸಿ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಈ ಫೋನ್‌ನ ಖರೀದಿ ವೇಳೆ ಬಳಕೆದಾರರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದು. ಜೊತೆಗೆ ಎಕ್ಸ್‌ಚೇಂಜ್‌ನಲ್ಲಿ1,000 ರೂ.ಗಳಷ್ಟು ಹೆಚ್ಚುವರಿ ರಿಯಾಯಿತಿ ಸಹ ಲಭ್ಯ ಇದ್ದು ಅಮೆಜಾನ್‌ನಲ್ಲಿ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಮೂಲಕ ಸುಲಭವಾಗಿ ಈ ಫೋನ್‌ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಟೆಕ್ನೋ ಪೋವಾ 5 ಬೆಲೆ ವಿವರ: ಇನ್ನು ಮತ್ತೊಂದು ಫೋನ್‌ ಆಗಿರುವ ಟೆಕ್ನೋ ಪೋವಾ 5 ಫೋನ್‌ನ 8GB + 128GB ಆಯ್ಕೆಯ ಬೆಲೆ 11,999ರೂ.ಗಳಾಗಿದೆ. ಈ ಫೋನ್ ಖರೀದಿ ಮಾಡುವ ವೇಳೆ ವಿನಿಮಯ ಆಫರ್‌ ಬಳಕೆ ಮಾಡಿಕೊಂಡರೆ ಹೆಚ್ಚುವರಿ 1,000ರೂ.ಗಳ ರಿಯಾಯಿತಿ ಪಡೆಯಬಹುದಾಗಿದ್ದು, ಜೊತೆಗೆ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಸಹ ಈ ಫೋನ್‌ ಖರೀದಿ ವೇಳೆ ಲಭ್ಯ. ಇದು ಮೆಚಾ ಬ್ಲಾಕ್, ಅಂಬರ್ ಗೋಲ್ಡ್ ಮತ್ತು ಹರಿಕೇನ್ ಬ್ಲೂ ಎಂಬ ಮೂರು ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಟೆಕ್ನೋ ಪೋವಾ 5 ಸರಣಿ ಫೀಚರ್ಸ್‌: ಟೆಕ್ನೋ ಪೋವಾ 5 ಪ್ರೊ 5G ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಜೊತೆಗೆ 6nm ಡೈಮೆನ್ಸಿಟಿ 6080 ಸಿಪಿಯುನೊಂದಿಗೆ ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್‌ 13 ಆಧಾರಿತ HiOS 13.1 ಅನ್ನು ರನ್‌ ಮಾಡಲಿದೆ.

ಹಾಗೆಯೇ 68W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್‌ ಸೆಲ್ಫಿ ಶೂಟರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಬಹು ಬಣ್ಣದ ಬ್ಯಾಕ್ಲಿಟ್ ಎಲ್ಇಡಿಗಳೊಂದಿಗೆ ಬ್ಯಾಕ್ಲಿಟ್ ಆರ್ಕ್ ಇಂಟರ್ಫೇಸ್ ಆಯ್ಕೆ ಪಡೆದಿರುವುದು ಬಹಳ ವಿಶೇಷ ಎನಿಸಿದೆ.

ಟೆಕ್ನೋ ಪೋವಾ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ IPS ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್‌ ಸಹ ಉತ್ತಮ ಕಾರ್ಯಕ್ಷಮತೆಗಾಗಿ ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ 6nm ಹಿಲಿಯೋ G99 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರಿಂದಾಗಿ ಬಳಕೆದಾರರು ಗೇಮಿಂಗ್‌ ಸಮಯದಲ್ಲಿ ಹಾಗೂ ಸಿನಿಮಾ ವೀಕ್ಷಣೆ ಮಾಡುವಾಗ ಹೊಸ ಅನುಭವ ಲಭ್ಯ.

ಪ್ರೀಮಿಯಂ ಫೀಚರ್ಸ್‌ ಇರುವ ಟೆಕ್ನೋ ಪೋವಾ ಪ್ರೊ 5G ಸೇಲ್ ಆರಂಭ!

ಉಳಿದಂತೆ ಈ ಫೋನ್‌ ಅಂಡ್ರಾಯ್ಡ್‌ 13 ಆಧಾರಿತ HiOS ಅನ್ನು ರನ್‌ ಮಾಡಲಿದ್ದು, 45W ವೈರ್ಡ್ ಚಾರ್ಜಿಂಗ್ ಆಯ್ಕೆಯೊಂದಿಗೆ ಬೃಹತ್ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಲೆನ್ಸ್ ಆಯ್ಕೆಯನ್ನು ಈ ಫೋನ್‌ ಹೊಂದಿದ್ದು, ಉತ್ತಮ ಕ್ಯಾಮೆರಾ ಅನುಭವ ಸಿಗಲಿದೆ.

Best Mobiles in India

English summary
Tecno has given a big blow to smartphone companies. That means the Tecno Pova 5 Pro 5G series of phones with the best features have been launched. These phones are available for purchase from today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+