Home
ಸುದ್ದಿಜಾಲ

ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಟೆಕ್ನೋ ಮೊಬೈಲ್‌ ಕಂಪನಿಯು ಅಗ್ಗದ ಹಾಗೂ ಬಜೆಟ್‌ ದರದಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಅವುಗಳಲ್ಲಿ ಇತ್ತೀಚಿನ ಟೆಕ್ನೋ ಸ್ಪಾರ್ಕ್‌ 10 5G ಫೋನ್‌ ಸಹ ಒಂದಾಗಿದ್ದು, ಇದೀಗ ಈ ಸ್ಮಾರ್ಟ್‌ಫೋನ್ ಅಮೆಜಾನ್‌ ತಾಣದಲ್ಲಿ ಭಾರೀ ಡಿಸ್ಕೌಂಟ್‌ ಪ್ರೈಸ್‌ಟ್ಯಾಗ್‌ ಪಡೆದಿದೆ.

ಹೌದು, ಟೆಕ್ನೋ ಸಂಸ್ಥೆಯು ತನ್ನ ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ಇ ಕಾಮರ್ಸ್‌ ಮಾರುಕಟ್ಟೆಯಲ್ಲಿ ಈಗ 12% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 256GB ಸ್ಟೋರೇಜ್‌ನ ವೇರಿಯಂಟ್‌ 16,999ರೂ. ಗಳ ಪ್ರೈಸ್‌ ಟ್ಯಾಗ್‌ ಹೊಂದಿದ್ದು, 14,999ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಖರೀದಿ ಮಾಡಬಹುದಾಗಿದೆ.

ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಆಫರ್ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಮೊಬೈಲ್‌ ಮೆಟಾ ಬ್ಲೂ, ಮೆಟಾ ಬ್ಲ್ಯಾಕ್ ಹಾಗೂ ಮೆಟಾ ವೈಟ್ ಕಲರ್‌ಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 10 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌, 120Hz ಟಚ್ ಸ್ಯಾಪ್ಲಿಂಗ್‌ ರೇಟ್‌, 480 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇದು 20:15 ರಚನೆಯ ಅನುಪಾತವನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಟೆಕ್ನೋ ಸ್ಪಾರ್ಕ್‌ 10 5G ಪ್ರೊಸೆಸರ್‌ ಯಾವುದು : ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಫ್ಯೂಷನ್ RAM ತಂತ್ರಜ್ಞಾನದಿಂದಾಗಿ RAM ಅನ್ನು 8GB ವರೆಗೆ ವಿಸ್ತರಿಸಬಹುದಾಗಿದೆ.

ಟೆಕ್ನೋ ಸ್ಪಾರ್ಕ್‌ 10 5G ಕ್ಯಾಮೆರಾ ಸೆಟ್‌ಅಪ್‌ : ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ ಅನಿರ್ದಿಷ್ಟ AI ಸೆನ್ಸಾರ್‌ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್‌ 10 5G ಬ್ಯಾಟರಿ ಬ್ಯಾಕ್‌ಅಪ್‌ : ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಫ್ಲಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು 50 ನಿಮಿಷಗಳಲ್ಲಿ 0 ರಿಂದ 50% ತನಕ ಚಾರ್ಜ್‌ ಮಾಡಬಹುದಾಗಿದೆ. ಇನ್ನು ಬ್ಯಾಟರಿ 39 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ.

ಟೆಕ್ನೋ ಸ್ಪಾರ್ಕ್‌ 10 5G ಕಲರ್ ಹಾಗೂ ಮೆಮೊರಿ : ಟೆಕ್ನೋ ಸ್ಪಾರ್ಕ್‌ 10 5G ಸ್ಮಾರ್ಟ್‌ಫೋನ್‌ 4GB RAM + 64GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ. ಈ ಸ್ಮಾರ್ಟ್‌ಫೋನ್ ಮೆಟಾ ಬ್ಲ್ಯಾಕ್‌, ಮೆಟಾ ಬ್ಲೂ, ಮೆಟಾ ವೈಟ್‌ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English summary
Tecno Spark 10 5G available at huge discount Price on Amazon: details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+