ಅಧಿಕ ಸ್ಟೋರೇಜ್ ಸೌಲಭ್ಯದ ಈ ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ!
ಮೊಬೈಲ್ ಮಾರುಕಟ್ಟೆಯಲ್ಲಿ ಟೆಕ್ನೋ ಸಂಸ್ಥೆಯು ಈಗಾಗಲೇ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಟೆಕ್ನೋ ಟೆಕ್ನೋ ಸ್ಪಾರ್ಕ್ 10 ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ಈ ಫೋನ್ ಸಖತ್ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ವಾವ್ ಎನ್ನುವಂತೆ ಮಾಡಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಟೆಕ್ನೋ ಸ್ಪಾರ್ಕ್ 10 ಮೊಬೈಲ್ ಫೋನಿಗೆ ಈಗ ಸಖತ್ ಶೇ. 24% ರಷ್ಟು ರಿಯಾಯಿತಿ ತಿಳಿಸಿದೆ. ಆ ಪೈಕಿ 8 GB RAM + 128 GB ವೇರಿಯಂಟ್‌ನ ಟೆಕ್ನೋ ಸ್ಪಾರ್ಕ್ 10 ಫೋನ್ ಈಗ 10,198 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಇತರೆ ಕೆಲವು ಬ್ಯಾಂಕ್ ಡಿಸ್ಕೌಂಟ್ ಸಹ ಲಭ್ಯ ಆಗಲಿವೆ.

ಅಂದಹಾಗೆ ಟೆಕ್ನೋ ಸ್ಪಾರ್ಕ್ 10 ಫೋನ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಹಾಗಾದರೆ ಟೆಕ್ನೋ ಸ್ಪಾರ್ಕ್ 10 4G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಸ್ಪಾರ್ಕ್ 10 - ಫೀಚರ್ಸ್
ಟೆಕ್ನೋ ಸ್ಪಾರ್ಕ್ 10 ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್ ಆಗಿದ್ದು, 120 Hz ಟಚ್ ಸ್ಯಾಪ್ಲಿಂಗ್ ರೇಟ್, 480 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ 20:15 ರಚನೆಯ ಅನುಪಾತವನ್ನು ಪಡೆದಿದೆ.

ಟೆಕ್ನೋ ಸ್ಪಾರ್ಕ್ 10 4G ಫೋನ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4 GB RAM + 64 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ವರ್ಚುವಲ್ RAM ಅನ್ನು 8GB ವರೆಗೆ ವಿಸ್ತರಿಸುವ ಆಯ್ಕೆ ಇದೆ.
ಟೆಕ್ನೋ ಸಂಸ್ಥೆಯು ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಎರಡನೇ ಕ್ಯಾಮೆರಾ AI ಸೆನ್ಸಾರ್ ಪಡೆದಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಸೆಲ್ಫಿ ಕ್ಯಾಮೆರಾ ಸಹ ನೀಡಲಾಗಿದೆ.
ಟೆಕ್ನೋ ಸ್ಪಾರ್ಕ್ 10 4G ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫ್ಲಾಶ್ ಚಾರ್ಜ್ ಸೌಲಭ್ಯ ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.
ಹಾಗೆಯೇ ಟೆಕ್ನೋ ಸ್ಪಾರ್ಕ್ 10 ಫೋನ್ 4GB RAM + 64 GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಈ ಫೋನ್ ಆರೆಂಜ್ ಕಲರ್ ಆಯ್ಕೆಯನ್ನು ಪಡೆದಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಖರೀದಿಗೆ ಲಭ್ಯ.


Click it and Unblock the Notifications








