ಈ ಅಗ್ಗದ ಮೊಬೈಲ್ ಬೆಲೆಯಲ್ಲಿ ಈಗ ಸಖತ್ ಇಳಿಕೆ!..ಆಫರ್ ಏನಿದೆ?
ದೇಶಿಯ ಫೋನ್ ಮಾರುಕಟ್ಟೆಯಲ್ಲಿ ಟೆಕ್ನೊ ಮೊಬೈಲ್ ಕಂಪೆನಿ ಅಗ್ಗದ ಫೋನ್ ಪರಿಚಯಿಸಿ ಜನಪ್ರಿಯತೆ ಪಡೆದಿದೆ. ಹಾಗೆಯೇ ಸಂಸ್ಥೆಯ ಟೆಕ್ನೋ ಸ್ಪಾರ್ಕ್ 10 ಮೊಬೈಲ್ ಕೂಡಾ ಗ್ರಾಹಕರ ಗಮನ ಸೆಳೆದಿದ್ದು, ಈ ಫೋನ್ ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ರಿಯಾಯಿತಿ ಪಡೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ತಾಣದಲ್ಲಿ ಟೆಕ್ನೋ ಸ್ಪಾರ್ಕ್ 10 ಮೊಬೈಲ್ ಶೇ. 26% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128GB ವೇರಿಯಂಟ್ ಬೆಲೆಯು 13,499ರೂ. ಆಗಿದ್ದು, ಇದೀಗ ಕೊಡುಗೆಯಲ್ಲಿ ಈ ಫೋನ್ ಗ್ರಾಹಕರು 9,999ರೂ. ಗಳ ಸಖತ್ ಡಿಸ್ಕೌಂಟ್ ದರದಲ್ಲಿ ಖರೀದಿ ಮಾಡಬಹುದು.

ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್ ಸಾಮರ್ಥ್ಯ ವನ್ನು ಪಡೆದಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗಾದರೆ ಟೆಕ್ನೋ ಸ್ಪಾರ್ಕ್ 10 ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಸ್ಪಾರ್ಕ್ 10 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಮಾಹಿತಿ ಇಲ್ಲಿದೆ : ಟೆಕ್ನೋ ಸ್ಪಾರ್ಕ್ 10 ಮೊಬೈಲ್ 6.6 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್, 120Hz ಟಚ್ ಸ್ಯಾಪ್ಲಿಂಗ್ ರೇಟ್, 480 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಮಾಡುತ್ತದೆ. ಜೊತೆಗೆ 20:15 ರಚನೆಯ ಅನುಪಾತವನ್ನು ಪಡೆದಿದೆ.
ಟೆಕ್ನೋ ಸ್ಪಾರ್ಕ್ 10 ಪ್ರೊಸೆಸರ್ ಪವರ್ :
ಟೆಕ್ನೋ ಸ್ಪಾರ್ಕ್ 10 4G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM + 64GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ವರ್ಚುವಲ್ RAM ಅನ್ನು 8GB ವರೆಗೆ ವಿಸ್ತರಿಸಬಹುದಾಗಿದೆ.
ಟೆಕ್ನೋ ಸ್ಪಾರ್ಕ್ 10 ಕ್ಯಾಮೆರಾ ರಚನೆ :
ಟೆಕ್ನೋ ಸ್ಪಾರ್ಕ್ 10 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾ AI ಸೆನ್ಸಾರ್ ಪಡೆದಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಸೆಲ್ಫಿ ಕ್ಯಾಮೆರಾ ಸಹ ಇದೆ.
ಟೆಕ್ನೋ ಸ್ಪಾರ್ಕ್ 10 ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ :
ಟೆಕ್ನೋ ಸ್ಪಾರ್ಕ್ 10 4G ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ಫ್ಲಾಶ್ ಚಾರ್ಜ್ ಸೌಲಭ್ಯ ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಬ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಟೆಕ್ನೋ ಸ್ಪಾರ್ಕ್ 10 ಮೆಮೊರಿ ಹಾಗೂ ಕಲರ್ ಆಯ್ಕೆ :
ಟೆಕ್ನೋ ಸ್ಪಾರ್ಕ್ 10 ಫೋನ್ 4GB RAM + 64GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಈ ಫೋನ್ ಆರೆಂಜ್ ಕಲರ್ ಆಯ್ಕೆಯನ್ನು ಪಡೆದಿದ್ದು, ಗ್ರಾಹಕರು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಖರೀದಿಸ ಬಹುದಾಗಿದೆ.


Click it and Unblock the Notifications








