ಮಾರುಕಟ್ಟೆಗೆ ಲಗ್ಗೆ ಇಟ್ಟ ಟೆಕ್ನೋ ಸ್ಪಾರ್ಕ್ 10 ಫೋನ್!..ಫೀಚರ್ಸ್ ಏನು?
ಈಗಾಗಲೇ ಹಲವು ಅಗ್ಗದ ಫೋನ್ ಪರಿಚಯಿಸಿರುವ ಟೆಕ್ನೋ ಮೊಬೈಲ್ ಸಂಸ್ಥೆಯು ಈಗ ಹೊಸದಾಗಿ ಟೆಕ್ನೋ ಸ್ಪಾರ್ಕ್ 10 (4G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಒಳಗೊಂಡಿದೆ.
ಹೌದು, ಟೆಕ್ನೋ ಸಂಸ್ಥೆಯು ಹೊಸದಾಗಿ ಟೆಕ್ನೋ ಸ್ಪಾರ್ಕ್ 10 (4G) ಸ್ಮಾರ್ಟ್‌ಫೋನ್ ಅನ್ನು ಫಿಲಿಫೈನ್ಸ್ ನಲ್ಲಿ ಲಾಂಚ್ ಮಾಡಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 18W ಫ್ಲಾಶ್ ಚಾರ್ಜ್ ಬೆಂಬಲಿಸಲಿದೆ. ಜೊತೆಗೆ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ಇನ್ನು ಈ ಫೋನ್ ಮೂರು ಕಲರ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ ಮೆಟಾ ವೈಟ್, ಮೆಟಾ ಬ್ಲೂ ಮತ್ತು ಮೆಟಾ ಬ್ಲ್ಯಾಕ್ ಆಗಿವೆ. ಅಲ್ಲದೇ ಈ ಫೋನ್ 8GB RAM ಸಪೋರ್ಟ್ ಮಾಡಲಿದೆ. ಹಾಗಾದರೆ ಈ ಟೆಕ್ನೋ ಸ್ಪಾರ್ಕ್ 10 (4G) ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್ 10 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ಟೆಕ್ನೋ ಸ್ಪಾರ್ಕ್ 10 4G ಸ್ಮಾರ್ಟ್‌ಫೋನ್ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್, 120Hz ಟಚ್ ಸ್ಯಾಪ್ಲಿಂಗ್ ರೇಟ್, 480 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸಲಿದೆ. ಇದು 20:15 ರಚನೆಯ ಅನುಪಾತವನ್ನು ಹೊಂದಿದೆ.
ಟೆಕ್ನೋ ಸ್ಪಾರ್ಕ್ 10 ಪ್ರೊಸೆಸರ್ ಯಾವುದು : ಟೆಕ್ನೋ ಸ್ಪಾರ್ಕ್ 10 4G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G37 ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM + 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ವರ್ಚುವಲ್ RAM ಅನ್ನು 8GB ವರೆಗೆ ವಿಸ್ತರಿಸಬಹುದಾಗಿದೆ.

ಟೆಕ್ನೋ ಸ್ಪಾರ್ಕ್ 10 ಕ್ಯಾಮೆರಾ ಸೆಟ್‌ಅಪ್ ಏನಿದೆ : ಟೆಕ್ನೋ ಸ್ಪಾರ್ಕ್ 10 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ ಅನಿರ್ದಿಷ್ಟ AI ಸೆನ್ಸಾರ್ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಟೆಕ್ನೋ ಸ್ಪಾರ್ಕ್ 10 ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ಟೆಕ್ನೋ ಸ್ಪಾರ್ಕ್ 10 4G ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಫ್ಲಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.
ಟೆಕ್ನೋ ಸ್ಪಾರ್ಕ್ 10 ಬೆಲೆ ಮತ್ತು ಲಭ್ಯತೆ : ಟೆಕ್ನೋ ಸ್ಪಾರ್ಕ್ 10 4G ಸ್ಮಾರ್ಟ್‌ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಅವುಗಳು ಕ್ರಮವಾಗಿ ಮೆಟಾ ವೈಟ್, ಮೆಟಾ ಬ್ಲೂ ಮತ್ತು ಮೆಟಾ ಬ್ಲಾಕ್ ಆಗಿವೆ. ಇನ್ನು ಈ ಫೋನ್ 163.89 × 75.39 × 8.40 ಮಿಮೀ ಸುತ್ತಳತೆ ಹೊಂದಿದ್ದು, ಡ್ಯುಯಲ್-ಸಿಮ್, 4G, ವೈಫೈ, ಬ್ಲೂಟೂತ್, NFC ಮತ್ತು GPS ಸೌಲಭ್ಯ ಪಡೆದಿದೆ.


Click it and Unblock the Notifications








