ಬಹಿರಂಗವಾಯ್ತು ಟೆಕ್ನೋ ಸ್ಪಾರ್ಕ್ 20 4G ಡಿಸೈನ್ ! ಡಿಸೈನ್ ನೋಡಿದ್ರೆ ಫಿದಾ ಆಗ್ತೀರಾ!
ಟೆಕ್ನೋ ಕಂಪೆನಿಯ ಫೋನ್‌ಗಳ ಬೆಲೆ ಕಡಿಮೆ ಆಗಿದ್ದರೂ ಸಹ ಫೀಚರ್ಸ್ ವಿಚಾರಗಳಲ್ಲಿ ರಿಚ್ ಆಗಿವೆ. ಇದೇ ಕಾರಣಕ್ಕೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸುವವರು ಟೆಕ್ನೋ ಫೋನ್‌ಗಳಿಗೆ ಮೊದಲ ಅಧ್ಯತೆ ನೀಡುತ್ತಾರೆ. ಅದರಂತೆ ಇದೀಗ ಟೆಕ್ನೋ ಕಂಪೆನಿ ಹೊಸದಾಗಿ ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ.
ಹೌದು, ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದ್ದು, ಬಿಡುಗಡೆಗೂ ಮುನ್ನವೇ ಸ್ಮಾರ್ಟ್‌ಫೋನ್‌ನ ಡಿಸೈನ್ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ ಸ್ಲಿಮ್ ಬೆಜೆಲ್‌ಗಳೊಂದಿಗೆ ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಕಟ್-ಔಟ್ ಹೊಂದಿರಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಸ್ಪಾರ್ಕ್ 20 4G ಡಿಸೈನ್ ನಿರೀಕ್ಷೆ ಏನು?
ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ ಐಫೋನ್-ಪ್ರೇರಿತ ಕ್ಯಾಮೆರಾ ಐಸ್‌ಲ್ಯಾಂಡ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆನ್ಸಾರ್‌ಗಳು ಮತ್ತು ಫ್ಲ್ಯಾಷ್‌ಲೈಟ್ ಅನ್ನು ಒಳಗೊಂಡಿದೆ. ಇದಲ್ಲದೆ ಕ್ಯಾಮೆರಾ ದ್ವೀಪದ ಹೊರತಾಗಿ, ಡಿವೈಸ್‌ನ ಕೆಳಗಿನ ಬಲ ಮೂಲೆಯಲ್ಲಿ ಟೆಕ್ನೋ ಸ್ಪಾರ್ಕ್ ಬ್ರ್ಯಾಂಡಿಂಗ್‌ನೊಂದಿಗೆ ಬರಲಿದೆ. ಇನ್ನು ಮೊಬೈಲ್‌ನ ಮುಂಭಾಗದಲ್ಲಿ ಸ್ಲಿಮ್ ಬೆಜೆಲ್‌ಗಳೊಂದಿಗೆ ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಕಟ್-ಔಟ್ ಹೊಂದಿರಲಿದೆ. ಜೊತೆಗೆ ಈ ಡಿವೈಸ್ ದುಂಡಾದ ಮೂಲೆಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದ್ದು, ಫ್ರೇಮ್‌ನ ಬಲಭಾಗವು ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ಗಳನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ 20 4G ಫೀಚರ್ಸ್ ನಿರೀಕ್ಷೆ ಏನು?
ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ 6.82 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ 120 Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 396 ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರಲಿದೆ ಎಂದು ವರದಿಯಾಗಿದೆ.
ಟೆಕ್ನೋ ಸ್ಪಾರ್ಕ್ 20 4G ಪ್ರೊಸೆಸರ್ ಯಾವುದು?
ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 8GB RAM + 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಜೊತೆಗೆ 8GB ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡುವ ನೀರಿಕ್ಷೆಯಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ.

ಟೆಕ್ನೋ ಸ್ಪಾರ್ಕ್ 20 4G ಕ್ಯಾಮೆರಾ ಸೆಟ್‌ಅಪ್
ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರುವ ನೀರಿಕ್ಷೆಯಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗುತ್ತದೆ.
ಟೆಕ್ನೋ ಸ್ಪಾರ್ಕ್ 20 4G ಬ್ಯಾಟರಿ ಮತ್ತು ಇತರೆ
ಟೆಕ್ನೋ ಸ್ಪಾರ್ಕ್ 20 4G ಸ್ಮಾರ್ಟ್‌ಫೊನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಹಾಗೂ ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರಬಹುದು ಎಂಬ ನಿರೀಕ್ಷೆಯಿದೆ.


Click it and Unblock the Notifications








