Home
ಸುದ್ದಿಜಾಲ

ನಾಳೆ ಎಂಟ್ರಿ ಕೊಡಲಿದೆ 108ಎಂಪಿ ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌!..ಬೆಲೆ ಎಷ್ಟು?

ಬಹುನಿರೀಕ್ಷಿತ ಟೆಕ್ನೋ ಸ್ಪಾರ್ಕ್‌ 20 ಪ್ರೊ 5G (Tecno Spark 20 Pro 5G) ಸ್ಮಾರ್ಟ್‌ಫೋನ್‌ ನಾಳೆ (ಜುಲೈ 9 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಡಲಿದೆ. ಟೆಕ್ನೋ ಸಂಸ್ಥೆಯ ಈ ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯಲ್ಲಿ ಲಗ್ಗೆ ಇಡುವ ಸೂಚನೆಗಳಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವ ಲಕ್ಷಣಗಳನ್ನು ಸೂಚಿಸಿದೆ. ಇನ್ನು ಈ ಮೊಬೈಲ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿರಲಿದ್ದು, ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಹೌದು, ಟೆಕ್ನೋ ಸಂಸ್ಥೆಯ ಟೆಕ್ನೋ ಸ್ಪಾರ್ಕ್‌ 20 ಪ್ರೊ 5G (Tecno Spark 20 Pro 5G) ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಲಾಂಚ್‌ ಆಗಲಿದೆ. ಈ ಫೋನ್‌ ಬಿಡುಗಡೆಯ ಕುರಿತು ದೈತ್ಯ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ಮೈಕ್ರೋ ಸೈಟ್‌ ಕೂಡಾ ತೆರೆದಿದೆ. ಸ್ಟೈಲಿಶ್‌ ಲುಕ್‌ ಜೊತೆಗೆ ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೋನಿ AI ಕ್ಯಾಮೆರಾ ರಚನೆ ಪಡೆದಿರುವುದು ಖಚಿತ ಎಂದು ತಿಳಿದುಬಂದಿದೆ.

ನಾಳೆ ಎಂಟ್ರಿ ಕೊಡಲಿದೆ 108ಎಂಪಿ ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌!..ಬೆಲೆ ಎಷ್ಟು?

ಇನ್ನು ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್‌ 108 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದಿರಲಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಖಚಿತ ಎನ್ನಲಾಗಿದ್ದು, ಹಾಗೆಯೇ 33W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್‌ ನಿರೀಕ್ಷಿತ ಫೀಚರ್ಸ್‌

ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿರಲಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಅಲ್ಲದೇ 120Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಪಡೆದಿರಲಿದೆ.

ಹಾಗೆಯೇ ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್‌ 14GB RAM + 256 GB ಸ್ಟೋರೇಜ್‌ ವರೆಗೂ ಆಯ್ಕೆ ಒಳಗೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ ಇದು ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಇದರ ಮೊದಲ ಕ್ಯಾಮೆರಾವು 108 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ದಲ್ಲಿ ಇರಲಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ನಿರೀಕ್ಷೆ ಇದೆ.

ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಗಳು ಹೆಚ್ಚಿದ್ದು, ಇದಕ್ಕೆ ಅನುಗುಣವಾಗಿ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇರಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ ಒಳಗೊಂಡಂತೆ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಒಳಗೊಂಡಿರಲಿದೆ.

Best Mobiles in India

English summary
TECNO SPARK 20 Pro 5G is launching in india tomorrow. check price, features and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+