Home
ಸುದ್ದಿಜಾಲ

ಹೋಳಿ ಸೇಲ್‌: ಈ ಅಗ್ಗದ ಫೋನಿಗೂ ಭರ್ಜರಿ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಜನಪ್ರಿಯ ಇ ಕಾಮರ್ಸ್‌ ತಾಣ ಆಗಿ ಗುರುತಿಸಿಕೊಂಡಿರುವ ಅಮೆಜಾನ್‌ನಲ್ಲಿ ಈಗ ಹೋಳಿ ಹಬ್ಬದ ಪ್ರಯುಕ್ತ ವಿಶೇಷ ಸೇಲ್‌ ಆಯೋಜಿಸಿದೆ. ಅದುವೇ ಸ್ಮಾರ್ಟ್‌ಫೋನ್‌ ಹೋಳಿ ಸೇಲ್‌ ಆಗಿದ್ದು, ಈ ಮಾರಾಟ ಮೇಳದಲ್ಲಿ ಟೆಕ್ನೋ ಸಂಸ್ಥೆಯ ಕೆಲವು ಆಯ್ದ ಫೋನ್‌ಗಳು ಭಾರೀ ರಿಯಾಯಿತಿ ದರದಲ್ಲಿ ಕಾಣಿಸಕೊಂಡಿವೆ. ಆ ಪೈಕಿ ಅತೀ ಅಗ್ಗದ ಬೆಲೆಯಲ್ಲಿ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ ಇದೆ.

ಹೌದು, ಅಮೆಜಾನ್‌ ತಾಣದ ಹೋಳಿ ಹಬ್ಬದ ಸೇಲ್‌ನಲ್ಲಿ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್‌ ಶೇ 14% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 16GB* + 128GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 8,999ರೂ. ಗಳಿಗೆ ಲಭ್ಯ ಇದೆ. ಅಲ್ಲದೇ ಅಮೆಜಾನ್‌ನಲ್ಲಿ ಲಭ್ಯವಾಗುವ ಇತರೆ ಕೊಡುಗೆಗಳನ್ನು ಪಡೆದುಕೊಂಡರೆ, ಈ ಫೋನ್‌ ಅನ್ನು 6,999ರೂ. ಗಳಿಗೆ ಖರೀದಿಸಬಹುದು.

ಹೋಳಿ ಸೇಲ್‌: ಈ ಅಗ್ಗದ ಫೋನಿಗೂ ಭರ್ಜರಿ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಉಳಿದಂತೆ ಈ ಮೊಬೈಲ್‌ 8GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, ಹೆಚ್ಚುವರಿಯಾಗಿ 8GB ವರ್ಚುವಲ್ RAM ಸೌಲಭ್ಯ ಸಹ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್‌ 50 ಮೆಗಾ ಪಿಕ್ಸಲ್‌ ಮುಖ್ಯ ಕ್ಯಾಮೆರಾ ರಚನೆ ಕೂಡಾ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್ 20C - ಫೀಚರ್ಸ್‌ ಹೀಗಿವೆ

ಈ ಮೊಬೈಲ್‌ 6.6 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇಯು 720×1612 ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಆಯ್ಕೆ ಹೊಂದಿದೆ. ಅಲ್ಲದೇ ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದ್ದು, ಇದಲ್ಲದೆ ಡಿಸ್‌ಪ್ಲೇ ಸೆಂಟರ್ಡ್ ಪಂಚ್ ಹೋಲ್ ನಾಚ್, ಮತ್ತು ಡೈನಾಮಿಕ್ ಪೋರ್ಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಅದೇ ರೀತಿ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಅಲ್ಲದೇ ಈ ಫೋನ್‌ PowerVR GE8320 GPU ಬೆಂಬಲ ಕೂಡಾ ಪಡೆದುಕೊಂಡಿದೆ. ಹಾಗೆಯೇ 8GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, ಹೆಚ್ಚುವರಿಯಾಗಿ 8GB ವರ್ಚುವಲ್ RAM ಸೌಲಭ್ಯ ಸಹ ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ 20 ಫೋನ್‌ ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದು PDAF ಮತ್ತು HDR AI ಲೆನ್ಸ್ ಮತ್ತು ಡ್ಯುಯಲ್ LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಸಹ ಒಳಗೊಂಡಿದೆ. ಇದರೊಂದಿಗೆ ಡ್ಯುಯಲ್ ಫ್ಲ್ಯಾಷ್‌ ಅನ್ನು ಸಹ ಒದಗಿಸಲಾಗಿದೆ.

ಟೆಕ್ನೋ ಸ್ಪಾರ್ಕ್ 20C ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿದ್ದು, ಇದು 18W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ನೀಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಹಾಗೂ ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ 20C ಫೋನ್‌ 8GB + 128GB ವೇರಿಯಂಟ್‌ ಆಯ್ಕೆ ಪಡೆದಿದೆ. ಅಲ್ಲದೇ ಈ ಫೋನ್‌ ಬ್ಲ್ಯಾಕ್‌, ಗ್ರೀನ್‌ ಹಾಗೂ ವೈಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಇನ್ನು ಫೋನ್‌ ಅನ್ನು ಅಮೆಜಾನ್‌ ತಾಣದ ಮೂಲಕ ಖರೀದಿಸಬಹುದು.

Best Mobiles in India

English summary
TECNO Spark 20C available at discount price at amazon HOLI store. check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+