Home
ಸುದ್ದಿಜಾಲ

ಇಂದು Tecno Spark 30C 5G ಬಿಡುಗಡೆ: ಅಗ್ಗದ ಬೆಲೆ.. ವಿಶೇಷತೆಗಳೇನು?

ಟೆಕ್ನೋ (Tecno) ಕಂಪನಿಯು ಇಂದು ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಲಿದೆ. ಇದು ಟೆಕ್ನೋ ಸ್ಪಾರ್ಕ್ 30C 5G (Tecno Spark 30C 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫೋನನ್ನು ಸ್ಪಾರ್ಕ್ 30 ಸರಣಿಯ ಅಡಿಯಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಂಪನಿಯು, ನೂತನ ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್‌ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಲಿದೆ. ಬನ್ನಿ ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಂಪನಿಗಳ 5G ಮೊಬೈಲ್‌ ಸದ್ದು ಮಾಡುತ್ತಿವೆ. ಈ ಸಾಲಿಗೆ ಟೆಕ್ನೋ ಸ್ಪಾರ್ಕ್ 30C 5G ಕೂಡ ಸೇರ್ಪಡೆಯಾಗಲಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ, ಮೀಡಿಯಾಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌, 128GB ಸ್ಟೋರೇಜ್, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಇಂದು Tecno Spark 30C 5G ಬಿಡುಗಡೆ: ಅಗ್ಗದ ಬೆಲೆ.. ವಿಶೇಷತೆಗಳೇನು?

ಟೆಕ್ನೋ ಸ್ಪಾರ್ಕ್ 30C 5G ಫೋನಿನ ವಿನ್ಯಾಸ

ಕಡಿಮೆ ಬಜೆಟ್‌ನ ಹೊರತಾಗಿಯೂ ಈ ಫೋನ್ ಸ್ಟೈಲಿಶ್ ಲುಕ್‌ ಹೊಂದಿದೆ. ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಅನ್ನು ಪಂಚ್ ಹೋಲ್ ನಾಚ್ ಡಿಸ್ಪ್ಲೇಯೊಂದಿಗೆ ಪರಿಚಯಿಸುತ್ತಿದೆ. ಈ ಡಿಸ್ಪ್ಲೇಯು ಸಮತಟ್ಟಾಗಿದೆ ಮತ್ತು ಬೆಜೆಲ್‌ಗಳು ತೆಳ್ಳಗಿರುವುದನ್ನು ಕಾಣಬಹುದು. ಹಿಂದಿನ ಪ್ಯಾನೆಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಜೊತೆಗೆ, ರಿಂಗ್ ಎಲ್ಇಡಿ ಲೈಟ್ ಕೂಡ ಕಾಣಬಹುದು. ಈ ಫೋನ್ ಕಪ್ಪು ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.

ಟೆಕ್ನೋ ಸ್ಪಾರ್ಕ್ 30C 5G ಬಿಡುಗಡೆ ವಿವರ

ಕಂಪನಿಯು ಟೀಸರ್ ಮೂಲಕ ಟೆಕ್ನೋ ಸ್ಪಾರ್ಕ್ 30C 5G ಫೋನಿನ ಭಾರತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿತ್ತು. ಅದರಂತೆ, ಇಂದು (ಅಕ್ಟೋಬರ್ 8) ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಕ್ರೇಜಿ ರಿಲಯಬಲ್ ಎಂಬ ಅಡಿಬರಹದೊಂದಿಗೆ ಬರುತ್ತದೆ. ಕಂಪನಿಯು ಈ ಮೊಬೈಲ್‌ ಅನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಟೆಕ್ನೋ ಹಂಚಿಕೊಂಡಿರುವ ಟೀಸರ್ ಮೂಲಕ ಈ ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಕಡಿಮೆ ಬೆಲೆಗೆ Realme 12x 5G ಮಾರಾಟ: ಜೊತೆಗೆ ಸಖತ್ ಡಿಸ್ಕೌಂಟ್.. ಖರೀದಿ ಎಲ್ಲಿ?

ಟೆಕ್ನೋ ಸ್ಪಾರ್ಕ್ 30C 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಸ್ಪಾರ್ಕ್ 30C 5G ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 720 x 1,600 ಪಿಕ್ಸೆಲ್‌ ರೆಸಲ್ಯೂಶನ್, ಇದು 120Hz ರಿಫ್ರೆಶ್ ದರದೊಂದಿಗೆ ಬರುವ ಸಾಧ್ಯತೆಯಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಅನ್ನು ಮೀಡಿಯಾಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಪರಿಚಯಿಸಲಿದೆ. ಇದು 8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದನ್ನು 4GB RAM + 128GB, 6GB RAM + 128GB, 4GB RAM + 256GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿದೆ.

ಕ್ಯಾಮೆರೆ ಸೆಟಪ್

ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿರಲಿದೆ. ಮುಂಭಾಗದಲ್ಲಿ ಇದು, ಡ್ಯುಯಲ್ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿರಲಿದೆ.

ಬ್ಯಾಟರಿ ಬ್ಯಾಕಪ್

ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ನಿರೀಕ್ಷೆಯಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಲಿದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಸಹ ಪಡೆದಿರಲಿದೆ.

Best Mobiles in India

English summary
Tecno Spark 30C 5G Launching in India Today: know price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+