Home
ಸುದ್ದಿಜಾಲ

ಹೊಸ ಟೆಕ್ನೋ ಸ್ಪಾರ್ಕ್ 6 ಏರ್‌ ಫೋನ್ ಈಗ ಮತ್ತೊಂದು ವೇರಿಯಂಟ್‌ನಲ್ಲಿ ಲಭ್ಯ!

ಟೆಕ್ನೋ ಮೊಬೈಲ್ ಕಂಪನಿಯು ಇತ್ತೀಚಿಗಷ್ಟೆ ಹೊಸದಾಗಿ 'ಟೆಕ್ನೋ ಸ್ಪಾರ್ಕ್ 6 ಏರ್‌' ಹೆಸರಿನ ಬಜೆಟ್‌ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ 6,000mAh ಬ್ಯಾಟರಿ ಪವರ್‌ ಪಡೆದಿದೆ. ಟೆಕ್ನೋ ಕಂಪೆನಿ ಇದೀಗ 10,000ರೂ. ಒಳಗೆ ಹೊಸದಾಗಿ ಮತ್ತೊಂದು ವೇರಿಯಂಟ್‌ ಬಿಡುಗಡೆ ಮಾಡಿದೆ.

ಕಂಪನಿ

ಹೌದು, ಟೆಕ್ನೋ ಕಂಪನಿ 'ಟೆಕ್ನೋ ಸ್ಪಾರ್ಕ್ 6 ಏರ್‌' ಸ್ಮಾರ್ಟ್‌ಫೋನಿನಲ್ಲಿ ಈಗ ಹೊಸದಾಗಿ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ವೇರಿಯಂಟ್ ಲಾಂಚ್ ಮಾಡಿದೆ. ಈ ಫೋನ್ 7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇನ್ನು ಹೊಸ 3GB RAM ವೇರಿಯಂಟ್ ದರವು 8,499ರೂ.ಗಳಾಗಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 720 x 1640 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ವಾಟರ್‌ಡ್ರಾಪ್ ನಾಚ್ ಡಿಸೈನ್ ಹೊಂದಿದ್ದು, ಡಿಸ್‌ಪ್ಲೇಯ ಬ್ರೈಟ್ನೆಸ್ ಸಹ ತನ್ನ ವರ್ಗದಲ್ಲಿಯೇ ಉನ್ನತವಾಗಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90% ಆಗಿದೆ.

ಪ್ರೊಸೆಸರ್ ಕೆಲಸ

ಪ್ರೊಸೆಸರ್ ಕೆಲಸ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, HiOS 6.0 ಆಧಾರಿತ ಆಂಡ್ರಾಯ್ಡ್‌ 10 ಗೋ ಎಡಿಷನ್ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 2GB RAM ಮತ್ತು 3GB RAM ಹಾಗೂ 32GB ಆಂತರಿಕ ಸ್ಟೋರೇಜ್ ಆಯ್ಕೆ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಹಿಂಬದಿಯ ರಿಯರ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದ್ದು, ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೂ ಇದರೊಂದಿಗೆ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, ವಿಡಿಯೊ ಕಾಲಿಂಗ್‌ಗೆ ಪೂರಕವಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಇದರೊಂದಿಗೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು, ಮತ್ತು 4G VoLTE, HiOS skin, ಆಂಡ್ರಾಯ್ಡ್ 10 ಗೋ ಓಎಸ್‌ ಸಪೋರ್ಟ್ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್‌ನ ಒಂದೇ ವೇರಿಯಂಟ್ ಮಾದರಿಯಲ್ಲಿ ಲಾಂಚ್ ಆಗಿದೆ. ಇದರ ಬೆಲೆಯು 7,999ರೂ.ಗಳು ಆಗಿದೆ. ಇನ್ನೂ 3GB RAM ವೇರಿಯಂಟ್ ಬೆಲೆಯು 8,499ರೂ. ಆಗಿದೆ. ಹಾಗೆಯೇ ಈ ಫೋನ್ ಕಾಮೆಟ್‌ ಬ್ಲ್ಯಾಕ್‌ ಮತ್ತು ಓಶಿಯನ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Tecno Spark 6 Air The 3GB + 32GB storage model is priced in India at Rs. 8,499.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+