7,999ರೂ.ಗೆ 7 ಇಂಚಿನ ಡಿಸ್‌ಪ್ಲೇಯ ಟೆಕ್ನೋ ಸ್ಪಾರ್ಕ್ 6 ಏರ್‌ ಫೋನ್ ಲಾಂಚ್!

|

ಟೆಕ್ನೋ ಮೊಬೈಲ್ ಕಂಪನಿಯು ಅಗ್ಗದ ಬೆಲೆ ಸ್ಮಾರ್ಟ್‌ಫೋನ್‌ಗಳ ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅವುಗಳಲ್ಲಿ 'ಟೆಕ್ನೋ ಸ್ಪಾರ್ಕ್ ಏರ್' ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಹಮನ ಸೆಳೆದಿವೆ. ಇದೀಗ ಟೆಕ್ನೋ ಸಂಸ್ಥೆಯು ಸ್ಪಾರ್ಕ್ ಸರಣಿಯಲ್ಲಿ ಮತ್ತೆ 'ಟೆಕ್ನೋ ಸ್ಪಾರ್ಕ್ 6 ಏರ್‌' ಹೆಸರಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸಹ ಬಜೆಟ್‌ ಬೆಲೆಯನ್ನು ಹೊಂದಿದೆ.

ಟೆಕ್ನೋ ಕಂಪನಿ

ಹೌದು, ಟೆಕ್ನೋ ಕಂಪನಿಯು ಇದೀಗ ಮಾರುಕಟ್ಟೆಗೆ ಹೊಸದಾಗಿ 'ಟೆಕ್ನೋ ಸ್ಪಾರ್ಕ್ 6 ಏರ್‌' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ವೇರಿಯಂಟ್ ಆಯ್ಕೆ ಹೊಂದಿದೆ. ಈ ಫೋನಿನ ವಿಶೇಷ ಆಕರ್ಷಣೆಯೆಂದರೇ ಡಿಸ್‌ಪ್ಲೇ ಮತ್ತು ಬ್ಯಾಟರಿ ಆಗಿದ್ದು, ಡಿಸ್‌ಪ್ಲೇಯು 7 ಇಂಚಿನ ಹೆಚ್‌ಡಿ ಪ್ಲಸ್‌ ಸಾಮರ್ಥ್ಯದಲ್ಲಿದೆ ಹಾಗೂ ಬ್ಯಾಟರಿಯು 6,000mAh ಸಾಮರ್ಥ್ಯದಲ್ಲಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 720 x 1640 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ವಾಟರ್‌ಡ್ರಾಪ್ ನಾಚ್ ಡಿಸೈನ್ ಹೊಂದಿದ್ದು, ಡಿಸ್‌ಪ್ಲೇಯ ಬ್ರೈಟ್ನೆಸ್ ಸಹ ತನ್ನ ವರ್ಗದಲ್ಲಿಯೇ ಉನ್ನತವಾಗಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90% ಆಗಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, HiOS 6.0 ಆಧಾರಿತ ಆಂಡ್ರಾಯ್ಡ್‌ 10 ಗೋ ಎಡಿಷನ್ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 2GB RAM ಮತ್ತು 32GB ಆಂತರಿಕ ಸ್ಟೋರೇಜ್ ಆಯ್ಕೆ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಹಿಂಬದಿಯ ರಿಯರ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದ್ದು, ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೂ ಇದರೊಂದಿಗೆ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, ವಿಡಿಯೊ ಕಾಲಿಂಗ್‌ಗೆ ಪೂರಕವಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಇದರೊಂದಿಗೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು, ಮತ್ತು 4G VoLTE, HiOS skin, ಆಂಡ್ರಾಯ್ಡ್ 10 ಗೋ ಓಎಸ್‌ ಸಪೋರ್ಟ್ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಟೆಕ್ನೋ ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್‌ನ ಒಂದೇ ವೇರಿಯಂಟ್ ಮಾದರಿಯಲ್ಲಿ ಲಾಂಚ್ ಆಗಿದೆ. ಇದರ ಬೆಲೆಯು 7,999ರೂ.ಗಳು ಆಗಿದೆ. ಇನ್ನೂ ಈ ಫೋನ್ ಕಾಮೆಟ್‌ ಬ್ಲ್ಯಾಕ್‌ ಮತ್ತು ಓಶಿಯನ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

Most Read Articles
Best Mobiles in India

English summary
TECNO Spark 6 Air is priced at Rs 7,999 for the single model with 2GB RAM and 32GB internal storage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X