ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ ಲಾಂಚ್: ವಿಶೇಷತೆ ಏನು?

|

ಹಾಂಗ್‌ಕಾಂಗ್ ಮೂಲದ 'ಟೆಕ್ನೋ' ಸಂಸ್ಥೆಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ಅನಾವರಣ ಮಾಡಿರುವ ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ.

ಮಾರುಕಟ್ಟೆಗೆ

ಹೌದು, ಟೆಕ್ನೋ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಈಗ ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ A25 SoC ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಪಡೆದಿದೆ. ಇದರೊಂದಿಗೆ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಇದೇ ಡಿಸೆಂಬರ್‌ 25ರಿಂದ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 720x1,600 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ 20:9 ಅನುಪಾತವನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ 480 nits ಬ್ರೈಟ್ನೆಸ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಕೆಲಸ

ಪ್ರೊಸೆಸರ್ ಕೆಲಸ

ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, HiOS 6.2 ಆಧಾರಿತ ಆಂಡ್ರಾಯ್ಡ್‌ 10 ಗೋ ಎಡಿಷನ್ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ ಈ ಫೋನ್ 4GB RAM + 64GB ಸ್ಟೋರೇಜ್ ಸಿಂಗಲ್‌ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಹಿಂಬದಿಯ ರಿಯರ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದ್ದು, ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೂ ಇದರೊಂದಿಗೆ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, ವಿಡಿಯೊ ಕಾಲಿಂಗ್‌ಗೆ ಪೂರಕವಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಇದರೊಂದಿಗೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು, ಮತ್ತು 4G VoLTE, HiOS skin, ಆಂಡ್ರಾಯ್ಡ್ 10 ಗೋ ಓಎಸ್‌ ಸಪೋರ್ಟ್ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಟೆಕ್ನೋ ಸ್ಪಾರ್ಕ್ 6 ಗೋ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್‌ನ ಒಂದೇ ವೇರಿಯಂಟ್ ಮಾದರಿಯಲ್ಲಿ ಲಾಂಚ್ ಆಗಿದೆ. ಇದರ ಬೆಲೆಯು 8,699 ರೂ.ಗಳು ಆಗಿದೆ. ಆರಂಭಿಕ ಕೊಡುಗೆಯಾಗಿ 8,499ರೂ.ಗಳಿಗೆ ಸಿಗಲಿದೆ. ಹಾಗೆಯೇ ಈ ಫೋನ್ ಮಿಸ್ಟ್ರೀ ವೈಟ್, ಅಕ್ವಾ ಬ್ಲೂ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Tecno Spark 6 Go price in India is set at Rs. 8,699, though it is initially available at Rs. 8,499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X