ಟೆಕ್ನೋ ಸ್ಪಾರ್ಕ್ 7P ಫೋನ್ ಅನಾವರಣ!..5,000mAh ಬ್ಯಾಟರಿ!
ಟೆಕ್ನೋ ಮೊಬೈಲ್ ಕಂಪನಿಯು ಅಗ್ಗದ ದರದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಆ ಪೈಕಿ ಕಂಪನಿಯ 'ಟೆಕ್ನೋ ಸ್ಪಾರ್ಕ್' ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಗ್ರಾಹಕರ ಗಮನ ಸೆಳೆದಿವೆ. ಅದೇ ಸರಣಿಯಲ್ಲಿ ಕಂಪನಿಯು ಇತ್ತೀಚಿಗೆ 'ಟೆಕ್ನೋ ಸ್ಪಾರ್ಕ್ 7' ಫೋನ್ ಅನ್ನು ಅನಾವರಣ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಟೆಕ್ನೋ ಸಂಸ್ಥೆಯು ಸ್ಪಾರ್ಕ್ ಸರಣಿಯಲ್ಲಿ ಮತ್ತೆ 'ಟೆಕ್ನೋ ಸ್ಪಾರ್ಕ್ 7P' ಹೆಸರಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.

ಹೌದು, ಟೆಕ್ನೋ ಕಂಪನಿಯು ಇದೀಗ ಮಾರುಕಟ್ಟೆಗೆ ಹೊಸದಾಗಿ 'ಟೆಕ್ನೋ ಸ್ಪಾರ್ಕ್ 7P' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 64GB ಮತ್ತು 128GB ಸ್ಟೋರೇಜ್ ಸಾಮರ್ಥ್ಯ ವೇರಿಯಂಟ್ ಆಯ್ಕೆ ಹೊಂದಿದೆ. ಈ ಫೋನಿನ ವಿಶೇಷ ಆಕರ್ಷಣೆಯೆಂದರೇ ಡಿಸ್‌ಪ್ಲೇ ಮತ್ತು ಬ್ಯಾಟರಿ ಆಗಿದ್ದು, ಡಿಸ್‌ಪ್ಲೇಯು 6.8 ಇಂಚಿನ ಹೆಚ್‌ಡಿ ಪ್ಲಸ್ ಸಾಮರ್ಥ್ಯದಲ್ಲಿದೆ ಹಾಗೂ ಬ್ಯಾಟರಿಯು 5,000mAh ಸಾಮರ್ಥ್ಯದಲ್ಲಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ
ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ 6.8 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಹೆಚ್‌ಡಿ ಪ್ಲಸ್ ಪಿಕ್ಸಲ್ ರೆಸಲ್ಯೂಶನ್ 1640 x 720 ಸಾಮರ್ಥ್ಯದಲ್ಲಿದೆ. ಈ ಪೋನಿನ ಡಿಸ್‌ಪ್ಲೇಯ ಅನುಪಾತವು 20.5:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಸ್ಕ್ರೀನ್ ರೀಫ್ರೇಶ್ ರೇಟ್ 90Hz ಆಗಿದೆ. ಹಾಗೆಯೇ ವಾಟರ್‌ಡ್ರಾಪ್ ನಾಚ್ ಡಿಸೈನ್ ಅನ್ನು ಪಡೆದಿದೆ.

ಪ್ರೊಸೆಸರ್ ಕಾರ್ಯ
ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G70 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲ ಪಡೆದಿದೆ. ಇದರೊಂದಿಗೆ 4GB RAM ಸಾಮರ್ಥ್ಯದೊಂದಿಗೆ 64GB ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ತ್ರಿವಳಿ ಕ್ಯಾಮೆರಾ ರಚನೆ
ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಹಿಂಬದಿಯ ರಿಯರ್ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದ್ದು, ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದ್ದು, ತೃತೀಯ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಪಡೆದಿದೆ. ಹಾಗೆಯೇ ಇದರೊಂದಿಗೆ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದ್ದು, ಕ್ವಾಡ್ ಎಲ್‌ಇಡಿ ಫ್ಲ್ಯಾಶ್ ವ್ಯವಸ್ಥೆ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಇದರೊಂದಿಗೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು, ಮತ್ತು 4G VoLTE, HiOS skin, ಆಂಡ್ರಾಯ್ಡ್ 10 ಗೋ ಓಎಸ್ ಸಪೋರ್ಟ್ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು?
ಟೆಕ್ನೋ ಸ್ಪಾರ್ಕ್ 7P ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯದೊಂದಿಗೆ 64GB ಮತ್ತು 128GB ಸ್ಟೋರೇಜ್‌ನ ವೇರಿಯಂಟ್ ಮಾದರಿಯಲ್ಲಿ ಲಾಂಚ್ ಆಗಿದೆ. ಇನ್ನೂ ಈ ಫೋನ್ ಆಲ್ಪ್ಸ್ ಬ್ಲೂ, ಸ್ಪ್ರೂಸ್ ಗ್ರೀನ್, ಮ್ಯಾಗ್ನೆಟ್ ಬ್ಲ್ಯಾಕ್ ಮತ್ತು ಸಮ್ಮರ್ ಮೊಜಿತೊ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications